Wednesday, May 8, 2024

50 ವಯಸ್ಸಿನ 12, 60 ವಯಸ್ಸಿನ 8, 70 ವಯಸ್ಸಿನ 12, 76 ವಯಸ್ಸಿನ 7 ಅಭ್ಯರ್ಥಿಗಳಿಗೆ ಕಾಂಗ್ರೆಸ್ ಟಿಕೆಟ್

ಬೆಂಗಳೂರು : 2024ರ ಲೋಕಸಭಾ ಚುನಾವಣೆಗೆ ಕಾಂಗ್ರೆಸ್​ ಸಿಇಸಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ 39 ಹೆಸರುಗಳನ್ನು ಘೋಷಣೆ ಮಾಡಿದೆ.

ಈ ಪಟ್ಟಿಯಲ್ಲಿ 50 ವಯಸ್ಸಿನ 12, 60 ವಯಸ್ಸಿನ 8, 70 ವಯಸ್ಸಿನ 12, 76 ವಯಸ್ಸಿನ 7 ಅಭ್ಯರ್ಥಿಗಳಿಗೆ ಕಾಂಗ್ರೆಸ್​ ಮಣೆ ಹಾಕಿದೆ. ಯಾವ ಲೆಕ್ಕಾಚಾರದಲ್ಲಿ ಕೈ ನಾಯಕರು ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನುವುದು ನಿಗೂಢವಾಗಿದೆ.

ಅಭ್ಯರ್ಥಿಗಳ ವಯಸ್ಸು ?

  • 12 ಅಭ್ಯರ್ಥಿಗಳು 50 ವರ್ಷಕ್ಕಿಂತ ಕಡಿಮೆ ವಯಸ್ಸಿನವರು
  • 8 ಅಭ್ಯರ್ಥಿಗಳು 50 ರಿಂದ 60 ವಯಸ್ಸಿನವರು
  • 12 ವಯಸ್ಸಿನವರು 61 ರಿಂದ 70 ವಯಸ್ಸಿನವರು
  • 7 ಅಭ್ಯರ್ಥಿಗಳು 71 ರಿಂದ 76 ವಯಸ್ಸಿನವರು

ಯಾವ ವರ್ಗಕ್ಕೆ ಎಷ್ಟು ಟಿಕೆಟ್?

  • 15 ಅಭ್ಯರ್ಥಿಗಳು ಸಾಮಾನ್ಯ ವರ್ಗದಿಂದ ಬಂದವರು
  • 24 ಅಭ್ಯರ್ಥಿಗಳು SC, ST, OBC ಮತ್ತು ಅಲ್ಪಸಂಖ್ಯಾತರು

ಕರ್ನಾಟಕದ ಅಭ್ಯರ್ಥಿಗಳು

  • ಬೆಂಗಳೂರು ಗ್ರಾಮಾಂತರ : ಡಿ.ಕೆ. ಸುರೇಶ್ (57 ವರ್ಷ)
  • ಶಿವಮೊಗ್ಗ : ಗೀತಾ ಶಿವರಾಜ್ ಕುಮಾರ್ (58 ವರ್ಷ)
  • ತುಮಕೂರು : ಎಸ್‌.ಪಿ. ಮುದ್ದ ಹನುಮೇಗೌಡ (69 ವರ್ಷ)
  • ಹಾಸನ : ಎಂ. ಶ್ರೇಯಸ್ ಪಟೇಲ್ (32 ವರ್ಷ)
  • ವಿಜಯಪುರ : ರಾಜು ಅಲಗೂರ್ (ಎಚ್‌.ಆರ್. ಅಲಗೂರ್) (63 ವರ್ಷ)
  • ಮಂಡ್ಯ : ವೆಂಕಟರಾಮೇಗೌಡ (ಸ್ಟಾರ್ ಚಂದ್ರು) (59 ವರ್ಷ)
  • ಹಾವೇರಿ : ಅನಂದಸ್ವಾಮಿ ಗಡ್ಡೇವರಮಠ (47 ವರ್ಷ)

RELATED ARTICLES

Related Articles

TRENDING ARTICLES