Wednesday, May 8, 2024

IPLಗೂ ಮುನ್ನ ಧೋನಿ ಅಚ್ಚರಿ ಪೋಸ್ಟ್ : ಸಿಂಹ ಘರ್ಜಿಸಲು ಸಿದ್ಧವಾಗಿದೆ ಎಂದ ಫ್ಯಾನ್ಸ್

ಬೆಂಗಳೂರು : ಐಪಿಎಲ್-2024​ಗೂ ಮುನ್ನ ಎಂ.ಎಸ್. ಧೋನಿ ಬಗ್ಗೆ ಬಿಗ್​ ಅಪ್​ಡೇಟ್ ಒಂದು ಹೊರಬಿದ್ದಿದೆ. ಸ್ವತಃ ಧೋನಿಯೇ ಫೇಸ್​ಬುಕ್​ನಲ್ಲಿ ಪೋಸ್ಟ್​ ಮಾಡಿದ್ದಾರೆ.

Can’t wait for the new season and the new ‘role’. Stay tuned!. ‘ಹೊಸ ಸೀಸನ್​ನಲ್ಲಿ, ಹೊಸ ರೋಲ್​ನಲ್ಲಿ ಕಾಣಿಸಿಕೊಳ್ಳಲು ಕಾಯುತ್ತಿದ್ದೇನೆ’ ಎಂದು ಧೋನಿ ಅವರು ತಮ್ಮ ಫೇಸ್​ಬುಕ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.

ಇದೇ ಮಾರ್ಚ್ 22 ರಿಂದ ಐಪಿಎಲ್ ಪ್ರಾರಂಭವಾಗಲಿದೆ. ಕ್ರಿಕೆಟ್ ಪ್ರೇಮಿಗಳು ಐಪಿಎಲ್ 17ನೇ ಸೀಸನ್‌ಗಾಗಿ ಕಾಯುತ್ತಿದ್ದಾರೆ. ಆದರೆ, ಐಪಿಎಲ್ ಆರಂಭಕ್ಕೂ ಮುನ್ನ ಎಂ.ಎಸ್ ಧೋನಿ ಮಾಡಿರುವ ಪೋಸ್ಟ್​ ಅಭಿಮಾನಿಗಳಿಗೆ ಅಚ್ಚರಿಗೆ ಕಾರಣವಾಗಿದೆ.

ಈ ಪೋಸ್ಟ್​ ನೊಡಿದ ಧೋನಿ ಅಭಿಮಾನಿಗಳು ತರಹೇವಾರಿಯಾಗಿ ಕಾಮೆಂಟ್ ಮಾಡುತ್ತಿದ್ದಾರೆ. ಇದು ಐಪಿಎಲ್-2024 ರಲ್ಲಿ ತಲಾ ಧೋನಿ ಪ್ರದರ್ಶನದ ಸಮಯ. ಸಿಂಹ ಘರ್ಜಿಸಲು ಸಿದ್ಧವಾಗಿದೆ. ಶುಭವಾಗಲಿ ಸರ್ ಮತ್ತು 6 ಬಾರಿ ಎಂ.ಎಸ್ ಧೋನಿ ಅವರು ಐಪಿಎಲ್ ಟ್ರೋಫಿಯನ್ನು ಎತ್ತಿ ಹಿಡಿಯಲಿ ಎಂದು ಶುಭ ಹಾರೈಸಿದ್ದಾರೆ.

ಮೊದಲ ಪಂದ್ಯದಲ್ಲೇ ಮಾಹಿ ಎಂಟ್ರಿ

ಮೊದಲ ಪಂದ್ಯದಂದೇ ಎಂ.ಎಸ್ ಧೋನಿ ಸಾರಥ್ಯದ ಚೆನ್ನೈ ಸೂಪರ್ ಕಿಂಗ್ಸ್ ಮೈದಾನಕ್ಕೆ ಪ್ರವೇಶಿಸುತ್ತಿದೆ. ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್​ ಕಿಂಗ್ಸ್ ಸೆಣಸಾಡಲಿದೆ. ಮಾಹಿ ಹೊಸ ಸೀಸನ್‌ಗಾಗಿ ಮುಂದಿನ ವಾರದಿಂದ ಅಭ್ಯಾಸ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ.

ಚೆನ್ನೈ ಸೂಪರ್ ಕಿಂಗ್ಸ್​​ ತಂಡ

ಎಂ.ಎಸ್ ಧೋನಿ (ನಾಯಕ/ವಿ.ಕೀ.), ಋತುರಾಜ್ ಗಾಯಕ್ವಾಡ್, ಮೊಯಿನ್ ಅಲಿ, ದೀಪಕ್ ಚಾಹರ್, ಡೆವೊನ್ ಕಾನ್ವೆ, ಶಿವಂ ದುಬೆ, ರವೀಂದ್ರ ಜಡೇಜಾ, ಅಜಿಂಕ್ಯ ರಹಾನೆ, ರಚಿನ್ ರವೀಂದ್ರ, ಡೇರಿಲ್ ಮಿಚೆಲ್, ಮಥೀಶ ಪತಿರಾನಾ, ತುಷಾರ್ ದೇಶಪಾಂಡೆ, ಶಾರ್ದೂಲ್ ಠಾಕೂರ್, ಮುಸ್ತಫಿಜುರ್ ರೆಹಮಾನ್, ಮಹೇಶ್ ತೀಕ್ಷಣ, ಸಮೀರ್ ರಿಜ್ವಿ, ಮುಸ್ತಾಫಿಜುರ್ ರೆಹಮಾನ್, ಶಾರ್ದೂಲ್ ಠಾಕೂರ್, ರಾಜವರ್ಧನ್ ಹಂಗರ್ಗೇಕರ್, ಅಜಯ್ ಮಂಡಲ್, ಮುಖೇಶ್ ಚೌಧರಿ, ಶೇಕ್ ಸಿಂಘೆಲ್ ರಷೀದ್, ನಿಶಾಂತ್ ಸಿಂಧು, ಪ್ರಶಾಂತ್ ಸೋಲಂಕಿ, ಅವನೀಶ್ ರಾವ್, ಅವನೀಶ್ ರಾವ್ ಅರವೆಲ್ಲಿ.

RELATED ARTICLES

Related Articles

TRENDING ARTICLES