Friday, May 3, 2024

ಡಿಕೆಶಿ-ಡಿಕೆಸು ಜಿನ್ನಾ ಸಂಸ್ಕೃತಿಯವರು : ಕೆ.ಎಸ್. ಈಶ್ವರಪ್ಪ

ಶಿವಮೊಗ್ಗ : ಸಂಸದ ಡಿ.ಕೆ. ಸುರೇಶ್ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಜಿನ್ನಾ ಸಂಸ್ಕೃತಿಯವರು ಎಂದು ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಕುಟುಕಿದರು.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿ.ಕೆ ಸುರೇಶ್ ದಕ್ಷಿಣ ಭಾರತ, ಉತ್ತರ ಭಾರತ ಅಂತ ಹೇಳಿದ್ದಾರೆ. ಡಿ.ಕೆ. ಶಿವಕುಮಾರ್ ಆ ಹೇಳಿಕೆಯನ್ನು ಸ್ವಾಗತ ಮಾಡಿದ್ದಾರೆ. ಇದು ಜಿನ್ನಾ ಸಂಸ್ಕೃತಿ ಎಂದು ಕಿಡಿಕಾರಿದರು.

ಕಾಂಗ್ರೆಸ್ ಪಕ್ಷ ಹಿಂದೂಸ್ತಾನ್, ಪಾಕಿಸ್ತಾನ ಅಂತ ಹೊಡೆದು ವಿಭಜನೆ ಮಾಡಿದರು. ಪಾಕಿಸ್ತಾನದಲ್ಲಿ ಹಿಂದೂಗಳು ಸಾಕಷ್ಟು ನೋವು ಅನುಭವಿಸುತ್ತಿದ್ದಾರೆ. ಭಾರತದಲ್ಲಿ ಎಲ್ಲಾ ಧರ್ಮದವರು ಅಣ್ಣ-ತಂಮ್ಮದಿರ ತರ ಇದ್ದೇವೆ. ಮುಖ್ಯಮಂತ್ರಿಗಳು ಡಿ.ಕೆ. ಸುರೇಶ್​ ಅವರ ಹೇಳಿಕೆಯನ್ನು ಒಪ್ಪಿಲ್ಲ. ನಾನು ಸಂತೋಷದಿಂದ ಸ್ವಾಗತ ಮಾಡುತ್ತೇನೆ ಎಂದು ಹೇಳಿದರು.

ಡಿಕೆಸು ಲೋಕಸಭೆಗೆ ರಾಜೀನಾಮೆ ನೀಡಲಿ

ಇನ್ನೂ ಈ ದೇಶದ ಜನ ಪೂರ್ಣ ಸ್ವತಂತ್ರ ಬಂದಿಲ್ಲ ಅಂತ ನೋವಿನಲ್ಲಿ ಇದ್ದಾರೆ. ಮತ್ತೊಂದು ನೋವನ್ನು ಕೊಡಲು ಡಿ.ಕೆ. ಸುರೆಶ್ ಮಾಡುತ್ತಿದ್ದಾರೆ. ಈ ಹೇಳಿಕೆಯನ್ನು ಕಾಂಗ್ರೆಸ್ ಒಪ್ಪಲ್ಲ ಅಂದುಕೊಂಡಿದ್ದೇನೆ. ಕಾಂಗ್ರೆಸ್ ನಾಯಕರ ಅಭಿಪ್ರಾಯ ಏನು ಅಂತ ದೇಶದ ಜನರಿಗೆ ಹೇಳಬೇಕು. ಕರ್ನಾಟಕಕ್ಕೆ ಪ್ರತ್ಯೇಕ ಬಜೆಟ್ ಕೊಡಲು ಬರುತ್ತಾ..? ಎಂಪಿ ಆಗಿದ್ದಿರಾ, ಬಜೆಟ್ ಮಂಡನೆ ಆಗಿದೆ. ಚೆರ್ಚೆ ಶುರು ಆಗುತ್ತೆ, ಅಲ್ಲಿ ಬಜೆಟ್ ಬಗ್ಗೆ ಮಾತಾಡಿ. ಡಿ.ಕೆ. ಸುರೇಶ್ ಲೋಕಸಭೆಗೆ ರಾಜೀನಾಮೆ ನೀಡಲಿ ಎಂದು ಜಾಡಿಸಿದರು.

ಬದುಕಿದ್ದೇನೆ ಅಂತ ತೋರಿಸೋಕೆ ಮಾತಾಡಿದ್ದಾರೆ

ಯಾರೋ ರೋಡ್​ನಲ್ಲಿ ಹೋಗೋ ದಾಸನ ಥರ ಮಾತನಾಡಬೇಡಿ. ನಾನು ಒಬ್ಬ ರಾಜಕಾರಣಿ ಬದುಕಿದ್ದೇನೆ ಅಂತ ತೋರಿಸೋಕೆ ಹೇಳಿಕೆ ನೀಡಿದ್ದಾರೆ. ದೇಶ ಅಂದರೆ ತಾಯಿ ಅನ್ನುವ ಕಲ್ಪನೆ ಇವರಿಗಿಲ್ಲ. ಭಾರತ್ ಜೋಡೋ ಮಾಡುವರು ಭಾರತ್ ತೋಡೋ ಮಾಡುತ್ತಿದ್ದಾರೆ. ಬಜೆಟ್ ಸಂದರ್ಭದಲ್ಲಿ ತನ್ನ ವೈಯಕ್ತಿಕ ಅಸ್ತಿತ್ವ ತೋರಿಸಿಕೊಳ್ಳಲು ಈ ಹೇಳಿಕೆ ಕೋಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷದಲ್ಲಿ ಯಾರು ಬೇಕಾದರೂ ಮಾತನಾಡಬದು. ಇದು ಕಾಂಗ್ರೆಸ್ ನವರ ನಾಯಕತ್ವ ಎಂದು ಈಶ್ವರಪ್ಪ ಛೇಡಿಸಿದರು.

RELATED ARTICLES

Related Articles

TRENDING ARTICLES