Thursday, May 9, 2024

ಮಾರ್ಚ್​ 5 ರಿಂದ ರಾಷ್ಟ್ರ ಮಟ್ಟದ ತೋಟಗಾರಿಕಾ ಮೇಳ!

ಬೆಂಗಳೂರು : ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಭಾರತೀಯ ತೋಟಗಾರಿಕೆ ಸಂಶೋಧನಾ ಸಂಸ್ಥೆಯ ವತಿಯಿಂದ ಮಾ. 5ರಿಂದ 7ರವರೆಗೆ ‘ರಾಷ್ಟ್ರೀಯ ತೋಟಗಾರಿಕೆ -2024’ ಆಯೋಜಿಸಲಾಗಿದೆ ಎಂದು ಭಾರತೀಯ ತೋಟಗಾರಿಕಾ ಉಪಮಹಾನಿರ್ದೇಶಕ ಸಂಜಯ್ ಕುಮಾರ್ ಸಿಂಗ್ ಮಾಹಿತಿ ನೀಡಿದರು.

ಹೆಸರಘಟ್ಟದ ಐಐಹೆಚ್​ಆರ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿದ ಅವರು, ಈ ಬಾರಿ ‘ಸುಸ್ಥಿರ ಅಭಿವೃದ್ಧಿಗಾಗಿ ನವೀನ ಪೀಳಿಗೆಯ ತೋಟಗಾರಿಕೆ ತಂತ್ರಜ್ಞಾನಗಳು’ ಎಂಬ ಶೀರ್ಷಿಕೆ ಅಡಿಯಲ್ಲಿ ಮೇಳವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಮೇಳದ ಸಂಘಟನಾ ಕಾರ್ಯದರ್ಶಿ ಧನಂಜಯ ಎಂ.ವಿ. ಮಾತನಾಡಿ, ಇತ್ತೀಚಿನ ಆಧುನಿಕ ತಂತ್ರಜ್ಞಾನಗಳಾದ ಚತುರ ನೀರಾವರಿ ವ್ಯವಸ್ಥೆ, ನಿಯಂತ್ರಿತ ಪರಿಸರ ಕೃಷಿ, ಲಂಬ ಕೃಷಿ, ಸುಸ್ಥಿರ ಅಭಿವೃದ್ಧಿಗಾಗಿ ಪರಿಸರ ಸ್ನೇಹಿ ಪದ್ಧತಿಗಳು ಸೇರಿದಂತೆ ಮೇಳದಲ್ಲಿ ಪ್ರದರ್ಶನಗಳನ್ನು ಏರ್ಪಡಿಸಲಾಗಿದೆ. ಜೊತೆಗೆ, ನಗರ ತೋಟಗಾರಿಕೆ, ಮಣ್ಣು ರಹಿತ ಕೃಷಿ, ತೋಟಗಾರಿಕೆ ಬೆಳೆಗಳ ಮೌಲ್ಯವರ್ಧನೆ ಹಾಗೂ ಪ್ಯಾಕೇಜ್ ಮತ್ತು ಸಂಗ್ರಹಣ ತಂತ್ರಜ್ಞಾನಗಳ ಕುರಿತು ಕಾರ್ಯಗಾರಗಳನ್ನು ಸಹ ಆಯೋಜಿಸಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ:ಟಿವಿ ಆ್ಯಂಕರ್​ನನ್ನು ಅಪಹರಿಸಿದ ಯುವತಿ!

ಮೇಳದ ಪ್ರಚಾರ ಸಮಿತಿ ಅಧ್ಯಕ್ಷ ಪಿ. ನಂದೀಶ್ ಅವರು, ಮೇಳದಲ್ಲಿ ಸುಮಾರ 50 ಸಾವಿರಕ್ಕೂ ಹೆಚ್ಚು ರೈತರು ಹಾಗು ತೋಟಗಾರಿಕಾ ಕೃಷಿ ಆಸಕ್ತರು ಪಾಲ್ಗೊಳ್ಳುವ ಸಾಧ್ಯತೆ ಇದೆ’. ಮತ್ತು ಮೇಳದ ಕುರಿತ ಹೆಚ್ಚಿನ ಮಾಹಿತಿಗೆ 91083 64672/9403891704 ಸಂಪರ್ಕಿಸಬಹುದು ಎಂದು ತಿಳಿಸದರು.

ಭಾರತೀಯ ತೋಟಗಾರಿಕ ಸಂಶೋಧನಾ ಸಂಸ್ಥೆಯಲ್ಲಿ 2024ರ ವಿಶೇಷತೆ ಏನು ?  

1.ಸಸ್ಯ ರೋಗ ಕ್ಲಿನಿಕ್​.

2.ಸ್ಪ್ಯಾನ್ ಇನ್ಕ್ಯೂಬೆಷನ್ ಮತ್ತು ಸಾಮರ್ಥ ಅಭಿವೃದ್ದಿ ಕೇಂದ್ರ

3.ಐಐಹೆಚ್​ಆರ್​ ಸಸ್ಯ ಮಳಿಗೆಗೆಗಳ ಸ್ಥಾಪನೆ.

4. ಜೇನು ಗುಣಮಟ್ಟ ಮತ್ತು ಪೌಷ್ಠಿಕಾಂಶದ ಕುರಿತು ಪರೀಕ್ಷಾ ಸೌಲಭ್ಯ.

5.ಕಮಲಂ ಹಣ್ಣಿನ ಉತ್ಕೃಷ್ಟತೆಯ ಕೆಂದ್ರ.

6.ನಗರೀಕೃತ ತೋಟಗಾರಿಕೆ.

7.ಹೈಟೆಕ್ ತೋಟಗಾರಿಕೆ.

8.ಮಣ್ಣು ರಹಿತ ಕೃಷಿ.

ಇನ್ನೂ ಹಲವು ವಿಶೇಷತೆಗಳನ್ನು ಒಳಗೊಂಡಿದೆ ಎಂದು ICAR ಮತ್ತು IIHR ಅಧ್ಯಕ್ಷರು ಹಾಗು ನಿರ್ದೇಶಕರಾದ ಡಾ.ಪ್ರಕಾಶ್​ ಪಾಟೀಲ್​ ಅವರು ತಿಳಿಸಿದರು.

RELATED ARTICLES

Related Articles

TRENDING ARTICLES