Monday, May 6, 2024

ಕಾಶಿ ಚಂದ್ರಮೌಳೇಶ್ವರನಿಗೆ ಸೂರ್ಯ ರಶ್ಮಿ ಸ್ಪರ್ಶ

ಮಂಡ್ಯ : ಜಿಲ್ಲೆಯ ಶ್ರೀರಂಗಪಟ್ಟಣದ ಚಂದ್ರವನ ಆಶ್ರಮದ ಚಂದ್ರಮೌಳೇಶ್ವರ ದೇಗುಲದಲ್ಲಿ ಶಿವಲಿಂಗದ ಮೇಲೆ ಸೂರ್ಯ ರಶ್ಮಿ ಸ್ಪರ್ಶಿಸಿದ್ದು, ಸಾವಿರಾರು ಭಕ್ತರು ಕೌತುಕದ ಕ್ಷಣಕ್ಕೆ ಸಾಕ್ಷಿಯಾದರು.

ಶ್ರೀರಂಗಪಟ್ಟಣದ ಹೊರವಲಯದಲ್ಲಿರುವ ಚಂದ್ರಮೌಳೇಶ್ಚರ ದೇಗುಲದ ಗರ್ಭಗುಡಿಯಲ್ಲಿನ ಶಿವಲಿಂಗವನ್ನು ಸೂರ್ಯ ರಶ್ಮಿ ಸ್ಪರ್ಶ ಮಾಡಿದೆ. ಇಂದು ಬೆಳಗ್ಗೆ 7.50ಕ್ಕೆ ಸರಿಯಾಗಿ ಸೂರ್ಯ ರಶ್ಮಿ ಶಿವಲಿಂಗ ಸ್ಪರ್ಶ ಮಾಡಿದೆ.

ಇನ್ನು ಈ ಬಾರಿ ಅರ್ಧಗಂಟೆ ತಡವಾಗಿ ಶಿವಲಿಂಗದ ಮೇಲೆ ಸೂರ್ಯರಶ್ಮಿ ಕಿರಣ‌‌‌‌‌‌‌ ಬಿದ್ದಿದೆ. ಪ್ರತಿ ವರ್ಷ ಮಕರ ಸಂಕ್ರಮಣದ ದಿನದಂದು ಈ ದೇಗುಲದಲ್ಲಿ ವಿಸ್ಮಯ ನಡೆಯುತ್ತದೆ. ದೇಗುಲದ ಈ ವಿಸ್ಮಯ ನೋಡಲು ಹಲವೆಡೆಯಿಂದ ಭಕ್ತ ವೃಂದ ಆಗಮಿಸುತ್ತದೆ. ಮಕರ ಸಂಕ್ರಾಂತಿ‌ ಅಂಗವಾಗಿ ದೇಗುಲದಲ್ಲಿ ದೇವರಿಗೆ ವಿಶೇಷ ಪೂಜೆ, ಆಶ್ರಮದಲ್ಲಿ ಸಂಕ್ರಾಂತಿ ಆಚರಣೆ ಮಾಡಲಾಗಿದೆ. ಸಂಕ್ರಾತಿ ಅಂಗವಾಗಿ ಆಶ್ರಮದಲ್ಲಿ ಗೋಪೂಜೆ ನೆರವೇರಿಸಿ ಭಕ್ತರಿಗೆ ಎಳ್ಳು-ಬೆಲ್ಲ ವಿತರಿಸಲಾಗಿದೆ.

18ನೇ ಶತಮಾನದಲ್ಲಿ ದೇಗುಲ ನಿರ್ಮಾಣ

ಮುಮ್ಮಡಿ ಕಷ್ಣರಾಜ ಒಡೆಯರ್ ಅವರು ತಮ್ಮ ತಂದೆ ಖಾಸಾ ಚಾಮರಾಜ ಒಡೆಯರ್ ಅವರ ಸ್ಮರಣಾರ್ಥ ಈ ದೇವಾಲಯವನ್ನು 18ನೇ ಶತಮಾನದಲ್ಲಿ ನಿರ್ಮಿಸಿದ್ದಾರೆ. ಶಿವಲಿಂಗವನ್ನು ಕಾಶಿಯಿಂದ ತರಿಸಿ ಕಾವೇರಿ ನದಿ ದಂಡೆಯಲ್ಲಿ ಪ್ರತಿಷ್ಠಾಪಿಸಲಾಗಿದೆ ಎಂಬ ಇತಿಹಾಸವಿದೆ.

RELATED ARTICLES

Related Articles

TRENDING ARTICLES