Thursday, May 2, 2024

ನಾಳೆ ಬೆಳಗ್ಗೆ 9 ರಿಂದ 2 ಗಂಟೆವರೆಗೆ ಧರಣಿ ಕೂರ್ತಿನಿ : ಮುನಿರತ್ನ

ಬೆಂಗಳೂರು : ನಾಳೆ ಬೆಳಗ್ಗೆ 9 ರಿಂದ ಮಧ್ಯಾಹ್ನ 2 ಗಂಟೆವರೆಗೆ ವಿಧಾನಸೌಧದಲ್ಲಿ ಧರಣಿ ಕೂರುತ್ತೇನೆ. ನನ್ನ ಕ್ಷೇತ್ರಕ್ಕೆ ಅನ್ಯಾಯ ಆಗಿರೋದ್ರಿಂದ ನಾನು ಧರಣಿ ಕೂರುತ್ತಿದ್ದೇನೆ ಎಂದು ಆರ್.ಆರ್ ನಗರ ಶಾಸಕ ಮುನಿರತ್ನ ಹೇಳಿದರು.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಮಾಜಿ ಡಿಸಿಎಂ ಡಾ.ಸಿ.ಎನ್ ಅಶ್ವಥ್ ನಾರಾಯಣ ನಾಳೆ ಧರಣಿಗೆ ಬೆಂಬಲ ಕೊಡ್ತಿದಾರೆ, ಅವರೂ ಬರ್ತಿದಾರೆ. ಆರ್. ಅಶೋಕ್ ಅವರು ನೈತಿಕ ಬೆಂಬಲ ಕೊಟ್ಟಿದಾರೆ, ಬೇರೆ ಕಡೆ ಪೂರ್ವ ನಿಗದಿ ಕಾರ್ಯಕ್ರಮಕ್ಕೆ ಅಶೋಕ್ ಹೋಗ್ತಿದಾರೆ ಎಂದರು.

ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ.ಕೆ ಸುರೇಶ್ 10 ವರ್ಷದಿಂದ ಸಂಸದರು. ಆರ್.ಆರ್ ನಗರಕ್ಕೆ ಅವರು ಪ್ರತೀ ವರ್ಷ 10 ಲಕ್ಷ ಅನುದಾನ ಕರ್ಚು ಮಾಡಿದ್ರೂ ಇದುವರೆಗೆ ಒಂದು ಕೋಟಿ ಕೊಡಬೇಕಿತ್ತು. ಆದ್ರೆ, ಅವರು 10 ವರ್ಷದಲ್ಲಿ ಏನೂ ಕೊಟ್ಟಿಲ್ಲ ಎಂದು ಮುನಿರತ್ನ ದೂರಿದರು.

ಅನುದಾನ ಹಿಂಪಡೆದು ಜನರಿಗೆ ಏನ್ ಹೇಳ್ತಾರೆ?

ಡಿಕೆಶಿ ಅವರು ಅವರ ಸಹೋದರ ಸಂಸದರಾಗಿರುವ ಕ್ಷೇತ್ರದ ಅನುದಾನವನ್ನು ಈ ರೀತಿ ಬೇರೆ ಕಡೆ ಹಂಚಿಕೆ ಮಾಡೋ ಮೂಲಕ ಅವರ ಸಹೋದರನಿಗೇ ಕೆಟ್ಟದ್ದು ಬಯಸಿದ್ದಾರೆ. ಇತಿಹಾಸದಲ್ಲಿ ಕೊಟ್ಟಿರುವ ಅನುದಾನ ವಾಪಸ್ ಪಡೆದು ವರ್ಗಾವಣೆ ಮಾಡಿರೋದು ಇದೇ ಮೊದಲು. ಇನ್ನೇನು ಲೋಕಸಭೆ ಚುನಾವಣೆ ಬರ್ತಿದೆ. ಈಗ ಇವರು ಅನುದಾನ ವಾಪಸ್ ಪಡೆದು ಜನರಿಗೆ ಏನ್ ಹೇಳ್ತಾರೆ?ಎಂದು ಚಾಟಿ ಬೀಸಿದರು.

ಏಕಾಏಕಿ 485 ಕೋಟಿ ಅನುದಾನ ವಾಪಸ್

ನಮ್ಮ ಬಿಜೆಪಿ ಸರ್ಕಾರ ಇದ್ದಾಗ ಅಂದಿನ ನಮ್ಮ ಸಿಎಂ ಬಸವರಾಜ ಬೊಮ್ಮಾಯಿ ಅವರು ರಾಜರಾಜೇಶ್ವರಿ ನಗರ ಕ್ಷೇತ್ರಕ್ಕೆ126 ಕೋಟಿ ಅನುದಾನ ಅಭಿವೃದ್ಧಿಗೆ ಕೊಟ್ಟಿದ್ರು. ನಿನ್ನೆ ಕಾಂಗ್ರೆಸ್ ಸರ್ಕಾರ ಏಕಾಏಕಿ 485 ಕೋಟಿ ಅನುದಾನವನ್ನು ವಾಪಸ್ ಪಡೆದು ಕಾಂಗ್ರೆಸ್ ಶಾಸಕರಿಗೆ ಹಂಚಿಕೆ ಮಾಡಿದೆ. ನಮ್ಮ ಕ್ಷೇತ್ರದ 126 ಕೋಟಿ ಅನುದಾನವನ್ನು ಯಶವಂತಪುರಕ್ಕೆ 40 ಕೋಟಿ, ಬ್ಯಾಟರಾಯನಪುರಕ್ಕೆ 40 ಕೋಟಿ, ಕೆಜಿ ಹಳ್ಳಿಗೆ 40 ಕೋಟಿ ಕೊಟ್ಟಿದೆ ಎಂದು ತಿಳಿಸಿದರು.

RELATED ARTICLES

Related Articles

TRENDING ARTICLES