Wednesday, May 8, 2024

ರಾಷ್ಟ್ರದ ಹಿತಕ್ಕಾಗಿ ಮೋದಿ ಮತ್ತೆ ಪ್ರಧಾನಿ ಆಗಬೇಕು: ಸಿ.ಟಿ ರವಿ

ಚಿಕ್ಕಮಗಳೂರು: ರಾಷ್ಟ್ರದ ಹಿತಕ್ಕಾಗಿ ಮೋದಿ 3ನೇ ಬಾರಿ ಪ್ರಧಾನಿಯಾಗಬೇಕು ಎಂದು ಸಿ.ಟಿ ರವಿ ಹೇಳಿದ್ದಾರೆ.

ಸುದ್ದಿಗಾರೊಂದಿಗೆ ಮಾತನಾಡಿದ ಅವರು,ಪಕ್ಷ-ರಾಷ್ಟ್ರದ ಹಿತಕ್ಕಾಗಿ ಬಹಳ ವಿಷಯಗಳನ್ನ ನುಂಗಿಕೊಂಡಿದ್ದೇನೆ. ಬಹಳ ದಿನ ಹೊಟ್ಟೆಯಲ್ಲಿ ಇಟ್ಟುಕೊಳ್ಳಲು ಆಗಲ್ಲ,ಸಮಯ ಬರಲಿ ಎಲ್ಲಾ ಹೇಳ್ತೀನಿ ಎಂದರು. ವೈಯಕ್ತಿಕ ನೆಲೆಯಲ್ಲಿ ರಾಜಕಾರಣ ಮಾಡೋದಾದ್ರು ಲೋಕ ಚುನಾವಣೆ ನಂತರವೇ. ಲೋಕಸಭೆ ಚುಣಾವಣೆ ಬಳಿಕ ಯಾರ್ಯಾರು ವಿಧಾನಸಭೆ ಚುನಾವಣೆಯಲ್ಲಿ ಹೇಗೆ ನಡೆದುಕೊಂಡಿದ್ದರು ಎಂದರು.

ಲೋಕ ಚುನಾವಣೆ ಬಳಿಕ ಬಹಳ ವಿಷಯ ಹೇಳಲು ಇದೆ, ಹೇಳ್ತೀನಿ, ಹೇಳಲೇಬೇಕು.ಈಗ ಪ್ರಧಾನಿ ಮೋದಿ ಮತ್ತೊಮ್ಮೆ ಪ್ರಧಾನಿ ಆಗಬೇಕು ಅದೊಂದೆ ಗುರಿ ಇರೋದು.ರಾಜ್ಯದ 28 ಸ್ಥಾನವನ್ನೂ ಬಿಜೆಪಿ ಗೆಲ್ಲಬೇಕು, ಅದಕ್ಕೆ ಅಳಿಲು ಸೇವೆ ಮಾಡೋದಷ್ಟೆ ನಮ್ಮ ಕೆಲಸ ಎಂದರು.

RELATED ARTICLES

Related Articles

TRENDING ARTICLES