Monday, May 6, 2024

ಲೋಕಸಭಾ ಚುನಾವಣೆ: ದರ್ಶನ್, ಕಿಚ್ಚ ಸುದೀಪ್, ಯಶ್​ ರಿಂದ ಮತ ಚಲಾವಣೆ

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಪತ್ನಿ ವಿಜಯಲಕ್ಷ್ಮಿ ದಂಪತಿ ಸಮೇತರಾಗಿ ಇಂದು ಆರ್​ ಆರ್​ ನಗರದ ಮತಗಟ್ಟೆಗೆ ಆಗಮಿಸಿ ಮತಚಲಾವಣೆ ಮಾಡಿದ್ದಾರೆ.

ಡೆವಿಲ್ ಸಿನಿಮಾದ ಚಿತ್ರೀಕರಣ ವೇಳೆ ಕೈಗೆ ಏಟು ಮಾಡಿಕೊಂಡು ಶಸ್ತ್ರ ಚಿಕಿತ್ಸೆಗೆ ಒಳಗಾಗಿರುವ ದರ್ಶನ್, ಇದೀಗ ಪತ್ನಿ ವಿಜಯಲಕ್ಷ್ಮಿ ಸಮೇತ ರಾಜರಾಜೇಶ್ವರಿ ನಗರ ವಿಧಾನಸಭಾ ಕ್ಷೇತ್ರದ ಮತಗಟ್ಟೆಗೆ ಬಂದು ಮತದಾನ  ಮಾಡಿದ್ದಾರೆ.

ನಟ ಕಿಚ್ಚ ಸುದೀಪ್ ಅವರು ಇಂದು ಲೋಕಸಭಾ ಚುನಾವಣೆ ಹಿನ್ನೆಲೆ ಮತಗಟ್ಟೆಗೆ ಆಗಮಿಸಿ ಮತಚಲಾವಣೆ ಮಾಡಿದರು, ಬಳಿಕ ಮಾದ್ಯಮವರೊಂದಿಗೆ ಮಾತನಾಡಿದ ಅವರು, ದೇಶದ ಮೇಲೆ, ನಾಡಿನ ಮೇಲೆ, ರಾಜ್ಯದ ಮೇಲೆ ಪ್ರೀತಿ ಇರೋರು ವೋಟ್ ಮಾಡ್ತಾರೆ. ಎಷ್ಟೇ ಅರಿವು ಮೂಡಿಸಿದ್ರು ವೋಟ್ ಹಾಕೋದಕ್ಕೆ ಬರಲ್ಲ ಅಂದ್ರೆ ಏನ್ ಮಾಡೋದಕ್ಕಾಗಲ್ಲ, ವೋಟ್ ಹಾಕಿದವ್ರಿಗೂ ಒಳ್ಳೆಯದಾಗುತ್ತಿದೆ. ವೋಟ್ ಹಾಕದವ್ರಿಗೂ ಒಳ್ಳೆಯದಾಗುತ್ತಿದೆ. ಜವಾಬ್ದಾರಿ ಇರೋರ್ ಬಂದು ಮತ ಹಾಕ್ತಾರೆ. ಯಾರ್ ವೋಟ್ ಹಾಕಲ್ವೋ ಅವ್ರ ಬಗ್ಗೆ ತಲೆ ಕೆಡಿಸಿಕೊಳ್ಳೋದ್ ಬಿಟ್ಟು ವೋಟ್ ಹಾಕೋರ ಬಗ್ಗೆ ಯೋಚನೆ ಮಾಡೋಣ ಎಂದು ಮತದಾನ ಮಾಡುವಂತೆ ತಿಳಿಸಿದರು.

ಇದೇ ವೇಳೆ ನಟ ರಾಕಿಂಗ್ ಸ್ಟಾರ್ ಯಶ್​ ಕೂಡ ಮತಗಟ್ಟೆಗೆ ಆಗಮಿಸಿ ತಮ್ಮ ಮತಚಲಾವಣೆ ಮಾಡಿದ್ದಾರೆ.

ಇದನ್ನೂ ಓದಿ:  ಲೋಕಸಭಾ ಚುನಾವಣೆ: ಸರತಿ ಸಾಲಿನಲ್ಲಿ ನಿಂತು ಡಾ.ರಾಜ್​ ಕುಟುಂಬದಿಂದ ಮತದಾನ

ಇನ್ನು ಇದೇ ವೇಳೆ, ನಟಿ ರಚಿತಾ ರಾಮ್ ಕತ್ರಿಗುಪ್ಪೆ ಮತಗಟ್ಟೆಯಲ್ಲಿ ಮತಚಲಾವಣೆ ಮಾಡಿದರು. ಅರ್ಧ ಗಂಟೆಗೂ ಹೆಚ್ಚು ಕಾಲ ಸರದಿ ಸಾಲಿನಲ್ಲಿ ನಿಂತು ತಮ್ಮ ಹಕ್ಕನ್ನು ಚಲಾಯಿಸಿದರು. ಅಭಿಮಾನಿಗಳು ರಚಿತಾ ಅವರ ಜೊತೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಸಿದರು.

ಮತದಾನದ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ರಚಿತಾ, ‘ಮನೆಯಲ್ಲಿ ಕೂತು ಕಾಮೆಂಟ್ ಮಾಡೋದಕ್ಕಿಂದ ಬಂದು ವೋಟ್ ಮಾಡಿ. ವೋಟ್ ಮಾಡದೇ ಬ್ಲೇಮ್ ಮಾಡಬೇಡಿ, ನಮ್ಮ ನಾಯಕರ ಆಯ್ಕೆ ಮಾಡಲೇಬೇಕು. ಬಿಸಿಲು ಅಂತ ಮನೆಯಲ್ಲಿ ಕೂರಬೇಡಿ, ಸಂಜೆವರೆಗೂ ಟೈಂ ಇದೆ ಬಂದು ವೋಟ್ ಮಾಡಿ. ಹಿರಿಯನಾಗರೀಕರೆ ಉತ್ಸಾಹದಿಂದ ವೋಟ್ ಮಾಡುವಾಗ ಯುವಕರು ಯಾಕೆ ಮನೆಯಲ್ಲಿ ಕೂರಬೇಕು’ ಎಂದು ಅವರು ಪ್ರಶ್ನೆ ಮಾಡಿದರು.

 

RELATED ARTICLES

Related Articles

TRENDING ARTICLES