Thursday, May 9, 2024

ಅಜಿಂಕ್ಯ ರಹಾನೆ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭಕೋರಿದ ಸೆಹ್ವಾಗ್

ಕ್ರಿಕೆಟ್ ವೃತ್ತಿ ಜೀವನದಲ್ಲಿ ಒಟ್ಟಿಗೆ ಏಳು-ಬೀಳು ಕಂಡಿರುವ ಟೀಂ ಇಂಡಿಯಾ ಟೆಸ್ಟ್​ನ ಮಾಜಿ ಕ್ಯಾಪ್ಟನ್ ಅಜಿಂಕ್ಯಾ ರಹಾನೆ 34ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಅವರಿಗೆ ಮಾಜಿ ಕ್ರಿಕೆಟಿಗ ವಿರೇಂದ್ರ ಸೆಹ್ವಾಗ್ ಸೇರಿದಂತೆ ಅನೇಕರು ಟ್ವೀಟ್ ಮೂಲಕ ವಿಶ್ ಮಾಡಿದ್ದಾರೆ.

ಟೆಸ್ಟ್​ ಕ್ರಿಕೆಟ್​​ನಲ್ಲಿ ಭಾರತ ತಂಡವನ್ನ ಸಾಗರೋತ್ತರ ದೇಶಗಳಲ್ಲಿ ಗೆಲುವಿಗೆ ಕಾರಣವಾದ ಪ್ರತಿಭೆ, ಅತ್ಯಂತ ಕಡಿಮೆ ಮೌಲ್ಯಮಾಪನಕ್ಕೊಳಗಾಗಿರುವ ಕ್ರಿಕೆಟಿಗರಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟ ರಹಾನೆಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಸೆಹ್ವಾಗ್ ಶುಭ ಕೋರಿದ್ದು, ಪ್ರತಿಯೊಂದು ಸವಾಲು ಎದುರಿಸುವ ಶಕ್ತಿಯನ್ನ ದೇವರು ನಿಮಗೆ ನೀಡಲಿ ಎಂದಿದ್ದಾರೆ.

ಟೀಂ ಇಂಡಿಯಾ ಟೆಸ್ಟ್ ತಂಡದ ಚೇತೇಶ್ವರ್ ಪೂಜಾರಾ ಕೂಡ ಟ್ವೀಟ್ ಮಾಡಿದ್ದು, ಹುಟ್ಟುಹಬ್ಬದ ಶುಭಾಶಯಗಳು ಬ್ರದರ್​. ಮುಂಬರುವ ದಿನಗಳಲ್ಲಿ ನಿಮಗೆ ಯಶಸ್ಸು ಸಿಗಲಿ ಎಂದು ಹಾರೈಸಿದ್ದಾರೆ. ಇದರ ಜೊತೆಗೆ ಐಸಿಸಿ, ರಾಜಸ್ಥಾನ ರಾಯಲ್ಸ್, ಹರ್ಭಜನ್ ಸಿಂಗ್ ಸಹ ರಹಾನೆಗೆ ಶುಭ ಹಾರೈಕೆ ಮಾಡಿದ್ದಾರೆ.

RELATED ARTICLES

Related Articles

TRENDING ARTICLES