Thursday, May 9, 2024

ಧರ್ಮ ದಂಗಲ್‌ ಮಧ್ಯೆ ಶುರುವಾಯ್ತು ಮುಸ್ಲಿಂ ಕಾಲೇಜು ವಿವಾದ

ಮಂಗಳೂರು : ರಾಜ್ಯದಲ್ಲಿ ಮತ್ತೊಂದು ಧರ್ಮದಂಗಲ್‌ಗೆ ಶುರುವಾಗಿದೆ. ಹೌದು, ಮುಸ್ಲಿಂ ಹೆಣ್ಣು ಮಕ್ಕಳಿಗೆ ಪ್ರತ್ಯೇಕ ಕಾಲೇಜು ಸ್ಥಾಪನೆ ಕೂರಿತು ವಿವಾದ ಎದ್ದಿದೆ. ಈ ಕಾಲೇಜುಗಳ ನಿರ್ಮಾಣಕ್ಕೆ ಸರ್ಕಾರ ಮುಂದಾಗಿದೆ ಅನ್ನೋ ವಿಚಾರ ರಾಜ್ಯದಲ್ಲಿ ಭಾರೀ ಸದ್ದು ಮಾಡ್ತಿದೆ. ಈ ಮಧ್ಯೆ, ಹಿಂದೂ ಪರ ಸಂಘಟನೆಗಳು ಸರ್ಕಾರದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ.

ಮುಸ್ಲಿಂ ಕಾಲೇಜುಗಳ ಸ್ಥಾಪನೆಗೆ ಮುಂದಾಗಿರುವ ಸರ್ಕಾರ ಕೇಸರಿ ಕಾಲೇಜು ಆರಂಭಕ್ಕೂ ಒತ್ತು ನೀಡ್ಬೇಕು. ಹಿಂದೂಗಳ ಕಾಲೇಜ್‌ ಬೇಕು ಅಂತ ಹಿಂದೂ ಪರ ಸಂಘಟನೆಗಳು ಒತ್ತಾಯಿಸಿವೆ. ಒಂದು ವೇಳೆ ಮುಸ್ಲಿಂ ಕಾಲೇಜಿಗೆ ಅನುಮತಿ ಕೊಟ್ರೆ ಹೋರಾಟದ ಎಚ್ಚರಿಕೆ ನೀಡಿವೆ.

25 ಕೋಟಿ ವೆಚ್ಚದಲ್ಲಿ 10 ಕಾಲೇಜು ಆರಂಭಿಸಲು ಉದ್ದೇಶಿಸಲಾಗಿದೆ. ಮಂಗಳೂರು, ಕೊಡಗು, ಚಿಕ್ಕಮಗಳೂರು, ಕಲಬುರಗಿ ಸೇರಿ 10 ಜಿಲ್ಲೆಗಳಲ್ಲಿ ಕಾಲೇಜು ನಿರ್ಮಾಣವಾಗಲಿವೆ. ಕಾಲೇಜು ಸ್ಥಾಪಿಸಲು 6 ತಿಂಗಳ ಹಿಂದೆಯೇ ತೀರ್ಮಾನ ಮಾಡಿದ್ದೇವೆ ಎಂದು ವಕ್ಫ್ ಬೋರ್ಡ್ ಅಧ್ಯಕ್ಷ ಮಹಮ್ಮದ್ ಶಾಫಿ ಸಅದಿ ಪ್ರತಿಕ್ರಿಯೆ ನೀಡಿದ್ದಾರೆ.

10 ಕಾಲೇಜು ಸ್ಥಾಪನೆಗೆ ಅನುದಾನ ನೀಡಲು ವಕ್ಫ್‌ಬೋರ್ಡ್‌ ರೆಡಿ ಅಂತಿದೆ.. ಆದ್ರೆ, ವಿವಾದ ಹೆಚ್ಚಾಗುತ್ತಿದ್ದಂತೆ ಎಚ್ಚತ್ತಿರುವ ಸರ್ಕಾರ ಅಂತಹ ಯಾವುದೇ ಉದ್ದೇಶ ಇಲ್ಲ. ನಮಗೆ ಯಾವುದೇ ಪ್ರಸ್ತಾಪ ಬಂದಿಲ್ಲ ಅಂತ ಸಿಎ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಮುಸ್ಲಿಂ ಕಾಲೇಜು ವಿಚಾರ ಕಾಂಗ್ರೆಸ್‌ ಟೂಲ್‌ಕಿಟ್‌ನ ಒಂದು ಭಾಗ ಎಂದು ರಾಜ್ಯ ಬಿಜೆಪಿ ಆರೋಪ ಮಾಡಿದೆ.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಟೂಲ್‌ಕಿಟ್‌ ಸುದ್ದಿಗಳು ಆರಂಭವಾಗಿವೆ. ಅದರಲ್ಲಿ ಪ್ರತ್ಯೇಕ ಮುಸ್ಲಿಂ ಕಾಲೇಜು ಸುದ್ದಿಯೂ ಒಂದು ಎಂದು ಕಮಲ ಪಡೆ ಕಿಡಿಕಾರಿದೆ.. ರಾಜ್ಯ ಸರ್ಕಾರದ ಬಳಿ ಮುಸ್ಲಿಂ ಹೆಣ್ಣು ಮಕ್ಕಳಿಗಾಗಿ ಪ್ರತ್ಯೇಕ ಕಾಲೇಜು ಪ್ರಸ್ತಾಪ ಇಲ್ಲವೇ ಇಲ್ಲ ಅಂತ ಹೇಳ್ತಿದ್ದಾರೆ.

ಒಟ್ನಲ್ಲಿ, ಚುನಾವಣೆ ಸಮೀಪವಾಗ್ತಿದ್ದಂತೆ ಒಂದಲ್ಲೊಂದು ವಿವಾದಗಳು ರಾಜಕೀಯ ಅಂಗಳಕ್ಕೆ ಪ್ರವೇಶ ಮಾಡಿ ಬಿಡ್ತಾವೆ.. ಹಿಜಾಬ್‌ ಸಂಘರ್ಷದ ನಂತರ ಸರ್ಕಾರ ಸಮಾಧಾನ ಮಾಡೋಕೆ ಹೊರಟಿದೆ ಅನ್ನೋ ಅನುಮಾನ ಕೂಡ ಎದ್ದಿದೆ. ಈ ಮಧ್ಯೆ, ಚುನಾವಣಾ ಅಖಾಡದಲ್ಲಿ ಕಾಂಗ್ರೆಸ್‌ ಮತ್ತು ಬಿಜೆಪಿ ಟಾಕ್‌ ವಾರ್‌ ಶುರುಮಾಡಿವೆ.

RELATED ARTICLES

Related Articles

TRENDING ARTICLES