Wednesday, May 8, 2024

200 ರೂಪಾಯಿ ಆಸೆ ತೋರಿಸಿ 2 ಲಕ್ಷ ರೂ. ಲಪಟಾಯಿಸಿದ ಖದೀಮರು

ಮಡಿಕೇರಿ: ಬ್ಯಾಂಕಿಗೆ ಲೋನ್ ಹಣ ಕಟ್ಟಲು ಚಿನ್ನ ಅಡವಿಟ್ಟು ಕೊಂಡೊಯ್ಯುತ್ತಿದ್ದ ಎರಡು ಲಕ್ಷ ರೂ. ಹಣವನ್ನು ಖದೀಮರು ಗಮನ ಬೇರೆಡೆ ಸೆಳೆದು (Attention divert) ಲಪಟಾಯಿಸಿದ (Money Snatching) ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ (Kushalagara town) ನಡೆದಿದೆ.

ಮೂಲತಃ ಪಿರಿಯಾಪಟ್ಟಣ ತಾಲೂಕು ಬೆಣಗಾಲ್ ಆನಂದನಗರದ ನಿವಾಸಿಯಾದ ಒಹಿಲೇಶ್ (52) ಎಂಬವರು ಹಣ ಕಳೆದುಕೊಂಡಿದ್ದಾರೆ.

ಕುಶಾಲನಗರದಲ್ಲಿ ಚಿನ್ನ ಅಡವಿಟ್ಟ ಒಹಿಲೇಶ್ ಸ್ನೇಹಿತರನ್ನು ಬಸ್ ನಿಲ್ದಾಣಕ್ಕೆ ಡ್ರಾಪ್ ಮಾಡೋ ವೇಳೆ ಘಟನೆ ಸಂಭಬಿಸಿದೆ. ಅಯ್ಯಪ್ಪಸ್ವಾಮಿ ದೇವಾಲಯ ರಸ್ತೆ ಬಳಿ, ನಿಮ್ಮ ಹಣ ರಸ್ತೆಯಲ್ಲಿ ಬಿದ್ದಿದೆ ಎಂದು ಗಮನ ಬೇರೆಡೆ ಸೆಳೆದಿದ್ದಾರೆ.

ಇದನ್ನೂ ಓದಿ: PSI ನೇಮಕ ಅಕ್ರಮ: ಇಂದು ಹೈಕೋರ್ಟ್ ತೀರ್ಪು

ಒಯಿಲೇಶ್ ಬೈಕ್ ನಿಂದ ಕೆಳಗಿಳಿದು ರಸ್ತೆಯಲ್ಲಿ ಬಿದ್ದಿದ್ದ ಹಣವನ್ನು ಸಂಗ್ರಹಿಸುತ್ತಿದ್ದ ವೇಳೆ ಬೈಕ್ ನ ಪರ್ಸ್ ನಲ್ಲಿಟ್ಟಿದ್ದ ಪಾಸ್ ಬುಕ್ ಸಹಿತ 2 ಲಕ್ಷ 9 ಸಾವಿರ ಹಣವನ್ನು ದೋಚಿ ಪರಾರಿಯಾಗಿದ್ದಾರೆ. ಈ ದೃಶ್ಯ ಖಾಸಗಿ ಹೋಟೆಲ್‌ನಲ್ಲಿ‌ ಸಿಸಿ ಟಿವಿಯಲ್ಲಿ ಕವರ್ ಆಗಿದೆ.

ಸ್ಥಳಕ್ಕೆ ಎಸ್ಪಿ ರಾಮರಾಜನ್ ಭೇಟಿ ನೀಡಿ ಪರಿಶೀಲನೆ ಮಾಡಿ ನಾಲ್ವರ ತಂಡದಿಂದ ಕೃತ್ಯ ಎಸಗಿರುವ ಬಗ್ಗೆ ಅನುಮಾನದ ಸಂಕೆ ಮೂಡಿದೆ. ಈ ಘಟನೆ  ಕುಶಾಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲೆಯಾಗಿದೆ.

 

RELATED ARTICLES

Related Articles

TRENDING ARTICLES