Thursday, May 9, 2024

ಬೇಸಿಗೆಗೂ ಮುನ್ನವೇ ಬರಗಾಲ: ನೀರಿನ ಸಮಸ್ಯೆ ನೀಗಿಸಲು ಮುಂದಾದ BBMP!

ಬೆಂಗಳೂರು: ನೀರಿನ ಸಮಸ್ಯೆ ಕುರಿತು ಬಿಬಿಎಂಪಿ ಇಂದು ಮಹತ್ವದ ಸಭೆ ನಡೆಸಿದೆ. ಬೇಸಿಗೆ ಆರಂಭಕ್ಕೂ ಮುನ್ನ ಕುಡಿಯೋ ನೀರಿಗೆ ಬರದ ಪರಿಸ್ಥಿತಿ ಎದುರಾಗಿದ್ದು, ನೀರಿನ ಸಮಸ್ಯೆ ನೀಗಿಸಲು ಮಹಾನಗರ ಪಾಲಿಕೆ ಮುಂದಾಗಿದೆ.

ಅಧಿಕಾರಿಗಳ ಜೊತೆ ನೀರಿನ ಸಮಸ್ಯೆ ಕುರಿತು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಚರ್ಚೆ ನಡೆಸಿದ್ದಾರೆ. ಮಹಾದೇವಪುರ, ಬೊಮ್ಮನಹಳ್ಳಿ, ಆರ್ ಆರ್ ನಗರ, ಯಶವಂತಪುರ ಸೇರಿದಂತೆ ಕೆಲವಡೆ ನೀರಿನ ಸಮಸ್ಯೆ ಉಂಟಾಗಿದೆ ಎಂದು ತುಷಾರ್​ ಗಿರಿನಾಥ್​ ಹೇಳಿದ್ದಾರೆ. ಇನ್ನು CMC ಮತ್ತು TMC ಕೋರ್ ಏರಿಯದಲ್ಲಿ ಬೋರ್ ಕೊರೆಯಲು ಹೇಳಲಾಗಿದೆ. ಪ್ರತಿ ಕ್ಷೇತ್ರಕ್ಕೆ ಡಿಸಿಎಂನಿಂದ 10 ಕೋಟಿ ಹಣ ಹಂಚಿಕೆ
ನೀರಿನ ವ್ಯವಸ್ಥೆ ಮಾಡುವ ವಾಟರ್ ಮ್ಯಾನ್ ವ್ಯವಸ್ಥೆ ಮಾಡಲು ಒಂದು ವಾರ ಟೈಮ್ ಕೊಡಲಾಗಿದೆ ಎಂದರು.

ಇದನ್ನೂ ಓದಿ: ಡಿಬಾಸ್ ‘ತಗಡು’ ಪದ ಬಳಕೆಗೆ ಬಹುಭಾಷಾ ನಟ ಪ್ರಕಾಶ್​ ರೈ ಪ್ರತಿಕ್ರಿಯೆ!

ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್​ವೆಲ್:

ಬೆಂಗಳೂರಿನ ಬಹುತೇಕ ವಾರ್ಡ್​ಗಳಲ್ಲಿ ನೀರಿನ ಅಭಾವ ಸೃಷ್ಟಿಯಾಗಿದೆ. ಹನಿ ನೀರಿಗಾಗಿಯೂ ಜನ ಪರದಾಡುತ್ತಿದ್ದು ದುಪ್ಪಟ್ಟು ಹಣ ನೀಡಿದರೂ ಜನರಿಗೆ ಟ್ಯಾಂಕರ್ ನೀರು ಸಿಗುತ್ತಿಲ್ಲ. ಬೇಸಿಗೆ ಆರಂಭಕ್ಕು ಮುನ್ನವೇ ನಗರದಲ್ಲಿ ಈ ರೀತಿಯ ಸ್ಥಿತಿ ನಿರ್ಮಾಣವಾಗಿರೋದು ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ BBMP ಇಂದು ಸಭೆ ನಡೆಸಿ ಕೆಲವು ನಿರ್ಧಾರಗಳನ್ನು ತೆಗೆದುಕೊಂಡಿದೆ.

ನೀರಿನ ಸಮಸ್ಯೆ ಇರುವ ಕಡೆಗಳಲ್ಲಿ ಬೋರ್ವೆಲ್​​​ ಕೊರೆಸಲು ನಿರ್ಧಾರ ಮಾಡಿದೆ. ಬೆಂಗಳೂರಿನಲ್ಲಿ ನೀರಿನ ಸಮಸ್ಯೆ ಬಗೆಹರಿಸುವುದಕ್ಕೆ ಕ್ರಮಕೈಗೊಳ್ಳಲಾಗುತ್ತೆ. BBMP, BWSSB, BDA ಸಮನ್ವಯದಿಂದ ಕೆಲಸ ಮಾಡಲು ನಿರ್ಧಾರ ಮಾಡಿದ್ದೇವೆ.

1472 Mld ನೀರು ಸರಬರಾಜು ಮಾಡಬಹುದು. ಕಾವೇರಿ 5ನೇ ಹಂತ ಕಾಮಗಾರಿ ಮುಗಿದು ಏಪ್ರಿಲ್ ನಿಂದ ನೀರು ಪೂರೈಕೆ ಮಾಡಬಹುದು. ನಾವು ಹಾಗೂ BWSSB ನವರು ಜೊತೆಯಾಗಿ ಬೋರ್​ವೆಲ್ ಕೊರೆಸುತ್ತೇವೆ. ನಾವು ಪ್ರತಿ ಕ್ಷೇತ್ರಕ್ಕೆ 10 ಕೋಟಿ ಹಣ bwssb ಗೆ ಕೊಡುತ್ತೇವೆ ಎಂದರು.

ಖಾಸಗಿ ಟ್ಯಾಂಕರ್​ಗಳನ್ನ ಬಳಸಿಕೊಳ್ಳುತ್ತೇವೆ:

ಖಾಸಗಿ ಟ್ಯಾಂಕರ್‌ ಮಾಫಿಯಾಗೆ ಬಗ್ಗೆ ಬಿಬಿಎಂಪಿ ಗಮನಹರಿಸಿಲ್ಲ. ಖಾಸಗಿ ಟ್ಯಾಂಕರ್‌, ಪಾಲಿಕೆ ನೀರು ರೇಟ್​ಗೆ ಬ್ರೇಕ್ ಹಾಕುತ್ತೆ ಎಂದು ಕೊಂಡಿದ್ದ ಸಾರ್ವಜನಿಕರಿಗೆ ಶಾಕ್ ನೀಡಿದೆ. ಈ ಬಗ್ಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್‌, ಅವಶ್ಯಕತೆ ಇದ್ರೆ ನಾವು ಖಾಸಗಿ ಟ್ಯಾಂಕರ್​ಗಳನ್ನ ಬಳಸಿಕೊಳ್ಳುತ್ತೇವೆ. ಅವರ ವ್ಯಾಪಾರ ಅವರು ಮಾಡಿಕೊಳ್ಳಲಿ. ಖಾಸಗಿಯವರಿಗೆ 200 ಟ್ಯಾಂಕರ್‌ ಪಡೆಯುತ್ತೇವೆ. ಟ್ಯಾಂಕರ್‌ ಪಡೆದು ನೀರಿನ ಸಮಸ್ಯೆಯನ್ನ ಅವರು ಪರಿಹಾರಿಸಲಿ ಎಂದರು.

RELATED ARTICLES

Related Articles

TRENDING ARTICLES