Friday, April 26, 2024

ವಿದ್ಯುನ್ಮಾನ ಕ್ಷೇತ್ರಕ್ಕೆ ಉಂಟಾಗಲಿದೆ ಚಿಪ್ ಕೊರತೆ !

ಇವತ್ತು ಜಗತ್ತಿನಲ್ಲಿ ಎಲೆಕ್ಟ್ರಾನಿಕ್​ ಡಿವೈಸ್​​ಗಳನ್ನ ಬಹುತೇಕ ಎಲ್ಲರು ಬಳಸುತ್ತಾರೆ. ಇವತ್ತು ಮಾನವ ಆಧುನಿಕವಾಗಿ ಬದುಕೋದಕ್ಕೆ ಎಲೆಕ್ಟ್ರಾನಿಕ್​ ಡಿವೈಸ್​ಗಳು ಅತ್ಯಾವಶ್ಯಕವಾಗಿದ್ದು, ಒಂದು ವೇಳೆ ಯಾರಾದ್ರು ಇವತ್ತು ಎಲೆಕ್ಟ್ರಾನಿಕ್​ ಡಿವೈಸ್​ಗಳನ್ನ ಬಳಸುತ್ತಿಲ್ಲ ಅಂದ್ರೆ ಅವರು ಇನ್ನೂ ಕೂಡ ಆಧುನಿಕ ಜಗತ್ತಿನಲ್ಲಿ ವಾಸ ಮಾಡುತ್ತಿಲ್ಲ ಅಂತ ಭಾವಿಸಲಾಗುತ್ತದೆ. ಅಷ್ಟರ ಮಟ್ಟಿಗೆ ಇವತ್ತು ವಿದ್ಯುನ್ಮಾನ ವಸ್ತಗಳ ಬಳಕೆ ಮಾನವನಲ್ಲಿ ಹೆಚ್ಚಾಗಿ ಕಂಡು ಬಂದಿದೆ. ಇನ್ನು ಮಾನವ ಕೂಡ ಈ ಸಂಪೂರ್ಣವಾಗಿ ವಿದ್ಯುನ್ಮಾನ ಬದುಕಿಗೆ ಬರೋದಕ್ಕೆ ಅರ್ಧ ಶತಮಾನಗಳನ್ನ ತೆಗೆದುಕೊಂಡಿದ್ದಾನೆ. ಇದಕ್ಕೆ ಪ್ರಮುಖ ಕಾರಣ ಅಂದ್ರೆ ಕಡಿಮೆ ಪ್ರಮಾಣದಲ್ಲಿ ಸೆಮಿಕಂಡಕ್ಟರ್​ ವಲಯದಲ್ಲಿ ಉತ್ಪಾದನೆಯಾಗುತ್ತಿದ್ದ ಚಿಪ್​ಗಳು.

ಸೆಮಿಕಂಡಕ್ಟರ್​ ವಲಯದಲ್ಲಿ ಉತ್ಪಾದನೆಯಾಗುವ ಚಿಪ್​ಗಳು ಇವತ್ತು ಇಲ್ಲ ಅಂದಿದ್ರೆ ನಾವು ನೀವು ಬಳಸುವ ಮೊಬೈಲ್​ ಫೋನ್​ಗಳು, ನಾಗರೀಕರು ಓಡಾಡುವ ಕಾರು, ಬಸ್ಸು, ಟ್ಯಾಕ್ಸಿ, ಏರೋಪ್ಲೇನ್​ಗಳು ಹೀಗೆ ಯಾವ ವಿದ್ಯುನ್ಮಾನ ವಸ್ತಗಳು ಕಾರ್ಯ ನಿರ್ವಹಿಸೋದಕ್ಕೆ ಸಾಧ್ಯವಾಗುತ್ತಲೇ ಇರ್ತಾ ಇರಲಿಲ್ಲ. ಅಷ್ಟರ ಮಟ್ಟಿಗೆ ಸೆಮಿಕಂಡಕ್ಟರ್​ ವಲಯ ಇವತ್ತು ಜಗತ್ತಿನಲ್ಲಿ ತನ್ನ ಇರುವಿಕೆಯನ್ನ ಸಾಕಷ್ಟು ಗಟ್ಟಿಪಡಿಸಿಕೊಂಡಿದೆ. ಹೀಗಾಗಿನೇ ಈ ಕ್ಷೇತ್ರಕ್ಕೆ ಜಗತ್ತಿನ ನಾನಾ ದೇಶಗಳಲ್ಲಿ ಸಾಕಷ್ಟು ಪೈಪೋಟಿ ಕೂಡ ಇದೆ. ಇನ್ನು ಹೀಗೆ ಚಿಪ್​ ಉತ್ಪಾದಿಸುವ ಕಂಪನಿಗಳು ಕೂಡ ಕೆಲವೇ ಕೆಲವು ರಾಷ್ಟ್ರಗಳಿದ್ದು ಅವುಗಳ ಮೂಲಕ ಇವತ್ತು ಇಡೀ ಜಗತ್ತು ವಿದ್ಯುನ್ಮಾನ ವಸ್ತುಗಳನ್ನ ಬಳಸಿಕೊಳ್ಳುತ್ತಿದೆ. ಇನ್ನು ಈ ವಲಯದಲ್ಲಿ ಹೆಚ್ಚು ಪಾರುಪತ್ಯವನ್ನ ಸಾಧಿಸಿರೋದು ಅಂದ್ರೆ, ಅದು ತೈವಾನ್​ ಚೀನಾ ಹಾಗು ದಕ್ಷಿಣ ಕೊರೊಯಾದ ರಾಷ್ಟ್ರಗಳು.

ಇವತ್ತು ಈ ಬೇರೆ ಬೇರೆ ದೇಶಗಳು ಸೆಮಿಕಂಡಕ್ಟರ್​ ವಲಯದಲ್ಲಿ ಸಾಕಷ್ಟು ಪಾರುಪತ್ಯವನ್ನ ಹೊಂದಿದ್ರು ಅದರಲ್ಲಿ ಮುಂಚೂಣಿಯಲ್ಲಿ ಬಂದು ನಿಲ್ಲೋದು ಚೀನಾ ಮಾತ್ರ, ಇಲ್ಲಿ ಚೀನಾ ಏನು ನಿಯತ್ತಿನಿಂದ ವ್ಯಾಪಾರ ಮಾಡುತ್ತಿದೆ ಅಂತ ಅಂದುಕೊಳ್ಳಬೇಡಿ, ಆರ್ಥಿಕವಾಗಿ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಮುಂಚುಣಿಯಲ್ಲಿ ಬಂದು ಸಾಲ ಕೊಟ್ಟು, ಆ ರಾಷ್ಟ್ರಗಳಿಗೆ ಬಡ್ಡಿ, ಚಕ್ರಬಡ್ಡಿಯನ್ನ ನೀಡಿ ಆ ರಾಷ್ಟ್ರಗಳನ್ನ ಆರ್ಥಿಕ ಸಂಕಷ್ಟಕ್ಕೆ ದೂಡಿ, ಬಳಿಕ ಅವರು ಯಾವುದೇ ಒಂದು ವ್ಯವಹಾರವನ್ನ ಮಾಡ ಬೇಕಾದರು ಮೊದಲು ಚೀನಾದ ಬಳಿ ವ್ಯವಹಾರ ನಡೆಸಿ ಅದು ಸಾಧ್ಯವಾಗದಿದ್ದರೆ ಬೇರೆ ದೇಶಗಳೊಂದಿಗೆ ವ್ಯವಹಾರ ನಡೆಸೋದಕ್ಕೆ ಚೀನಾ ಅನುವು ಮಾಡಿಕೊಡುತ್ತದೆ. ಇವುಗಳಲ್ಲಿ ಪ್ರಮುಖವಾಗಿ ಚೀನಾ ಈ ಸೆಮಿಕಂಡಕ್ಟರ್​ ಕ್ಷೇತ್ರದ ಎಲ್ಲಾ ವ್ಯವಹಾರವನ್ನ ತನ್ನ ಮೂಲಕ ಮಾತ್ರ ನಡೆಯುವ ಹಾಗೆ ನೋಡಿಕೊಳ್ಳುತ್ತದೆ. ಇದರ ಜೊತೆಗೆ ಚೀನಾ ಬೇರೆ ಬೇರೆ ದೇಶಗಳೊಂದಿಗೆ ಕಡಿಮೆ ಬೆಲೆಯಲ್ಲಿ ಸೆಮಿಕಂಡಕ್ಟರ್​ ಉತ್ಪನ್ನಗಳನ್ನ ಪಡೆದು ಅಧಿಕ ಬೆಲೆಗೆ ಬೇರೆ ದೇಶಗಳಿಗೆ ಮಾರಟ ಮಾಡುತ್ತಿದೆ, ಅನ್ನೋ ಹಲವು ಆರೋಪಗಳು ಕೂಡ ಚೀನಾದ ಮೇಲೆ ಕೇಳಿ ಬರುತ್ತಿದೆ.

ಇದೀಗ ಚೀನಾದ ಪಾಪದ ಕೊಡ ತುಂಬಿರುವ ಹಾಗೆ ಕಾಣಿಸ್ತಾ ಇದೆ. ಚೀನಾದಲ್ಲಿ ಅಧಿಕ ಪ್ರಮಾಣದಲ್ಲಿ ಕೊರೋನಾ ಕೇಸ್​ಗಳು ಪತ್ತೆಯಾಗ್ತಾ ಇದ್ದು ಇದೀಗ ಚೀನಾದಲ್ಲಿ ಸೆಮಿಕಂಡಕ್ಟರ್​ ವಲಯದಲ್ಲಿ ಕಾರ್ಯ ನಿರ್ವಹಿಸೋದಕ್ಕೆ ಕಾರ್ಮಿಕರೇ ಸಿಗ್ತಾ ಇಲ್ಲ ಅನ್ನೋ ವರದಿಗಳು ದಾಖಲಾಗ್ತಾ ಇದೆ. ಇದು ಚೀನಾವನ್ನ ಈಗ ನಷ್ಟದ ಹಾದಿಯಲ್ಲಿ ಸಾಗೋ ಹಾಗೆ ಮಾಡಲಿದೆ ಅಂತ ವಿಜ್ಞಾನಿಗಳು ಹೇಳಿಕೆಯನ್ನ ನೀಡ್ತಾ ಇದ್ದಾರೆ. ಈ ಹಿಂದೆ 2019ರಲ್ಲಿ ಕೊರೋನಾ ಹೊಡೆತದಿಂದ ಚೀನಾದ ಸೆಮಿಕಂಡಕ್ಟರ್ ವಲಯ ಸಂಪೂರ್ಣವಾಗಿ ಬಾಗಿಲು ಹಾಕಿತ್ತು ಇದರ ಪರಿಣಾಮ ನೇರವಾಗಿ ಜಗತ್ತಿನ ಅಟೋ ಮೊಬೈಲ್​ ಕ್ಷೇತ್ರದ ಮೇಲೆ ಬಿದ್ದಿತ್ತು. ಜಗತ್ತಿನಲ್ಲಿ ಶೇ. 47ರಷ್ಟು ಆಟೋ ಮೊಬೈಲ್​ ಉತ್ಪನ್ನಗಳ ಉತ್ಪಾದನೆ ಸ್ಥಗಿತಗೊಂಡಿತು, ಹಲವು ಕಾರು ಬೈಕುಗಳ ಮಾರಾಟದ ಪ್ರಮಾಣದಲ್ಲಿಯೂ ಗಣನೀಯವಾದ ಇಳಿಕೆ ಕಂಡು ಬಂದಿತ್ತು ಇದರ ಒಟ್ಟಾರೆ ಪರಿಣಾಮ ಅಟೋಮೊಬೈಲ್​ ಕ್ಷೇತ್ರ ಸೇರಿದಂತೆ ಜಗತ್ತಿನ ಎಲ್ಲ ವಿದ್ಯುನ್ಮಾನ ಕ್ಷೇತ್ರಗಳು ಸಂಪೂರ್ಣವಾಗಿ ನೆಲ ಕಚ್ಚೋ ಹಾಗೆ ಮಾಡಿತ್ತು. ಅದೆಷ್ಟೋ ಜನ ಕೆಲಸ ಕಳೆದುಕೊಂಡು ನಿರ್ಗತಿಕರಾಗಿ ಹೋಗಿದರು.

ಇದೀಗ ಮತ್ತೆ ಇಂತಹುದೇ ಪರಿಸ್ಥಿತಿ ತಲೆ ದೂರಿದೆ, ಚೀನಾದಲ್ಲಿ ಇದೀಗ ಕೊರೋನಾ ಅಟ್ಟಹಾಸ ಮಿತಿ ಮೀರಿದ್ದು ಚೀನಾ 12 ಪ್ರಾಂತ್ಯಗಳಲ್ಲಿ ಲಾಕ್​ ಡೌನ್​​ ಅನ್ನ ಜಾರಿ ಮಾಡಲಾಗಿದೆ. ಜೊತೆಗೆ ಅಲ್ಲಿ ಕೆಲಸಗಾರರ ತೀವ್ರ ಕೊರತೆ ಕೂಡ ಉಂಟಾಗಿದ್ದು, ಇದೀಗ ಚೀನಾದ ಬಹುತೇಕ ಸೆಮಿಕಂಡಕ್ಟರ್​ ಕ್ಷೇತ್ರ ಬಂದ್​​ ಆಗಿದೆ, ಇದೇ ಪರಿಸ್ಥಿತಿ ಇದೀಗ ತೈವಾನ್​ ಹಾಗು ದಕ್ಷಿಣ ಕೊರಿಯಾದಲ್ಲಿ ಉಂಟಾಗಿತ್ತು ಈ ಬಗ್ಗೆ ಅಲ್ಲಿನ ಸರ್ಕಾರಗಳು ಎಚ್ಚೆತ್ತುಕೊಳ್ಳದೇ ಇದ್ದರೆ ಮುಂದಿನ ದಿನಗಳಲ್ಲಿ ಈ ಜಾಗತಿಕವಾಗಿ ಸೆಮಿ ಕಂಡಕ್ಟರ್​ ವಲಯ ನೆಲಕಚ್ಚೋದ್ರಲ್ಲಿ ಅನುಮಾನವಿಲ್ಲ.

ಲಿಖಿತ್​​ ರೈ , ಪವರ್​ ಟಿವಿ

RELATED ARTICLES

Related Articles

TRENDING ARTICLES