Sunday, April 28, 2024

ಯುವಕನ ಕತ್ತಿನ ಪಟ್ಟಿ ಹಿಡಿದು ಕಪಾಳಮೋಕ್ಷ ಮಾಡಿದ ಕಾಂಗ್ರೆಸ್ MLC

ಬೆಳಗಾವಿ : ಕಾಂಗ್ರೆಸ್​ ಎಂಎಲ್​ಸಿ ಪ್ರಕಾಶ್ ಹುಕ್ಕೇರಿ ಅವರು ಯುವಕನ ಶರ್ಟ್ ಕಾಲರ್​ ಹಿಡಿದು ಬೈಯ್ದು, ಕಪಾಳಮೋಕ್ಷ ಮಾಡಿದ್ದಾರೆ.

ಬೆಳಗಾವಿ ಜಿಲ್ಲೆ ಚಿಕ್ಕೋಡಿ ತಾಲೂಕಿನ ಮಲ್ಲಿಕವಾಡ್ ಗ್ರಾಮದಲ್ಲಿ ಬರ್ತ್‌ಡೇ ದಿನವೇ ಪ್ರಕಾಶ್ ಹುಕ್ಕೇರಿ ರೊಚ್ಚಿಗೆದ್ದು, ಯುವಕ ಸಂಭಾಜಿಗೆ ಕಪಾಳಕ್ಕೆ ಹೊಡೆದಿದ್ದಾರೆ.

ಪ್ರಕಾಶ್ ಹುಕ್ಕೇರಿ ಹುಟ್ಟುಹಬ್ಬ ನಿಮಿತ್ತ ಎತ್ತಿನ ಬಂಡಿ ಓಟ ಆಯೋಜಿಸಲಾಗಿತ್ತು. ಸ್ಪರ್ಧೆ ವೇಳೆ ಸಮಯ ಹೆಚ್ಚು ಕಮ್ಮಿ ಆಗಿದ್ದಕ್ಕೆ ಗರಂ ಆಗಿ ಸಂಭಾಜಿಯನ್ನ ವೇದಿಕೆ ಮೇಲೆ ಕರೆಸಿದ್ದಾರೆ. ಸಾರ್ವಜನಿಕರ ಎದುರಲ್ಲೇ ಸಂಭಾಜಿ ಕೊರಳ ಪಟ್ಟಿ ಹಿಡಿದು MLC ಪ್ರಕಾಶ್ ಹುಕ್ಕೇರಿ ಕಪಾಳಕ್ಕೆ ಥಳಿಸಿದ್ದಾರೆ.

ಕಪಾಳಮೋಕ್ಷ ಮಾಡಿದ್ದು ಯಾಕೆ?

ಬಂಡಿ ಓಡಿಸುವ ಸ್ಪರ್ಧೆಯಲ್ಲಿ ಮಹಾರಾಷ್ಟ್ರ ಮೂಲದ ಸಂಭಾಜಿ ಭಾಗಿಯಾಗಿದ್ದರು. ಸ್ಪರ್ಧೆಗೆ ನಿಂತಾಗ ಸಮಯ ಹೆಚ್ಚು ಕಮ್ಮಿಯಾಗಿದ್ದಕ್ಕೆ ಪ್ರಶ್ನೆ ಮಾಡಿದ್ದಾರೆ. ಇದರಿಂದ ಕುಪಿತರಾದ ಪ್ರಕಾಶ್ ಹುಕ್ಕೇರಿ ತಾಳ್ಮೆ ಕಳೆದುಕೊಂಡು ಈ ರೀತಿ ನಡೆದುಕೊಂಡಿದ್ದಾರೆ.

ಗೂಂಡಾವರ್ತನೆ ತೋರಿದ್ದು ಸರಿನಾ?

ಎಂಎಲ್ಸಿ ಪ್ರಕಾಶ್ ಹುಕ್ಕೇರಿ ವರ್ತನೆಗೆ ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ, ಈ ರೀತಿ ಗೂಂಡಾವರ್ತನೆ ತೋರಿದ್ದು ಎಷ್ಟರ ಮಟ್ಟಿಗೆ ಸರಿ? ಎಂದು ಆಕ್ರೋಶ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES