Tuesday, May 21, 2024

ತ್ಯಾಗಕ್ಕೆ ಇನ್ನೊಂದು ಹೆಸರೆ ಮಲ್ಲಿಕಾರ್ಜುನ ಖರ್ಗೆ; ಹಾಡಿ ಹೊಗಳಿದ ಡಿಕೆ ಶಿವಕುಮಾರ್​

ಬೆಂಗಳೂರು: ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುತ್ತಿರುವ ಸರ್ವೋದಯ ಸಮಾವೇಶಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಆಗಮಿಸಿದರು.

ಬಳಿಕ ಈ ಸಮಾವೇಶದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ತ್ಯಾಗಕ್ಕೆ ಇನ್ನೊಂದು ಹೆಸರೆ ಮಲ್ಲಿಕಾರ್ಜುನ ಖರ್ಗೆ, ಪಕ್ಷಕ್ಕಾಗಿ ಹಲವು ಬಾರಿ ತ್ಯಾಗ ಮಾಡಿದ್ದಾರೆ. 1985 ರಿಂದ ನಾನು ‌ಖರ್ಗೆಯವರನ್ನು ಹತ್ತಿರದಿಂದ ನೋಡಿದ್ದೇನೆ. ಎಲ್ಲ ವರ್ಗಕ್ಕೆ ನ್ಯಾಯ ಸಿಗಬೇಕು ಅಂತ ಹೋರಾಟ ಮಾಡಿದರು ಹಾಡಿ ಹೊಗಳಿದ್ದಾರೆ.

ಭಾರತ್ ಜೋಡೊ ಯಾತ್ರೆ ಸಂದರ್ಭದಲ್ಲಿ ಎಐಸಿಸಿ ಚುನಾವಣೆ ನಡೆತು. ಕರ್ನಾಟಕ ಈ ಚುನಾವಣೆಗೆ ಸಾಕ್ಷಿ ಆಯಿತು. ಕಾರ್ಮಿಕನ ಮಗ ಇವತ್ತು ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಇದು ಮಲ್ಲಿಕಾರ್ಜುನ್​ ಖರ್ಗೆ ಅವರಿಗೆ ಒಲಿದು ಬಂದ ಭಾಗ್ಯ ಎಂದರು.

ಎಲ್ರೂ ನನಗೆ ಡಿಕೆಶಿ ಕನಕಪುರ ಬಂಡೆ ಎಂದು ಕರೆಯುತ್ತಾರೆ. ಆದ್ರೆ ನಾನು ಬಂಡೆ ಅಲ್ಲ. ಮಲ್ಲಿಕಾರ್ಜುನ ಖರ್ಗೆ ಬಡವರ ಬಂಡೆ. ಸದನದಲ್ಲಿ ಸೋನಿಯಾ ಗಾಂಧಿ ಅವರೇ ಹೇಳಿದ್ದಾರೆ. ಖರ್ಗೆ ಬಡವರಿಗೆ ಬಹಳಷ್ಟು ಕೆಲಸ ಮಾಡ್ತಾರೆ ಎಂದು ಸೋನಿಯಾ ಗಾಂಧಿ ಅವರೇ ಖರ್ಗೆ ಇಸ್ ರಾಕ್ ಎಂದು ಹೇಳಿದ್ದಾರೆ. ಕಲ್ಯಾಣ ಕರ್ನಾಟಕಕ್ಕೆ 370 ಕಲಂ ಜಾರು ಮಾಡುವುದಕ್ಕೆ ಖರ್ಗೆ ಹೋರಾಟ ಮಾಡಿದ್ದಾರೆ ಎಂದು ಡಿಕೆಶಿ ಹೇಳಿದರು.

RELATED ARTICLES

Related Articles

TRENDING ARTICLES