Thursday, May 2, 2024

ಕಾಂಗ್ರೆಸ್ ಸೋಲಿಗೆ ಕಾರಣ ‘ನಮ್ಮ ಪಕ್ಷದಲ್ಲಿ ಇರುವ ಗುಂಪುಗಾರಿಕೆ’ : ಸತ್ಯ ಒಪ್ಪಿಕೊಂಡ ಕೆ.ಎನ್. ರಾಜಣ್ಣ

ತುಮಕೂರು : ಕಾಂಗ್ರೆಸ್ ಪಕ್ಷದ ಸೋಲಿಗೆ ಕಾರಣ ನಮ್ಮ ಪಕ್ಷದಲ್ಲಿ ಇರುವ ಗುಂಪುಗಾರಿಕೆ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ಹೇಳಿದರು.

ಪಂಚರಾಜ್ಯ ಚುನಾವಣೆ ಕುರಿತು ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣಾ ಸಮಯದಲ್ಲಿ ಒಗ್ಗಟ್ಟಾದರೂ ಸಹ ಬಿರುಕು ಮುಚ್ಚುವ ಕೆಲಸ ಆಗಿಲ್ಲ. ಆ ದೃಷ್ಟಿಯಿಂದ ಆ ಒಂದು ಗುಂಪುಗಾರಿಕೆಯಿಂದ ಚುನಾವಣೆಯಲ್ಲಿ ಸೋಲಲಿಕ್ಕೆ ಕಾರಣ ಆಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ಐದು ರಾಜ್ಯದ ಚುನಾವಣಾ ಫಲಿತಾಂಶ ಹೊರಬಂದಿದೆ. ರಾಜ್ಯಸ್ಥಾನ, ಮಧ್ಯಪ್ರದೇಶ, ಛತ್ತೀಸ್​ಗಡ ರಾಜ್ಯದಲ್ಲಿ ಬಿಜೆಪಿಗೆ ಬಹುಮತ ಬಂದಿದೆ. ತೆಲಗಾಂಣದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಬಂದಿದೆ. ಇವೆಲ್ಲಾ ಏನು ಸೂಚಿಸುತ್ತೆ ಅಂದರೆ ಸ್ಥಳೀಯ ಪಕ್ಷಗಳಿಗೆ ಭವಿಷ್ಯವಿಲ್ಲ ಎಂಬುದನ್ನ ಸೂಚಿಸುತ್ತೆ. ಯಾರೆಲ್ಲಾ ಮುಖ್ಯಮಂತ್ರಿಗಳು ಜನಪರ ಕೆಲಸ ಮಾಡಿದ್ದಾರೆ, ಜನರ ವಿಶ್ವಾಸ ಗಳಿಸಿದ್ದಾರೆ, ಎಲ್ಲಿ ಗೊಂದಲ ಇರೋದಿಲ್ಲ. ಅಂತಹ ರಾಜ್ಯದಲ್ಲಿ ಮತ್ತೊಮ್ಮೆ ಸರ್ಕಾರ ರಚನೆ ಆಗಿದೆ ಎಂದು ಹೇಳಿದ್ದಾರೆ.

ಕುಟುಂಬ ರಾಜಕಾರಣವನ್ನು ಜನರು ಸಹಿಸಲ್ಲ

ಕಾಂಗ್ರೆಸ್​ಗೆ ತೆಲಂಗಾಣದಲ್ಲಿ ಒಂದು ಕಾಲದಲ್ಲಿ 15 ಸೀಟು 20 ಬರುತ್ತಿತ್ತು. ಚಂದ್ರಶೇಖರ್ ರಾವ್ ಅವರು ತೆಲಂಗಾಣ ರಾಜ್ಯದ ಸೃಷ್ಟಿಕರ್ತರು. ಅವರಿಗೆ ಎರಡು ಬಾರಿ ಅವಕಾಶ ನೀಡಿದರು. ಅವರು ಕುಟುಂಬಕ್ಕೆ ಸೀಮಿತವಾಗಿ ಕುಟುಂಬ ರಾಜಕಾರಣ ಮಾಡಿದರು. ಆದರೆ, ಕುಟುಂಬ ರಾಜಕಾರಣವನ್ನು ಜನರು ಸಹಿಸಲ್ಲ. ಅದಕ್ಕೆ ಈ ತೀರ್ಮಾನವನ್ನು ಮಾಡಿದ್ದಾರೆ. ಜನರ ಆಶೀರ್ವಾದಕ್ಕೆ ತೀರ್ಮಾನಕ್ಕೆ ತಲೆಬಾಗುತ್ತೇವೆ ಎಂದು ಕೆ.ಎನ್. ರಾಜಣ್ಣ ತಿಳಿಸಿದ್ದಾರೆ.

RELATED ARTICLES

Related Articles

TRENDING ARTICLES