Thursday, May 9, 2024

ದೇವಾಲಯದ ಆದಾಯದ ಮೇಲೆ ಕಾಂಗ್ರೆಸ್​ ಕಣ್ಣು: ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ಇಮ್ಮೆಚ್ಚೂರ್​!

ಬೆಂಗಳೂರು : ದೇವಸ್ಥಾನದ ಹಣದಿಂದ ತನ್ನ ‘ಖಾಲಿ ಬೊಕ್ಕಸ’ ತುಂಬಲು ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಬಿಜಪಿ ಪಕ್ಷದ ಆರೋಪಕ್ಕೆ ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಪ್ರತಿಕ್ರಿಯಿಸಿದ್ದು, ಸಮರ್ಥಿಸಿಕೊಂಡಿದ್ದಾರೆ.

2024ನೇ ಸಾಲಿನ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿ(ತಿದ್ದುಪಡಿ) ಮಸೂದೆಗೆ ಸಂಬಂಧಿಸಿದಂತೆ ಆಡಳಿತರೂಢ ಕಾಂಗ್ರೆಸ್ ಮತ್ತು ಪ್ರತಿಪಕ್ಷ ಬಿಜೆಪಿ ನಡುವೆ ತೀವ್ರ ವಾಕ್ಸಮರ ಮುಂದುವರೆದಿದ್ದು, ಕರ್ನಾಟಕ ವಿಧಾನಸಭೆಯಲ್ಲಿ ಬುಧವಾರ ಅಂಗೀಕರಿಸಿದ ಮಸೂದೆಯನ್ನು ಸಮರ್ಥಿಸಿಕೊಂಡ ಮುಜರಾಯಿ ಸಚಿವ ರಾಮಲಿಂಗಾರೆಡ್ಡಿ ಅವರು, ಕಾಯಿದೆಯಲ್ಲಿ ಯಾವುದೇ ಹೊಸ ನಿಬಂಧನೆ ಇಲ್ಲ. 2003ರ ಕಾಯ್ದೆಯಲ್ಲಿ ಏನು ಇದೆಯೋ ಹಾಗೆ ಇದೆ ಎಂದು ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಕರ್ನಾಟಕದಲ್ಲೂ ಬಾಂಬೆ ಮಿಠಾಯಿ ಬ್ಯಾನ್​?

ಹಿಂದೂ ದೇವಸ್ಥಾನದ ಹಣ ಅನ್ಯ ಧರ್ಮೀಯರಿಗೆ ಕೊಡಲಾಗ್ತಿದೆ ಎಂಬ ಬಿಜೆಪಿ ಆರೋಪ ವಿಚಾರವಾಗಿ ಪ್ರತಿಕ್ರಿಯಿಸಿ, ಹಿಂದೂ ದೇವಸ್ಥಾನಗಳ ಹಣ ಬೇರೆ ಯಾವುದಕ್ಕೂ ಬಳಕೆಯಾಗುವುದಿಲ್ಲ. ಈ ಹಣ ಮುಜರಾಯಿ ಇಲಾಖೆಗೂ ಬರುವುದಿಲ್ಲ. ಧಾರ್ಮಿಕ ಪರಿಷತ್​ನ ಅಕೌಂಟ್​ನಲ್ಲೇ ಇರುತ್ತೆ. ವಿಧಾನಸಭೆಯಲ್ಲಿ ಈ ತಿದ್ದುಪಡಿಯನ್ನ ಎಲ್ಲರೂ ಸೇರಿ ಪಾಸ್ ಮಾಡಲಾಗಿದೆ.

 

ಬರೋ 30 ಕೋಟಿ ಹಣದಲ್ಲಿ ಸಿ ವರ್ಗದ ದೇವಸ್ಥಾನಕ್ಕೆ ಕೊಡುತ್ತೇವೆ. ಪರ್ಸೆಂಟೇಜ್ ವ್ಯವಹಾರವೆಲ್ಲ ಬಿಜೆಪಿಯವರದ್ದು. ವಿವಾದ ಮಾಡೋದೆ ಬಿಜೆಪಿಯವರ ಹುಟ್ಟುಗುಣ. ಕಾನೂನಿನ ಅರಿವಿಲ್ಲ, ವಿಜಯೇಂದ್ರ ಅವರು ಬಿಜೆಪಿ ರಾಜ್ಯಾದ್ಯಕ್ಷ ಸ್ಥಾನಕ್ಕೆ ಇಮ್ಮೆಚ್ಯುರುಡ್ ಅಂತಾ ಹೇಳಬೇಕಾಗುತ್ತೆ. ಅವರು ಒಂದು ಸಾರಿ ಧಾರ್ಮಿಕ ಪರಿಷತ್​ನ ಪುಸ್ತಕವನ್ನ ಓದಲಿ. ಓದಿದ ನಂತರ ಮಾತಾಡಿದ್ರೆ ಅವರಿಗೆ ಒಂದು ಗೌರವ. ಹಿಂದೆ ಬಿಜೆಪಿ ಸರ್ಕಾರದಲ್ಲಿ ಮಾಡಿರೋದನ್ನ ವಿಜಯೇಂದ್ರ ಅವರಿಗೆ ಕಳಿಸುತ್ತೇನೆ ಎಂದರು.

RELATED ARTICLES

Related Articles

TRENDING ARTICLES