Wednesday, May 8, 2024

ಸೋ ಬ್ಯೂಟಿಫುಲ್, ಸೋ ಎಲಿಗೆಂಟ್, ಜಸ್ಟ್ ಲುಕಿಂಗ್ ಲೈಕ್ ಎ ವ್ಹಾವ್! : ಧೋನಿ ಲುಕ್​ಗೆ ಫ್ಯಾನ್ಸ್ ಫಿದಾ!

ಬೆಂಗಳೂರು : ಸೋ ಬ್ಯೂಟಿಫುಲ್‌.. ಸೋ ಎಲಿಗೆಂಟ್‌.. ಜಸ್ಟ್‌ ಲುಕಿಂಗ್ ಲೈಕ್‌ ಎ ವ್ಹಾವ್‌! ಟೀಂ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನ್ಯೂ ಲುಕ್​ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

ಸದಾ ತನ್ನ ಲುಕ್​ ಹಾಗೂ ಮ್ಯಾನರಿಸಂನಿಂದಲೇ ಸುದ್ದಿಯಾಗುವ ಕ್ಯಾಪ್ಟನ್ ಕೂಲ್ ಎಂ.ಎಸ್. ಧೋನಿ ಅವರು ಇದೀಗ ಭರ್ಜರಿ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ.

ಉದ್ಯಮಿ ಮುಖೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಹಾಗೂ ರಾಧಿಕಾ ಮರ್ಚೆಂಚ್ ಅವರ ಫ್ರೀ ವೆಡ್ಡಿಂಗ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಧೋನಿ ಬಾಲಿವುಡ್​ ಹಿರೋನಂತೆ ಕಾಣುತ್ತಿದ್ದರು. ಕಪ್ಪು ಬಣ್ಣದ ಶೂಟ್​ನಲ್ಲಿ ಪತ್ನಿ ಸಾಕ್ಷಿ ಧೋನಿ ಜೊತೆ ಮಾಹಿ ಫೋಟೋಗೆ ಪೋಸ್​ ನೀಡಿದ್ದಾರೆ.

ತಲಾ ಧೋನಿಯ ಅತ್ಯಾಕರ್ಷಕ ಲುಕ್​ನ ಫೋಟೋ ನೋಡಿ ಅಭಿಮಾನಿಗಳು ಫುಲ್ ಖುಷ್​ ಆಗಿದ್ದಾರೆ. ಸೋ ಬ್ಯೂಟಿಫುಲ್‌, ಸೋ ಎಲಿಗೆಂಟ್‌, ಜಸ್ಟ್‌ ಲುಕಿಂಗ್ ಲೈಕ್‌ ಎ ವ್ಹಾವ್‌! ಎಂದು ಸಾಮಾಜಿಕ ಜಾಲತಾಣದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.

ಸ್ಟಾರ್ ಕ್ರಿಕೆಟಿಗರ ಸಮಾಗಮ

ಗುಜರಾತ್​ನ ಜಾಮ್​ ನಗರದಲ್ಲಿ 3 ದಿನ ಅನಂತ್ ಹಾಗೂ ರಾಧಿಕಾ ಮರ್ಚೆಂಚ್ ಅವರ ಫ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆಯುತ್ತಿದೆ. ಈ ಕಾರ್ಯಕ್ರಮಕ್ಕೆ ಸಾಕಷ್ಟು ಗಣ್ಯರು ಆಗಮಿಸಿದ್ದಾರೆ. ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ, ಸಚಿನ್, ಇಶಾನ್ ಕಿಶನ್, ರಶೀದ್ ಖಾನ್, ಡ್ವೇನ್ ಬ್ರಾವೋ ಸೇರಿದಂತೆ ಹಲವು ಸ್ಟಾರ್ ಕ್ರಿಕೆಟಿಗರು ಭಾಗವಹಿಸಿದ್ದಾರೆ.

 

View this post on Instagram

 

A post shared by Chennai Super Kings (@chennaiipl)

RELATED ARTICLES

Related Articles

TRENDING ARTICLES