Thursday, May 2, 2024

ಅವನು ಟೋಪಿ ಹಾಕ್ಕೊಂಡಿದ್ದ, ಮಾಸ್ಕ್ ಹಾಕ್ಕೊಂಡಿದ್ದ, ಗಡ್ಡ ಬಿಟ್ಟಿದ್ದ

ಬೆಂಗಳೂರು : ಸಿಸಿ ಟಿವಿಯಲ್ಲಿ ಒಬ್ಬ ಅಪರಿಚಿತ ವ್ಯಕ್ತಿಯನ್ನು ಪತ್ತೆ ಮಾಡಿದ್ದಾರೆ. ಅವನು ಟೋಪಿ ಹಾಕೊಂಡು, ಮಾಸ್ಕ್ ಹಾಕೊಂಡು ಬಸ್​ನಲ್ಲಿ ಬಂದಿದ್ದಾನೆ. ಅವನು ಗಡ್ಡ ಬಿಟ್ಟಿದ್ದ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅವನ್ನು ಬ್ಯಾಗ್​ನಲ್ಲಿ ಟೈಮ್ ಬಾಂಬ್ ತಂದು ಹೋಟೆಲ್​ನಲ್ಲಿ ಇಟ್ಟಿದ್ದಾನೆ. ಅವನು ಬಂದು ಹೋದ ನಂತರ ಅದು ಬ್ಲಾಸ್ಟ್ ಆಗಿದೆ ಎಂದು ತಿಳಿಸಿದರು.

ಅವನು ರಾಮೇಶ್ವರಂ ಕೆಫೆಯಲ್ಲಿ ತಿಂಡಿ ತಿಂದಿದ್ದಾನೆ. ಅವುಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಇನ್ನೂ ಎರಡೂ ಮೂರು ದಿನಗಳಲ್ಲಿ ಶಂಕಿತನನ್ನು ಪತ್ತೆ ಮಾಡುತ್ತೇವೆ. ಈಗಾಗಲೇ ಎಲ್ಲಾ ಆಯಾಮಗಳಿಂದ ತನಿಖೆ ನಡೆಸುತ್ತಿದ್ದೇವೆ. ಸದ್ಯ ಗಾಯಾಳುಗಳು ಆರೋಗ್ಯವಾಗಿದ್ದಾರೆ, ಯಾವುದೇ ತೊಂದರೆ ಇಲ್ಲ. ಎಲ್ಲಾ ಗಾಯಾಳುಗಳು ರಿಕವರಿ ಆಗ್ತಿದ್ದಾರೆ. ನಾಳೆ ಅಥವಾ ನಾಡಿದ್ದು ಡಿಸ್ಟರ್ಜ್ ಮಾಡ್ತಾರೆ ಎಂದು ಹೇಳಿದರು.

ಗಾಯಾಳುಗಳ ಚಿಕಿತ್ಸೆ ವೆಚ್ಚ ಸರ್ಕಾರ ನೀಡುತ್ತೆ

ಎಲ್ಲಾ ಗಾಯಾಳುಗಳ ಚಿಕಿತ್ಸೆ ವೆಚ್ಚವನ್ನು ರಾಜ್ಯ ಸರ್ಕಾರ ನೀಡುತ್ತದೆ. ವೈದ್ಯರು ಚಿಕಿತ್ಸೆ ನೀಡ್ತಿದಾರೆ. ನಾಲ್ಕು ಜನ ಚಿಕಿತ್ಸೆ ಪಡೆಯುತ್ತಿದ್ದಾರೆ. ಗಾಯಾಳುಗಳ ಜೊತೆ ಮಾತನಾಡಿದ್ದೀನಿ, ಚೆನ್ನಾಗಿ ಮಾತನಾಡಿದ್ರು. ಎರಡು ಮೂರು ದಿನದಲ್ಲಿ ಡಿಸ್ಟರ್ಜ್ ಮಾಡಬಹುದು ಎಂದು ಸಿದ್ದರಾಮಯ್ಯ ಮಾಹಿತಿ ನೀಡಿದರು.

ಗಾಯಾಳುಗಳ ಚಿಕಿತ್ಸೆ ಬಗ್ಗೆ ಮಾಹಿತಿ ಪಡೆದ ಸಿಎಂ

ಇದೇ ವೇಳೆ ರಾಮೇಶ್ವರಂ ಕೆಫೆಯ ಬಾಂಬ್ ಸ್ಪೋಟದಲ್ಲಿ ಗಾಯಗೊಂಡು ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿರುವವರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯನವರು ಭೇಟಿಮಾಡಿ ಆರೋಗ್ಯ ವಿಚಾರಿಸಿದರು. ವೈದ್ಯರೊಂದಿಗೆ ಮಾತನಾಡಿ ಗಾಯಾಳುಗಳ ಚಿಕಿತ್ಸೆಯ ಮಾಹಿತಿ ಪಡೆದುಕೊಂಡರು.

RELATED ARTICLES

Related Articles

TRENDING ARTICLES