Sunday, April 28, 2024

ನಾಸೀರ್​ ಹುಸೇನ್​ ಪ್ರಮಾಣ ವಚನಕ್ಕೆ ತಡೆ ಕೋರಿ ಮನವಿ!

ಬೆಳಗಾವಿ: ಪಾಕಿಸ್ತಾನ್ ಜಿಂದಾಬಾದ್​ ಪ್ರಕರಣದಲ್ಲಿ ಸಂಪೂರ್ಣ ತನಿಖೆ ಮುಗಿಯುವವರೆಗೆ ರಾಜ್ಯಸಭಾ ಸದಸ್ಯ ನಾಸೀರ್​ ಹುಸೇನ್​ ಅವರ ಪ್ರಮಾಣ ವಚನವಚನಕ್ಕೆ ಅವಕಾಶ ನೀಡಬಾರದು ಎಂದು ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆಯಲಾಗುವುದು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು ಆಕ್ರೋಶ ಹೊರಹಾಕಿದ್ದಾರೆ.

ಈ ಕುರಿತು ಬೆಳಗಾವಿಯಲ್ಲಿ ಮಾತನಾಡಿದ ಅವರು, ಪಾಕಿಸ್ತಾನ್​ ಜಿಂದಾಬಾದ್’ ಎಂದು ಘೋಷಣೆ ಕೂಗಿದ ಪ್ರಕರಣದಲ್ಲಿ ರಾಜ್ಯಸಭೆ ಸದಸ್ಯರಾದ ನಾಸೀರ್ ಹುಸೇನ್‌ ಅವರನ್ನು ನಾಲ್ಕನೇ ಆರೋಪಿ ಮಾಡಿ ಪ್ರಕರಣ ದಾಖಲಿಸಬೇಕು. ತನಿಖೆ ಪೂರ್ಣಗೊಳ್ಳುವವರೆಗೆ ನಾಸೀ‌ರ್ ಹುಸೇನ್‌ ಅವರು ಪ್ರಮಾಣ ವಚನ ಸ್ವೀಕರಿಸಬಾರದು. ಅವರಿಗೆ ಪ್ರಮಾಣ ವಚನಕ್ಕೂ ಅವಕಾಶ ನೀಡಬಾರದು ಎಂದು ಕೋರಿ ರಾಷ್ಟ್ರಪತಿ ಅವರಿಗೆ ಪತ್ರ ಬರೆಯಲಾಗುವುದು’ ಎಂದರು.

ಇದನ್ನೂ ಓದಿ: ಸವಾಲ್ ಯಾಕೆ ಕುಸ್ತಿ ಆಡೋಕೆ ಬರಲಿ ನೋಡೋಣ : ಶಾಮನೂರು ಶಿವಶಂಕರಪ್ಪ

ದೇಶದ್ರೋಹ ಪ್ರಕರಣದಲ್ಲಿ ಸೂತ್ರಧಾರಿಗಳು ಯಾರು, ಪಾತ್ರಧಾರಿಗಳು ಯಾರು ಎಂದು ಹೇಳಬೇಕು. ಸೂತ್ರಧಾರ ನಾಸೀರ್ ಹುಸೇನ್ ಅವರ ಹೆಸರನ್ನೇ ಎಫ್‌ಐಆರ್‌ನಲ್ಲಿ ಕೈ ಬಿಟ್ಟಿದ್ದಾರೆ. ಅವರ ಮೇಲೆ ಪ್ರಕರಣ ದಾಖಲಿಸಬೇಕು ಎಂದೂ ಆಗ್ರಹಿಸಿದರು.

ಸರ್ಕಾರ ಇದೂವರೆಗೆ ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಹಿರಂಗ ಮಾಡಲು ಸಿದ್ದವಿಲ್ಲ. ರಾಜ್ಯದ ಜನರಿಗೆ ಹೇಳಬಾರದಂಥ ಸಂಗತಿ ಅದರಲ್ಲಿ ಏನಿದೆ? ಈ ಬಗ್ಗೆ ಪೊಲೀಸರ ಮೇಲೆ ಸರ್ಕಾರ ಒತ್ತಡ ಹೇರುತ್ತಿದೆ ಎಂದೂ ವಿಜಯೇಂದ್ರ ಕಿಡಿ ಕಾರಿದರು.

RELATED ARTICLES

Related Articles

TRENDING ARTICLES