Sunday, May 12, 2024

ಬೆಳಗಾವಿಯಲ್ಲಿ ಇಂದು ಪ್ರಧಾನಿ ಮೋದಿ, ಸಿಎಂ ಸಿದ್ದರಾಮಯ್ಯ ಏಕ ಕಾಲದಲ್ಲಿ ಪ್ರಚಾರ!

ಬೆಳಗಾವಿ: ರಾಜ್ಯದಲ್ಲಿ ಮೇ7 ರಂದು ಎರಡನೇ ಹಂತದ ಲೋಕಸಭಾ ಚುನಾವಣೆ ನಡೆಯಲಿದ್ದು ಕರ್ನಾಟಕದಲ್ಲಿ ಬೇಸಿಗೆಯ ಬಿರುಬಿಸಿಲಿನ ಮಧ್ಯೆ ಲೋಕಸಭೆ ಚುನಾವಣೆ ಕಾವು ಈಗ ಉತ್ತರ ಭಾಗದತ್ತ ಶಿಫ್ಟ್ ಆಗಿದೆ. ಬೆಳಗಾವಿಯಲ್ಲಿ (ಏ.28) ಇಂದು ಭಾನುವಾರ ಬಿಜೆಪಿಯಿಂದ ಪ್ರಧಾನಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕಕಾಲದಲ್ಲಿ ಪ್ರಚಾರ ನಡೆಸಲಿದ್ದಾರೆ.

ಎನ್​ಡಿಎ ಅಭ್ಯರ್ಥಿಗಳ ಪರ ಪ್ರಚಾರಕ್ಕಾಗಿ ಖುದ್ದು ಪ್ರಧಾನ ಮಂತ್ರಿಗಳೇ ಆಗಮಿಸಿದ್ದು ಇಂದು ಬೆಳಗಾವಿ, ದಾವಣಗೆರೆ, ಹೊಸಪೇಟೆ, ಶಿರಸಿಯಲ್ಲಿ ನಡೆಯುವ ನಾಲ್ಕು ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಇಂದು ಬೆಳಗ್ಗೆ 10.55ಕ್ಕೆ ಬೆಳಗಾವಿಯ ಹೋಟೆಲ್​ನಿಂದ ಹೊರಡುವ ಪ್ರಧಾನಿ ಮೋದಿ, 11 ಗಂಟೆಗೆ ಬೆಳಗಾವಿಯ ಮಾಲಿನಿ ಸಿಟಿ ಮೈದಾನದಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. 11.55ಕ್ಕೆ ಬೆಳಗಾವಿಯಿಂದ ಹೊರಟು 12.55ಕ್ಕೆ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ತಲುಪಲಿದ್ದಾರೆ.

ಇದನ್ನೂ ಓದಿ: ‘ದಾರಿ ತಪ್ಪಿದ ಮೊಮ್ಮಗ’ನ ನೀಚತನಕ್ಕೆ ಜನರೆಲ್ಲಾ ಛೀ.. ಥೂ..! ಕಣ್ಣೀರಿಟ್ಟ ಸಂತ್ರಸ್ತೆಯರು

ಬಳಿಕ ಶಿರಸಿಯಿಂದ ಮಧ್ಯಾಹ್ನ 2 ಗಂಟೆಗೆ ಹೊರಟು 2.50ಕ್ಕೆ ದಾವಣಗೆರೆಗೆ ಆಗಮಿಸಲಿದ್ದು, ದಾವಣಗೆರೆ ಸಮಾವೇಶದಲ್ಲಿ ಭಾಗವಹಿಸಿ, ನಂತರ ಸಂಜೆ 4.50ಕ್ಕೆ ಹೊಸಪೇಟೆ ತಲುಪಲಿದ್ದಾರೆ. ಅಲ್ಲಿ 5 ಗಂಟೆಗೆ ಹೊಸಪೇಟೆ ಸಮಾವೇಶದಲ್ಲಿ ಭಾಗವಹಿಸಿ ರಾತ್ರಿ ಹೊಸಪೇಟೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ.

ಏಪ್ರಿಲ್ 29ರ ಬೆಳಗ್ಗೆ 11 ಗಂಟೆಗೆ ಹೊಸಪೇಟೆಯಿಂದ ಹೊರಟು ಮಧ್ಯಾಹ್ನ 12.05ಕ್ಕೆ ಬಾಗಲಕೋಟೆಗೆ ತಲುಪಿ ಮಧ್ಯಾಹ್ನ 12.15ಕ್ಕೆ ಬಾಗಲಕೋಟೆಯ ತೋಟಗಾರಿಕೆ ವಿವಿ ಮೈದಾನದಲ್ಲಿ ನಡೆಯುವ ಸಾರ್ವಜನಿಕ ಸಮಾವೇಶದಲ್ಲಿ ಭಾಗವಹಿಸಿ, ಬಿಜೆಪಿ ಅಭ್ಯರ್ಥಿ ಪರ ಪ್ರಚಾರ ಮಾಡಲಿದ್ದಾರೆ. ಮಧ್ಯಾಹ್ನ 1.05ಕ್ಕೆ ಬಾಗಲಕೋಟೆಯಿಂದ ಮಹಾರಾಷ್ಟ್ರದ ಸೊಲ್ಲಾಪುರಕ್ಕೆ ಮೋದಿ ಪ್ರಯಾಣಿಸಲಿದ್ದಾರೆ.

ಸಿಎಂ ಸಿದ್ದರಾಮಯ್ಯ ಕಾಂಗ್ರೆಸ್​ ಅಭ್ಯರ್ಥಿ ಪರ ಪ್ರಚಾರ:

ಪ್ರಧಾನಿ ಮೋದಿ ಪ್ರಚಾರದ ನಡುವೆ ಇಂದು ಬೆಳಗ್ಗೆ ಬೆಳಗಾವಿಗೆ ಆಗಮಿಸಲಿರುವ ಸಿಎಂ ಸಿದ್ದರಾಮಯ್ಯ. ನಂತರ ಸಾಂಬ್ರಾ ವಿಮಾನ ನಿಲ್ದಾಣದಿಂದ ಹೆಲಿಕಾಫ್ಟರ್ ಮೂಲಕ ತೆರಳಿ 11.30ಕ್ಕೆ ಬೆಡಕಿಹಾಳ ಗ್ರಾಮಕ್ಕೆ ತೆರಳಿ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ನಂತರ 12.50ಕ್ಕೆ ಕಾಗವಾಡ ಮತಕ್ಷೇತ್ರದ ಉಗಾರ ಗ್ರಾಮದಲ್ಲಿ ಪ್ರಚಾರಸಭೆ ನಡೆಸಲಿದ್ದಾರೆ. ಬಳಿಕ ಹೆಲಿಕಾಫ್ಟರ್ ಮೂಲಕ ಹುಕ್ಕೇರಿಗೆ ಆಗಮಿಸಿ 2.50ಕ್ಕೆ ಪ್ರಚಾರ ಸಭೆಯಲ್ಲಿ ಭಾಗಿಯಾಗಿ ಸಂಜೆ 4.30ಕ್ಕೆ ಬೆಳಗಾವಿ ಗ್ರಾಮೀಣ ಮತ ಕ್ಷೇತ್ರದ ಮುತಗಾ ಗ್ರಾಮದಲ್ಲಿ ಪ್ರಚಾರ ನಡೆಸಲಿದ್ದಾರೆ. ನಂತರ ಖಾನಾಪುರದಲ್ಲಿ ಸಭೆಯಲ್ಲಿ ನಡೆಸಲಿದ್ದಾರೆ. ಬೆಳಗಾವಿ ಸರ್ಕ್ಯೂಟ್ ಹೌಸ್ ನಲ್ಲಿ ರಾತ್ರಿ ವಾಸ್ತವ್ಯ ಮಾಡಲಿದ್ದಾರೆ ಎಂದು ಕಾಂಗ್ರೆಸ್ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ ಮಾಧ್ಯಮಗಳಿಗೆ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES