Wednesday, May 8, 2024

ಡಿಬಾಸ್ ‘ತಗಡು’ ಪದ ಬಳಕೆಗೆ ಬಹುಭಾಷಾ ನಟ ಪ್ರಕಾಶ್​ ರೈ ಪ್ರತಿಕ್ರಿಯೆ!

ಬೆಂಗಳೂರು : ಎಲ್ಲವನ್ನೂ ನೋಡ್ತಾ ಇದ್ದೀನಿ, ಭಾಷೆ ಸರಿಯಿಲ್ಲ ಎಂದು ಬಹುಭಾಷಾ ನಟ ಪ್ರಕಾಶ್ ರೈ (ಪ್ರಕಾಶ್ ರಾಜ್​) ಡಿಬಾಸ್ ‘ತಗಡು’ ಪದ ಬಳಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿಂದು ಫೋಟೋ ಚಿತ್ರದ ಸಂದರ್ಶನ ವೇಳೆ ಪವರ್​ ಟಿವಿ ಜೊತೆ ಮಾತನಾಡಿದ ಅವರು, ಕನ್ನಡ ಭಾಷೆಯನ್ನ ಎಲ್ಲರೂ ಅಣ್ಣಾವ್ರಿಂದ ಕಲಿಯಬೇಕು. ಭಾಷೆ ಅಂದ್ರೆ ಕನ್ನಡ ಮಾತಾಡೋದಲ್ಲ. ಅದರಲ್ಲಿನ ವಿನಯ, ಜ್ಞಾನ, ಅನುಭವ. ಭಾಷೆಯಿಂದ ಸೌಂದರ್ಯ ಹೊರಗಡೆ ಬರಲಿದೆ ಎಂದಿದ್ದಾರೆ.

ಇನ್ನು ಸುಮ್ನೆ ಮಾತಾಡೋದ್ರಿಂದ ಕಿರಿಕಿರಿ ಆಗುತ್ತೆ. ಕೇಳೋಕೆ ಕಷ್ಟ ಆಗುತ್ತೆ. ಮುಜುಗರ ಆಗುತ್ತೆ. ನನಗಂತೂ ಬಹಳ ಮುಜುಗರವಾಗುತ್ತದೆ. ಡಾ. ರಾಜ್​ಕುಮಾರ್ ಅವರು ಏನು ಮಾತಾಡ್ತಿದ್ರು? ಆ ಭಾಷೆಯಲ್ಲಿ ಧೀಮಂತಿಕೆ ಇರುತ್ತಿತ್ತು. ಘನತೆ, ಗಾಂಭೀರ್ಯ, ಪ್ರೀತಿ, ಅಗಾಧ ಜ್ಞಾನ ಕಾಣುತ್ತಿತ್ತು. ಕಲಾವಿದನಿಗೆ ಜನರ ಪ್ರೀತಿ ಸಿಗ್ತಿದ್ದಂತೆ ಸುಂದರವಾಗಬೇಕು. ಅಸಹ್ಯ ಆಗಬಾರದು ಎಂದು ಕಲಾವಿದರಿಗೆ ಕಿವಿ ಮಾತು ಹೇಳಿದರು.

ಇದನ್ನೂ ಓದಿ:ಮಾರ್ಚ್​ 5 ರಿಂದ ರಾಷ್ಟ್ರ ಮಟ್ಟದ ತೋಟಗಾರಿಕಾ ಮೇಳ!

ಅಲ್ಲದೇ ಯಾರು ಸರಿ, ಯಾರು ತಪ್ಪು ಅನ್ನೋದಕ್ಕಿಂತ ಚಿತ್ರರಂಗದ ಸದಸ್ಯನಾಗಿ ಆ ಭಾಷೆ ಇಷ್ಟ ಆಗಲಿಲ್ಲ. ನಾವು ಹತ್ತು ಜನಕ್ಕೆ ಮಾದರಿ ಆಗಬೇಕು. ಜನ ಪ್ರೀತಿಂದ ನಮ್ಮನ್ನ ಆ ಸ್ಥಾನದಲ್ಲಿ ನಿಲ್ಲಿಸಿದ್ದಾರೆ. ಯುವ ಪೀಳಿಗೆ, ಗಂಡು ಮಕ್ಕಳು, ಹೆಣ್ಣು ಮಕ್ಕಳು ಇರ್ತಾರೆ. ಯಾರಿಗೂ ನೋಯಿಸಬಾರದು. ಮೊದಲು ಭಾಷೆ ಮೇಲೆ ಹಿಡಿತ ಇರಬೇಕು. ಹಿಡಿತ ಬರಬೇಕು ಅಂದಾಗ ನಿಮ್ಮ ಸೌಂದರ್ಯವನ್ನ ಹೆಚ್ಚಿಸಿಕೊಳ್ಳಬೇಕು ಎಂದು ಬಹುಭಾಷಾ ನಟ ಪ್ರಕಾಶ್​ ರೈ ಅವರು ಮಾತಾಡಿದ್ದಾರೆ.

ಮೊನ್ನೆಯಷ್ಟೇ ಕಾಟೇರ ಸಿನಿಮಾದ 50 ದಿನಗಳ ಸಂಭ್ರಮಾಚರಣೆ ವೇಳೆ ಚಾಲೆಂಜಿಂಗ್​ ಸ್ಟಾರ್​ ದರ್ಶನ ಅವರು ನಿರ್ಮಾಪಕ ಉಮಾಪತಿ ಶ್ರೀನಿವಾಸ್ ಗೌಡ ಅವರಿಗೆ ಅಯ್ಯೋ ತಗಡೇ ಎಂದು ಪದ ಬಳಕೆ ಮಾಡಿ ಮಾತನಾಡಿದ್ದರು.

RELATED ARTICLES

Related Articles

TRENDING ARTICLES