Sunday, May 19, 2024

ಕೇಸರಿ ಜೆರ್ಸಿಯಲ್ಲಿ ಭಾರತ : ಟಿ-20 ವಿಶ್ವಕಪ್​ಗಾಗಿ ನೂತನ ಜೆರ್ಸಿ ಬಿಡುಗಡೆ

ಬೆಂಗಳೂರು : ಮುಂಬರುವ ಟಿ-20 ವಿಶ್ವಕಪ್​ಗಾಗಿ ಭಾರತ ಕ್ರಿಕೆಟ್ ತಂಡದ ನೂತನ ಜೆರ್ಸಿಯನ್ನು ಅನಾವರಣಗೊಳಿಸಲಾಗಿದೆ.

ಅಮೆರಿಕ ಮತ್ತು ವೆಸ್ಟ್ ಇಂಡೀಸ್ ನಲ್ಲಿ ಮುಂದಿನ ತಿಂಗಳು ಬಹು ನಿರೀಕ್ಷಿತ ಟಿ-20 ವಿಶ್ವಕಪ್ ಟೂರ್ನಿ ನಡೆಯಲಿದೆ. ಹೀಗಾಗಿ, ಟೀಂ ಇಂಡಿಯಾದ ಹೊಸ ಜೆರ್ಸಿಯನ್ನು ಬಿಡುಗಡೆ ಮಾಡಲಾಗಿದೆ.

ಧರ್ಮಶಾಲಾದ HPCA ಸ್ಟೇಡಿಯಂನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾರತೀಯ ಕ್ರಿಕೆಟ್ ತಂಡದ ಅಧಿಕೃತ ಕಿಟ್ ಪ್ರಾಯೋಜಕ ಅಡಿಡಾಸ್ ಹಿರಿಯ ಪುರುಷರ ಭಾರತ ತಂಡದ ಹೊಸ ಟಿ-20 ಜೆರ್ಸಿಯನ್ನು ಅನಾವರಣಗೊಳಿಸಿತು.

ಕ್ರೀಡಾ ಉಡುಪು ತಯಾರಿಕ ಅಡಿಡಾಸ್ ಸಾಮಾಜಿಕ ಮಾಧ್ಯಮ ಖಾತೆ ಎಕ್ಸ್ ನಲ್ಲಿ ನೂತನ ಜೆರ್ಸಿಯ ವಿಡಿಯೋವನ್ನು ಹಂಚಿಕೊಂಡಿದೆ. ಕ್ರೀಡಾಂಗಣದ ಮೇಲೆ ಹೆಲಿಕಾಪ್ಟರ್ ನಲ್ಲಿ ಹಾರುತ್ತಿರುವ ರೀತಿಯಲ್ಲಿ ಇರುವ ಜೆರ್ಸಿಯನ್ನು ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ರವೀಂದ್ರ ಜಡೇಜಾ ಮತ್ತು ಕುಲದೀಪ್ ಯಾದವ್ ಮತ್ತಿತರ ಆಟಗಾರರಿಗೆ ತೋರಿಸುವುದನ್ನು ವಿಡಿಯೋದಲ್ಲಿ ಕಾಣಬಹುದು.

ಜೂನ್‌ 1ರಂದು ಶುರುವಾಗಲಿರುವ ಟೂರ್ನಿಯಲ್ಲಿ ಭಾರತ ತಂಡ ಜೂನ್ 5ರಂದು ಐರ್ಲೆಂಡ್‌ ಎದುರು ತನ್ನ ಅಭಿಯಾನ ಆರಂಭಿಸಲಿದೆ. ಇಂಡಿಯಾ ಹಾಗೂ ಪಾಕಿಸ್ತಾನ ಪಂದ್ಯ ಜೂನ್ 9ರಂದು ನ್ಯೂಯಾರ್ಕ್‌ನಲ್ಲಿ ನಡೆಯಲಿದೆ.

ರಾಷ್ಟ್ರ ಧ್ವಜವನ್ನು ಪ್ರತಿಬಿಂಬಿಸುವ 3 ಬಣ್ಣ

ಜೆರ್ಸಿಯು V ಆಕಾರದ ಕುತ್ತಿಗೆಯ ಮೇಳೆ ರಾಷ್ಟ್ರ ಧ್ವಜವನ್ನು ಪ್ರತಿಬಿಂಬಿಸುವ ಮೂರು ಬಣ್ಣಗಳನ್ನು ಒಳಗೊಂಡಿದೆ. ತೋಳುಗಳು ಕಿತ್ತಳೆ ಬಣ್ಣದಿಂದ ಮಾಡಲ್ಪಟ್ಟಿದೆ. ಈ ಹೊಸ ಜೆರ್ಸಿಯು ಕ್ರಿಕೆಟ್ ಅಭಿಮಾನಿಗಳನ್ನು ಆಕರ್ಷಿಸುತ್ತಿದೆ. ಇದೀಗ, ನಮ್ಮ ಆಟಗಾರರು ಹೊಸ ಜೆರ್ಸಿಯಲ್ಲಿ ಕ್ಯಾಮೆರಾಗಳಿಗೆ ಪೋಸ್​ ನೀಡಿದ್ದಾರೆ.

RELATED ARTICLES

Related Articles

TRENDING ARTICLES