Wednesday, May 8, 2024

ಶ್ರೀಮಂತನಾಗು ತಪ್ಪಿಲ್ಲ, ಇನ್ನೊಬ್ಬರ ಜೇಬಿಗೆ ಕೈ ಹಾಗಬೇಡ : ಸಂತೋಷ್ ಹೆಗ್ಡೆ

ಮಂಡ್ಯ : ಕರ್ನಾಟಕ ಲೊಕಾಯುಕ್ಕೆ ಬಂದ ಮೇಲೆ ಸಮಾಜದ ಬಗ್ಗೆ ತಿಳಿಯಿತು. ಸಮಾಜ ತಪ್ಪು ಮಾಡಿದವರನ್ನ ಶಿಕ್ಷಿಸುತ್ತಿತ್ತು. ಜೈಲಿಗೆ ಹೋದವರ ಜೊತೆ ಹೋಗಬೇಡ ಅಂತಿದ್ರು. ಇವತ್ತು ಶ್ರೀಮಂತಿಕೆ ಗೌರವಿಸುವ ಕೆಲಸ ಆಗುತ್ತಿದೆ. ಶ್ರೀಮಂತನಾಗುವುದು ತಪ್ಪಿಲ್ಲ, ಇನ್ನೊಬ್ಬರ ಜೇಬಿಗೆ ಕೈ ಹಾಗಬಾರದು ಎಂದು ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಮತ್ತು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.

ಮಂಡ್ಯ ಜಿಲ್ಲೆ ಮದ್ದೂರಿನ ವಳಗೆರೆಹಳ್ಳಿಯಲ್ಲಿ ಕರಡೀಗೌಡ ಪ್ರತಿಷ್ಠಾನದಿಂದ ಹಮ್ಮಿಕೊಂಡಿದ್ದ ಡಿ.ಕರಡೀಗೌಡರ ಪುಣ್ಯಸ್ಮರಣೆಯ 10ನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸಮಾಜ ಬದಲಾವಣೆಯಾಗಬೇಕು. ತೃಪ್ತಿ ಇದ್ದರೆ ಯಾವ ರೋಗ ಬರಲ್ಲ, ತೃಪ್ತಿ ಅಳವಡಿಸಿಕೊಳ್ಳಿ. ಮಾನವೀಯತೆ ನಮ್ಮ ಹಿರಿಯರು ಕಟ್ಟಿದ ಮೌಲ್ಯ. ಮೊದಲು ಮಾನವನಾಗಬೇಕು. ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಬರಲಿ ಎಂದು ಆಶಿಸಿದರು.

ಸಮಾಜಕ್ಕೆ ಒಳ್ಳೆಯ ಕೆಲಸ ಮಾಡಿ ತೋರಿಸಿದ ವ್ಯಕ್ತಿಗಳನ್ನು ಗುರುತಿಸಿ ಸನ್ಮಾನ ಮಾಡುವುದು ಅರ್ಥಪೂರ್ಣ. ಪ್ರತಿಷ್ಠಾನದ ವತಿಯಿಂದ ನಡೆಯುತ್ತಿರುವ ಕಾರ್ಯಕ್ರಮ ಒಳ್ಳೆಯದು. ನಟ ಡಾ. ಶಿವರಾಜ್ ಕುಮಾರ್ ಅವರು ಉತ್ತಮ ಸಾಧಕ. ಅವರ ಮೇಲೆ ಜನರು ಸಾಕಷ್ಟು ಪ್ರೀತಿ ಇಟ್ಟಿದ್ದಾರೆ. ಕರ್ನಾಟಕ ಸೇರಿ ಹಲವು ಭಾಗದಲ್ಲಿ ಒಳ್ಳೆಯ ಪ್ರೀತಿಗಳಿಸಿದ್ದಾರೆ. ಅವರಿಗೆ ಸನ್ಮಾನ ಮಾಡುತ್ತಿರುವುದು ಸಂತೋಷ. ಪ್ರೊ. ಜಯದೇವ ಅವರಿಗೂ ನೀಡುತ್ತಿರುವುದು ಸಂತೋಷ ಎಂದು ಹೇಳಿದರು.

RELATED ARTICLES

Related Articles

TRENDING ARTICLES