Tuesday, May 21, 2024

ಪುರಸಭಾ ಸದಸ್ಯರ ಮೋಜು ಮಸ್ತಿಗೆ ಸಾರ್ವಜನಿಕರು ಆಕ್ರೋಶ

ತುಮಕೂರು : ಜಿಲ್ಲೆಯಲ್ಲಿ ಅತಿ ಹಿಂದುಳಿದ ತಾಲೂಕು ಎಂದು ಪಟ್ಟ ಕಟ್ಟಿಕೊಂಡಿರುವ ಪಾವಗಡ ಪಟ್ಟಣ ಹಾಗೂ ತಾಲೂಕು ಹಲವಾರು ಮೂಲಭೂತ ಸೌಕರ್ಯಗಳಿಂದ ಹಿಂದುಳಿದಿದ್ದು ಅಭಿವೃದ್ಧಿ ಮಾಡಬೇಕಾದ ಪುರಸಭಾ ಸದಸ್ಯರು ಮೋಜು ಮಸ್ತಿಯಲ್ಲಿ ತೊಡಗಿರುವುದು ಸಾರ್ವಜನಿಕ ಆಕ್ರೋಶಕ್ಕೆ ಕಾರಣವಾಗಿದೆ.

ಬರಪೀಡಿತ ತಾಲೂಕು ಎಂದು ಕರೆಸಿಕೊಳ್ಳುವ ಪಾವಗಡ ಪಟ್ಟಣದಲ್ಲಿ ಹಲವಾರು ಮೂಲಭೂತ ಸೌಕರ್ಯಗಳು ಎದ್ದು ಕಾಡುತ್ತಿದೆ ಅಲ್ಲದೇ ಪಾವಗಡ ಪಟ್ಟಣದಲ್ಲಿ ಸರಿಯಾದ ರಸ್ತೆ, ನೀರು ,ಚರಂಡಿ ,ಕುಡಿಯುವ ನೀರು ,ಬೀದಿ ದೀಪ ಸೇರಿದಂತೆ ಹಲವಾರು ಸಮಸ್ಯೆಗಳಿದ್ದು ಅವುಗಳನ್ನ ಬಗೆಹರಿಸಬೇಕಾದ ಪುರಸಭಾ ಸದಸ್ಯರು ಪ್ರವಾಸದ ಹೆಸರಿನಲ್ಲಿ ಮೋಜು ಮಸ್ತಿಗೆ ಮೊರೆ ಹೋಗಿರುವದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಪಾವಗಡ ಪುರಸಭಾ ಸದಸ್ಯರ ಮೋಜು ಮಸ್ತಿಯ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

RELATED ARTICLES

Related Articles

TRENDING ARTICLES