Sunday, April 28, 2024

ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಮೂರು ಇಲ್ಲ : ಡಿ.ಕೆ. ಶಿವಕುಮಾರ್

ಬೆಳಗಾವಿ : ಕೇಂದ್ರ ಬಿಜೆಪಿ ಸರ್ಕಾರಕ್ಕೆ ಕಣ್ಣು, ಕಿವಿ, ಹೃದಯ ಮೂರು ಇಲ್ಲ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಟೀಕಿಸಿದರು.

ಬೆಳಗಾವಿಯ ಸುವರ್ಣಸೌಧದಲ್ಲಿ ಕೃಷಿ ಮತ್ತು ಪೂರಕ ಚಟುವಟಿಕೆಗಳ ಸಂಬಂಧಿತ ಯೋಜನೆಗಳ ಫಲಾನುಭವಿಗಳಿಗೆ ಕೃಷಿ ಸಲಕರಣೆಗಳನ್ನು ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರೈತರಿಗೋಸ್ಕರ ಈ ದೇಶದಲ್ಲಿ ದೊಡ್ಡ ಹೋರಾಟ ನಡೆಯುತ್ತಿದೆ. ಕೇಂದ್ರ ಸರ್ಕಾರಕ್ಕೆ ಕೇಳಿಸುತ್ತಿಲ್ಲ. ಎಪಿಎಂಸಿ ಕಾಯ್ದೆ ಮಂಜೂರು ಮಾಡಿದ್ದರು. ಅದನ್ನು ಮೊನ್ನೆ ಹಿಂಪಡೆದಿದ್ದೇವೆ. ನಾನು ರೇಷ್ಮೆ ಬೆಳೆಯುತ್ತೇವೆ, ನಮ್ಮಲ್ಲಿ ಅತೀ ಹೆಚ್ಚು ರೇಷ್ಮೆ ಬೆಳೆಯುತ್ತೇವೆ. ಉತ್ತರ ಕರ್ನಾಟಕ ಭಾಗದಿಂದಲೂ ರೇಷ್ಮೆ ನಮ್ಮ ಭಾಗಕ್ಕೆ ಬರ್ತಿದೆ ಎಂದು ಹೇಳಿದರು.

ನಮ್ಮ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ

ರಾಜ್ಯದಲ್ಲಿ 200 ತಾಲ್ಲೂಕು ಬರಗಾಲ ಪೀಡಿತ ಎಂದು ಘೋಷಣೆ ಮಾಡಿದ್ದೇವೆ. ಕುಡಿಯುವ ನೀರಿಗೆ ತೊಂದರೆ ಇದೆ, ಅದನ್ನು ಹೇಗೊ ಮ್ಯಾನೇಜ್ ಮಾಡ್ತಿದ್ದೇವೆ. ನರೇಗಾ ಯೋಜನೆಯಲ್ಲಿ 50 ದಿನ ಬಂದ್ ಮಾಡಿ ನಿಮಗೆ ಮೋಸ ಮಾಡ್ತಿದ್ದಾರೆ. ರೈತರಿಗೆ ಶಕ್ತಿ ಕೊಟ್ಟು ನಮ್ಮ ಸರ್ಕಾರ ನಿಮ್ಮ ಬೆನ್ನಿಗೆ ನಿಂತಿದೆ ಎಂದು ತಿಳಿಸಿದರು.

ಪ್ರಲ್ಹಾದ್ ಜೋಶಿ ಬಾಯಿ ಬಿಡುತ್ತಿಲ್ಲ

ಕಳಸಾ ಬಂಡೂರಿ ಯೋಜನೆ ಆಯ್ತು ಅಂತ ಅಂದು ಸಂಭ್ರಮಾಚರಣೆ ಮಾಡಿದ್ರು. ಆದರೆ, ಪರಿಸರ ಇಲಾಖೆಯಿಂದ ಒಂದು ಕ್ಲಿಯರೆನ್ಸ್ ಕೊಡಿಸುತ್ತಿಲ್ಲ. ಅದೇನೆ ಆಗಲಿ ಅಂತ ಯೋಜನೆಗೆ ನಾವು ಟೆಂಡರ್ ಕರೆದಿದ್ದೇವೆ. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬೈಯ್ಯುವವರು. ಆದರೆ, ಈಗ ಏನೂ ಅಂತಿಲ್ಲ. ಇತ್ತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಅರ್ಧ ಗಂಟೆ ಟೈಮ್ ತಗೊಂಡ್ರೆ ಆಗುತ್ತೆ. ಆದರೆ, ಅವರು ಬಾಯಿ ಬಿಡುತ್ತಿಲ್ಲ ಎಂದು ಡಿ.ಕೆ. ಶಿವಕುಮಾರ್ ಅಸಮಾಧಾನ ಹೊರಹಾಕಿದರು.

RELATED ARTICLES

Related Articles

TRENDING ARTICLES