Sunday, May 19, 2024

ಅರವಿಂದ್ ಕೇಜ್ರಿವಾಲ್​ಗೆ ಜೈಲೇ ಗತಿ, ಮೇ 20 ರವರೆಗೆ ನ್ಯಾಯಾಂಗ ಬಂಧನ

ನವದೆಹಲಿ : ಅಬಕಾರಿ ನೀತಿ ಪರಿಷ್ಕರಣೆ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ನ್ಯಾಯಾಲಯ ವಿಸ್ತರಿಸಿದೆ.

ಪ್ರಕರಣ ಸಂಬಂಧ ಇಡಿ ಪರ ಎಸ್​.ವಿ ರಾಜು ಮತ್ತು ಎಎಪಿ ಪರ ವಕೀಲ ಅಭಿಷೇಕ್ ಮನು ಸಿಂಘ್ವಿ ತಮ್ಮ ತಮ್ಮ ವಾದ ಮಂಡಿಸಿದರು. ವಾದ ಪ್ರತಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್, ಅರವಿಂದ್ ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ತೀರ್ಪನ್ನು ಕಾಯ್ದಿರಿಸಿದೆ.

ಜಾರಿ ನಿರ್ದೇಶನಾಲಯ ತಮ್ಮನ್ನು ಬಂಧಿಸಿರುವುದನ್ನ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಕೈಗೆತ್ತಿಕೊಂಡಿತ್ತು. ಸುಪ್ರೀಂ ಕೋರ್ಟ್ ನ್ಯಾಯಧೀಶರಾದ ಸಂಜೀವ್ ಖನ್ನಾ ಹಾಗೂ ದೀಪಂಕರ್ ದತ್ತಾ ವಿಚಾರಣೆ ನಡೆಸಿದರು. ಇದೀಗ ಮೇ 9 ರಂದು ಕೇಜ್ರಿವಾಲ್ ಅವರ ಮಧ್ಯಂತರ ಜಾಮೀನು ಕುರಿತು ಸುಪ್ರೀಂ ಕೋರ್ಟ್ ತೀರ್ಪು ನೀಡಲಿದೆ.

ಇದೇ ಪ್ರಕರಣದ ಸಂಬಂಧ ಬಂಧನಕ್ಕೆ ಒಳಗಾಗಿರುವ ಬಿಆರ್​ಎಸ್ ನಾಯಕಿ ಕೆ. ಕವಿತಾ ಅವರ ನ್ಯಾಯಾಂಗ ಬಂಧನದ ಅವಧಿಯನ್ನು ರೋಸ್​ ಅವೆನ್ಯೂ ನ್ಯಾಯಾಲಯ ಇಂದು ವಿಸ್ತರಿಸಿ ಆದೇಶಿಸಿದೆ. ಅರವಿಂದ್ ಕೇಜ್ರಿವಾಲ್ ಬಂಧನದ ಅವಧಿಯನ್ನು ಮೇ 20 ರವರೆಗೆ, ಇಡಿ ಪ್ರಕರಣದಲ್ಲಿ ಕವಿತಾರ ಅವಧಿಯನ್ನು ಮೇ 14 ರವರೆಗೆ ಹಾಗೂ ಸಿಬಿಐ ಪ್ರಕರಣದಲ್ಲಿ ಮೇ 20 ರವರೆಗೆ ವಿಸ್ತರಿಸಲಾಗಿದೆ.

ಒಟ್ನಲ್ಲಿ, ಅಬಕಾರಿ ನೀತಿ ಹಗರಣದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಸಿಎಂ ಅರವಿಂದ್​ ಕೇಜ್ರಿವಾಲ್​ಗೆ ಸುಪ್ರೀಂ ಕೋರ್ಟ್​ನಿಂದ ರಿಲೀಫ್ ಸಿಕ್ಕಿಲ್ಲ. ಮೇ 20 ರವರೆಗೆ ಜೈಲೇ ಗತಿಯಾಗಿದೆ.

RELATED ARTICLES

Related Articles

TRENDING ARTICLES