Monday, May 6, 2024

ವಿಪಕ್ಷ ನಾಯಕನಾಗಿ ಆರ್. ಅಶೋಕ್ ಆಯ್ಕೆ : ‘ನ ದೈನ್ಯಂ, ನ ಪಲಾಯನಂ’ ಎಂದು ಶಾಸಕ ಯತ್ನಾಳ್ ಪೋಸ್ಟ್

ಬೆಂಗಳೂರು : ವಿಪಕ್ಷ ನಾಯಕನಾಗಿ ಪ್ರಭಾವಿ ಒಕ್ಕಲಿಗ ನಾಯಕ ಆರ್‌.ಅಶೋಕ್‌ ಆಯ್ಕೆಯಾಗಿದ್ದಾರೆ. ಈ ಮೂಲಕ ಸದನದಲ್ಲಿ ಕಾಂಗ್ರೆಸ್​ ಸರ್ಕಾರಕ್ಕೆ ಚಾಟಿ ಬೀಸಲು ಅಶೋಕ್ ‘ಸದನ ಸಾಮ್ರಾಟ್’ ಆಗಿ ಹೊರಹೊಮ್ಮಿದ್ದಾರೆ.

ಇತ್ತ, ಆರ್​. ಅಶೋಕ್ ಆಯ್ಕೆಗೂ ಮೊದಲೇ ಬಿಜೆಪಿ ಹಿರಿಯ ನಾಯಕ, ಮಾಜಿ ಕೇಂದ್ರ ಸಚಿವರಾದ ಬಸನಗೌಡ ಪಾಟೀಲ್ ಯತ್ನಾಳ್ ಅವರು ಹೋಟೆಲ್​ನಿಂದ ಸಿಟ್ಟಿಗೆದ್ದು ಹೊರನಡೆದಿದ್ದರು. ಬಳಿಕ ತಮ್ಮ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಒಂದನ್ನು ಮಾಡಿದ್ದಾರೆ.

‘ನ ದೈನ್ಯಂ, ನ ಪಲಾಯನಂ’ ಎಂದು ಯತ್ನಾಳ್ ಎಕ್ಸ್​ನಲ್ಲಿ ಬರೆದುಕೊಂಡಿದ್ದಾರೆ. ಯೋಧ ಯಾವುದಕ್ಕೂ ಪಶ್ಚಾತಾಪ ಹಾಗೂ ದೂರುವುದಿಲ್ಲ. ಅವನ ಬದುಕೇ ಹಾಗೇ ಮುಗಿಯದ ಸವಾಲು. ಸವಾಲುಗಳು ಬಹುಶಃ ಒಳ್ಳೆಯದು ಅಥವಾ ಕೆಟ್ಟದ್ದಾಗಿರಲು ಸಾಧ್ಯವಿಲ್ಲ. ಸವಾಲುಗಳೆಲ್ಲವೂ ಚಿಕ್ಕ ಸವಾಲು ಎಂದು‌ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.

ಆರ್. ಅಶೋಕ್ ಪ್ಲಸ್

  • ಒಕ್ಕಲಿಗರ ಪ್ರಭಾವಿ ನಾಯಕರಾಗಿರುವ ಆರ್‌.ಅಶೋಕ್
  • ಸತತ 7 ಬಾರಿ ಗೆಲುವು ಸಾಧಿಸಿರುವ ಅಶೋಕ್
  • ಸಂಘ ನಿಷ್ಠೆ, ಬಿ.ಎಸ್‌. ಯಡಿಯೂರಪ್ಪರ ಆಪ್ತರಾಗಿರುವುದು
  • ಜೆಡಿಎಸ್‌ ಜೊತೆ ಮೈತ್ರಿ ಹೊಂದಾಣಿಕೆಗೆ ಅನುಕೂಲ
  • ಗೃಹ, ಕಂದಾಯ, ಸಾರಿಗೆಯಂತಹ ಪ್ರಭಾವಿ ಖಾತೆ ನಿಭಾಯಿಸಿದ ಅನುಭವ
  • ಮೈತ್ರಿಯಾಗಿರುವುದರಿಂದ ಸದನದ ಒಳಗೆ ಹೆಚ್‌.ಡಿ. ಕುಮಾರಸ್ವಾಮಿ ಬೆಂಬಲ

RELATED ARTICLES

Related Articles

TRENDING ARTICLES