Wednesday, May 8, 2024

Mobile Phone SwitchOff: ಇಂದು ರಾತ್ರಿ 8ಗಂಟೆಗೆ ಮೊಬೈಲ್ ಫೋನ್​ ಸ್ವಿಚ್​ ಆಫ್​!

ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ವಿವೋ ‘ಸ್ವಿಚ್‌ಆಫ್’ ಎಂಬ ವಿಶೇಷ ಅಭಿಯಾನವನ್ನು ಆರಂಭಿಸಿದೆ. ಇಂದು ಡಿ.20 ರಂದು ತನ್ನ ಎಲ್ಲಾ ಗ್ರಾಹಕರಿಗೆ ತಮ್ಮ ಸ್ಮಾರ್ಟ್‌ಫೋನ್‌ಗಳನ್ನು ಸ್ವಿಚ್ ಆಫ್ ಮಾಡಲು ಕೇಳಿಕೊಂಡಿದೆ. ಜನರು ಡಿಸೆಂಬರ್ 20 ರಂದು ರಾತ್ರಿ 8 ರಿಂದ 9 ರವರೆಗೆ ಫೋನ್ ಸ್ವಿಚ್ ಆಫ್ ಮಾಡಿ ತಮ್ಮ ಕುಟುಂಬದೊಂದಿಗೆ ಮೋಜು ಮಾಡಲು ಮತ್ತು ಮಕ್ಕಳು ತಮ್ಮ ಹೆತ್ತವರೊಂದಿಗೆ ಸಂತೋಷವಾಗಿರಲು ಕೇಳಿಕೊಂಡಿದೆ.

ಈ ರೀತಿಯಾಗಿ ಅಭಿಯಾನವನ್ನು ಶುರುಮಾಡಲು ವಿವೋ ಕಂಪೆನಿ ನಡೆಸಿದ ಸಮೀಕ್ಷೆಯು ಕಾರಣವಂತೆ, ವಿವೋ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಶೇ.77ರಷ್ಟು ಪೋಷಕರು ತಮ್ಮ ಮಕ್ಕಳು ಅತಿಯಾಗಿ ಸ್ಮಾರ್ಟ್ ಫೋನ್ ಬಳಸುತ್ತಿದ್ದಾರೆ ಎಂದು ದೂರಿದ್ದಾರೆ ಎಂದು ವಿವೋ ಹೇಳಿದೆ. ತಮ್ಮ ಮಕ್ಕಳು ಮಾತ್ರವಲ್ಲದೆ ಪೋಷಕರು ಕೂಡ ಫೋನ್ ಚಟಕ್ಕೆ ಬಿದ್ದಿದ್ದಾರೆ ಎನ್ನಲಾಗಿದೆ. ಪಾಲಕರು ಮತ್ತು ಮಕ್ಕಳ ನಡುವೆ ಅಂತರವಿದ್ದರೆ ಭವಿಷ್ಯದಲ್ಲಿ ಸಮಾಜಕ್ಕೆ ನಷ್ಟವಾಗುತ್ತದೆ ಎಂಬ ಕಾರಣದಿಂದ ಈ ನಿರ್ಧಾರಕ್ಕೆ ಬರಲಾಗಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.

ಇದನ್ನೂ ಓದಿ: ಡಿ. 27 ರಂದು ಕನ್ನಡಕ್ಕಾಗಿ ಕರವೇ ಪ್ರತಿಭಟನೆ!

ಕೆಲವು ಸಮೀಕ್ಷೆಗಳ ಪ್ರಕಾರ, 12 ವರ್ಷದೊಳಗಿನ ಶೇಕಡಾ 42 ರಷ್ಟು ಮಕ್ಕಳು ದಿನಕ್ಕೆ ಎರಡರಿಂದ ನಾಲ್ಕು ಗಂಟೆಗಳ ಕಾಲ ಫೋನ್ ಪರದೆಗಳಿಗೆ ಅಂಟಿಕೊಂಡಿರುತ್ತಾರೆ. 12 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳು ತಮ್ಮ ದಿನದ 47 ಪ್ರತಿಶತವನ್ನು ತಮ್ಮ ಫೋನ್‌ಗಳನ್ನು ನೋಡುತ್ತಾರೆ.

69 ರಷ್ಟು ಮಕ್ಕಳು ತಮ್ಮದೇ ಆದ ಫೋನ್ ಮತ್ತು ಟ್ಯಾಬ್‌ಗಳನ್ನು ಹೊಂದಿದ್ದಾರೆ. 12 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಮಕ್ಕಳು ಯಾವುದೇ ಷರತ್ತುಗಳಿಲ್ಲದೆ ಇಂಟರ್ನೆಟ್ ಪ್ರವೇಶವನ್ನು ಪಡೆಯುತ್ತಿದ್ದಾರೆ ಎಂದು ಸಮೀಕ್ಷೆಗಳು ಬಹಿರಂಗಪಡಿಸಿವೆ. 74 ರಷ್ಟು ಮಕ್ಕಳು ಯೂಟ್ಯೂಬ್ ವೀಕ್ಷಿಸಲು ತಮ್ಮ ಫೋನ್ ಬಳಸುತ್ತಿದ್ದರೆ, 12 ವರ್ಷಕ್ಕಿಂತ ಮೇಲ್ಪಟ್ಟವರು ಗೇಮಿಂಗ್‌ನಲ್ಲಿ ಹೆಚ್ಚಿನ ಸಮಯವನ್ನು ಕಳೆಯುತ್ತಿದ್ದಾರೆ ಎಂದು ಕಂಡುಬಂದಿದೆ.

RELATED ARTICLES

Related Articles

TRENDING ARTICLES