Thursday, May 2, 2024

ವಿಶ್ವಕಪ್ ಗೆದ್ದ ಆಟಗಾರ SRH ತಂಡದ ನಾಯಕ : ಯಾವ ತಂಡಕ್ಕೆ ಯಾರು ನಾಯಕ?

ಬೆಂಗಳೂರು : ಐಪಿಎಲ್-2024 ಹಂಗಾಮಕ್ಕೆ ದಿನಗಣನೆ ಶುರುವಾಗಿದ್ದು, ಸನ್​ ರೈಸರ್ಸ್​ ಹೈದರಾಬಾದ್ ನೂತನ ನಾಯಕನ ಹೆಸರನ್ನು ಪ್ರಕಟಿಸಿದೆ.

ವಿಶ್ವಕಪ್ ವಿಜೇತ ತಂಡದ ನಾಯಕ, ಆಸ್ಟ್ರೇಲಿಯಾದ ವೇಗಿ ಪ್ಯಾಟ್ ಕಮಿನ್ಸ್​ ಅವರನ್ನು ನೂತನ ನಾಯಕರನ್ನಾಗಿ SRH ಫ್ರಾಂಚೈಸಿ ನೇಮಿಸಿದೆ. ಏಡೆನ್ ಮಾರ್ಕ್ರಾಮ್ ಬದಲಿಗೆ ಪ್ಯಾಟ್ ಕಮ್ಮಿನ್ಸ್​ ಅವರು ಈ ಬಾರಿ ತಂಡವನ್ನು ಮುನ್ನಡೆಸಲಿದ್ದಾರೆ.

ಐಪಿಎಲ್ ಮಿನಿ ಹರಾಜಿನಲ್ಲಿ ಪ್ಯಾಟ್ ಕಮ್ಮಿನ್ಸ್​ ಅವರನ್ನು ಬರೋಬ್ಬರಿ 20.5 ಕೋಟಿ ರೂಪಾಯಿಗೆ ಹೈದರಾಬಾದ್ ಖರೀದಿಸಿತ್ತು. ಕನ್ನಡಿಗ ಮಯಾಂಕ್ ಅಗರ್ವಾಲ್ ಅವರಿಂದ ತೆರವಾಗಿದ್ದ ನಾಯಕತ್ವವನ್ನು 2023ನೇ ಸಾಲಿನ ಐಪಿಎಲ್​ ಟೂರ್ನಿಯಲ್ಲಿ ಏಡೆನ್ ಮಾರ್ಕ್ರಾಮ್ ಅವರಿಗೆ ನೀಡಲಾಗಿತ್ತು.

ಯಾವ ತಂಡಕ್ಕೆ ಯಾರು ನಾಯಕ?

  • ಚೆನ್ನೈ ಸೂಪರ್ ಕಿಂಗ್ಸ್​ : ಮಹೇಂದ್ರ ಸಿಂಗ್ ಧೋನಿ
  • ರಾಯಲ್ ಚಾಲೆಂಜರ್ಸ್ ಬೆಂಗಳೂರು : ಫಾಪ್ ಡುಪ್ಲೆಸಿಸ್
  • ಮುಂಬೈ ಇಂಡಿಯನ್ಸ್​ : ಹಾರ್ದಿಕ್ ಪಾಂಡ್ಯ
  • ಡೆಲ್ಲಿ ಕ್ಯಾಪಿಟಲ್ಸ್​ : ರಿಷಬ್ ಪಂತ್
  • ಸನ್ ರೈಸರ್ಸ್ ಹೈದರಾಬಾದ್ : ಪ್ಯಾಟ್ ಕಮ್ಮಿನ್ಸ್​
  • ಕೋಲ್ಕತ್ತಾ ನೈಟ್ ರೈಡರ್ಸ್ : ಶ್ರೇಯಸ್ ಅಯ್ಯರ್
  • ರಾಜಸ್ತಾನ್ ರಾಯಲ್ಸ್ : ಸಂಜು ಸ್ಯಾಮ್ಸನ್
  • ಗುಜರಾತ್ ಜೈಂಟ್ಸ್ : ಶುಭ್​ಮನ್ ಗಿಲ್
  • ಪಂಜಾಬ್ ಕಿಂಗ್ಸ್ : ಶಿಖರ್ ಧವನ್
  • ಲಕ್ನೋ ಸೂಪರ್ ಜೈಂಟ್ಸ್ : ಕೆ.ಎಲ್. ರಾಹುಲ್

RELATED ARTICLES

Related Articles

TRENDING ARTICLES