Wednesday, May 8, 2024

ನಾನು ಪ್ರಧಾನಿ ಮೋದಿಗೆ ‘ವಿಷದ ಹಾವು’ ಎಂದಿಲ್ಲ : ಉಲ್ಟಾ ಹೊಡೆದ ಖರ್ಗೆ

ಬೆಂಗಳೂರು : ಪ್ರಧಾನಿ ನರೇಂದ್ರ ಮೋದಿ ಅವರನ್ನು ನಾನು ‘ವಿಷದ ಹಾವು’ ಎಂದು ಹೇಲಿಲ್ಲ ಎನ್ನುವ ಮೂಲಕ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಉಲ್ಟಾ ಹೊಡೆದಿದ್ದಾರೆ.

ಗದಗ ಜಿಲ್ಲೆಯ ರೋಣದಲ್ಲಿ ಮಾತನಾಡಿದ ಅವರು, ನಾನು ಬಿಜೆಪಿ ಪಕ್ಷ ಹಾವು ಇದ್ದಂತೆ ಎಂದು ಹೇಳಿದ್ದ. ನೆಕ್ಕಿ ನೋಡುತ್ತೇನೆ ಅಂದ್ರೆ ಸತ್ತು ಹೋಗ್ತಾರೆ ಅಂತಾ ಹೇಳಿದ್ದೆ. ನಾನು ವೈಯಕ್ತಿಕವಾಗಿ ಯಾರಿಗೂ ಹೇಳಿಲ್ಲ, ಯಾರ ಹೆಸರನ್ನೂ ಉಲ್ಲೇಖಿಸಿಲ್ಲ ಎಂದು ಸ್ಪಷ್ಟನೆ ಕೊಟ್ಟಿದ್ದಾರೆ.

ಬಿಜೆಪಿ ಐಡಿಯಾಲಾಜಿ ಒಂದು ವಿಷದಂತಿದೆ. ಆ ಐಡಿಯಾಲಾಜಿ ನೀವು ಸಪೋರ್ಟ್ ಮಾಡಿದ್ರೆ, ನೀವು ನೆಕ್ಕಿ ನೋಡ್ತೆವಿ ಅಂದ್ರೆ ಸಾವು ಖಚಿತ ಅಂತಾ ಹೇಳಿದ್ದು. ವೈಯಕ್ತಿಕವಾಗಿ ಯಾರ ಬಗ್ಗೆಯೂ ನನಗೆ ಅಸೂಯೆ ಇಲ್ಲ ಎಂದು ಖರ್ಗೆ ನುಣುಚಿಕೊಂಡಿದ್ದಾರೆ.

ಇದನ್ನೂ ಓದಿ : ಕಾಂಗ್ರೆಸ್ 70 ವರ್ಷಗಳಲ್ಲಿ ಕೇವಲ 7 ಏಮ್ಸ್ ನಿರ್ಮಿಸಿದೆ : ಪ್ರಧಾನಿ ಮೋದಿ

ಕಾಂಗ್ರೆಸ್ ಅಭ್ಯರ್ಥಿ ಜಿ.ಎಸ್. ಪಾಟೀಲ್ ಪರ‌ ಮತಯಾಚನೆ ಮಾಡುತ್ತಿರುವ ಮಲ್ಲಿಕಾರ್ಜುನ ಖರ್ಗೆ, ಗದಗ ಜಿಲ್ಲೆಯ‌ ಗಜೇಂದ್ರಗಡ ತಾಲೂಕಿನ ನರೇಗಲ್ ಪಟ್ಟಣದಲ್ಲಿ ಭಾಷಣದ ವೇಳೆ, ಪ್ರಧಾನಿ ಮೋದಿಯನ್ನು ವಿಷದ ಸರ್ಪಕ್ಕೆ ಹೋಲಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ವಿಷ ಸರ್ಪ. ವಿಷ ಸರ್ಪ ನೆಕ್ಕಿದ್ರೆ ಸತ್ತು ಹೋಗ್ತಾರೆ. ನಿಮ್ಮ ಮನೆಯಲ್ಲಿ ದೇಶಕ್ಕಾಗಿ‌ ಒಂದೂ‌ ನಾಯಿ‌ ಕೂಡ ಸತ್ತಿಲ್ಲ. ದೇಶಕ್ಕೆ ಬಿಜೆಪಿಯವರ ಕೊಡಿಗೆ ಏನು ಅಂತಾ ಹೇಳಲಿ ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದರು.

ನಾವು ಯಾರಿಗೂ ಬಗ್ಗೋದಿಲ್ಲ

ಕರ್ನಾಟಕದಲ್ಲಿ ನಾವು ಯಾರಿಗೂ ಬಗ್ಗೋದಿಲ್ಲ. ಗುಜರಾತಿನಲ್ಲಿ ಯಾವ ರೀತಿ ಇಲ್ಲಿನ ಮಣ್ಣಿನ ಮಕ್ಕಳು ನಮಗೆ ಓಟು ಕೊಡಿ ಅಂತ ಕೇಳ್ತಾರೆ. ನಾವು ಸಹ ಕರ್ನಾಟಕದ ಮಣ್ಣಿನ ಮಕ್ಕಳು. ನಮಗೂ ಕನ್ನಡ ಅಭಿಮಾನ ಇದೆ. ಯಾವನು ಗುಜರಾತ್ ನಿಂದರಾ ಬರಲಿ, ಅಹ್ಮದಾಬಾದ್ ನಿಂದರಾ ಬರಲಿ ಯಾರಿಗೂ ಬಗ್ಗೋದು ಬೇಡ ಎಂದು ಖರ್ಗೆ ಗುಡುಗಿದ್ದರು.

RELATED ARTICLES

Related Articles

TRENDING ARTICLES