Wednesday, May 22, 2024

ಕರ್ನಾಟಕದಲ್ಲಿ ಹೊಸ ವರ್ಷಾಚರಣೆಗೆ ಬ್ರೇಕ್ : ಗೋವಾದಲ್ಲಿ ಸಂಭ್ರಮ

ಕಾರವಾರ : ಕೊರೋನಾ,ಒಮೈಕ್ರಾನ್​ನಿಂದಾಗಿ ರಾಜ್ಯದಲ್ಲಿ ಹೊಸ ವರ್ಷಾಚರಣೆಗೆ ಸರ್ಕಾರ ನೈಟ್ ಕರ್ಫ್ಯೂ ಜಾರಿಮಾಡಿತ್ತು. ಕರ್ನಾಟದಲ್ಲಿ ಅವಕಾಶ ಸಿಗದೆ ಇರೋ‌ದರಿಂದ ರಾಜ್ಯ ಸೇರಿದಂತೆ ಹೊರ ರಾಜ್ಯದ ಪ್ರವಾಸಿಗರು ಪಕ್ಕದ ಗೋವಾ ರಾಜ್ಯದಲ್ಲಿ ಸಂಭ್ರಮದಿಂದ ಹೊಸವರ್ಷವನ್ನ ಬರಮಾಡಿಕೊಂಡಿದ್ದಾರೆ.

ರಾಜ್ಯದ ನಾನಾಕಡೆಯ ಸಾವಿರಾರು ಪ್ರವಾಸಿಗರು ಹೊಸವರ್ಷಾಚರಣೆಯನ್ನ ಆಚರಿಸೋದಕ್ಕೆ ಅಂತಾ ಉತ್ತರಕನ್ನಡ ಜಿಲ್ಲೆಯ ಕರಾವಳಿ ಸೇರಿದಂತೆ ಅನೇಕ ಪ್ರವಾಸಿ ತಾಣಗಳಿಗೆ ಆಗಮಿಸಿದ್ದರು.ಆದರೆ ಸರಕಾರ ಕೊರೋನಾ,ಒಮೈಕ್ರಾನ್ ಹೆಚ್ಚಾಗುತ್ತಾ ಇರುವ ಕಾರಣಕ್ಕೆ ರಾತ್ರಿ ಹತ್ತುಗಂಟೆ ಬಳಿಕ ನೈಟ್ ಕರ್ಪ್ಯೂ ಜಾರಿ ಮಾಡಿತ್ತು. ಜಿಲ್ಲೆಯ ಕರಾವಳಿ ಕಡಲತೀರದಲ್ಲಿ ರಾತ್ರಿ ಎಂಟು ಗಂಟೆ ಬಳಿಕ ಯಾರು ಕೂಡ ಕಡಲತೀರಕ್ಕೆ ಹೋಗಬಾರದು ಅಂತಾ ಉತ್ತರಕನ್ನಡ ಜಿಲ್ಲಾಡಳಿತ ಖಡಕ್ ಆದೇಶ ಹೊರಡಿಸಿತ್ತು.ಇದರಿಂದಾಗಿ ಕರಾವಳಿ ಪ್ರದೇಶದಲ್ಲಿ ಒಂದೆರಡು ದಿನಗಳ ಮುಂಚೆ ಬಂದು ವಾಸ್ತವ್ಯ ಮಾಡಿದ್ದ ಸಾವಿರಾರು ಪ್ರವಾಸಿಗರು ಗೋವಾ ಕಡೆ ಮುಖ ಮಾಡುವಂತಾಯಿತು.

ಗೋವಾದ ಕಡಲ ತೀರಗಳು ಕರ್ನಾಟಕ ಸೇರಿ ವಿವಿಧೆಡೆಗಳ ಪ್ರವಾಸಿಗರಿಂದ ತುಂಬಿ ತುಳುಕುವಂತಾಯಿತು. ಈ ಭಾರಿ ಗೋವಾ ಬೀಚ್​ಗಳಲ್ಲಿ ಹೊರ ರಾಜ್ಯದ ಪ್ರವಾಸಿಗರಿಗಿಂತ ಹೆಚ್ಚಾಗಿ ನಮ್ಮ ರಾಜ್ಯದ ಪ್ರವಾಸಿಗರೇ ಹೆಚ್ಚಿನ ಸಂಖ್ಯೆಯಲ್ಲಿ ತುಂಬಿಕೊಂಡಿರುವುದು ಕಂಡುಬಂದಿತು.

ಗೋವಾದಲ್ಲಿ ಹೊಸ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಯಿತು. ಉತ್ತರ ಕನ್ನಡದ ಕರಾವಳಿ ತೀರಗಳು ಹಾಗೂ ಉದ್ಯಾನವನಗಳಲ್ಲೂ ಯಾವುದೇ ಸಂಭ್ರಮಾಚರಣೆಗೆ ಅವಕಾಶ ನೀಡದ ಹಿನ್ನಲೆ ಬೇಸರಗೊಂಡ ಪ್ರವಾಸಿಗರು ಗೋವಾವನ್ನ ನೆಚ್ಚಿಕೊಳ್ಳಬೇಕಾಯಿತು. ಕಾರವಾರದಿಂದ ಸುಮಾರು 30 ಕಿಲೋ ಮೀಟರ್ ದೂರದಲ್ಲೇ ಗೋವಾದ ಕಾಣಕೋಣ ಕಡಲತೀರವಿದೆ, ಅಲ್ಲಿ ವರ್ಷಾಚರಣೆಗೆ ಯಾವುದೇ ಅಡ್ಡಿ ಇಲ್ಲದ ಕಾರಣ ಗೋವಾದ ಕಾಣಕೋಣದ ಪಾಲೋಲೆಮ್, ಬಾಗಾ, ಕಲ್ಲಂಗುಟ್, ಆಗುಂದಾ ಸೇರಿ ಬಹುತೇಕ ಎಲ್ಲ ಬೀಚ್‌ಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ ಪ್ರವಾಸಿಗರು ರಾತ್ರಿ ಪೂರ್ತಿ ಬೀಚ್​ನಲ್ಲಿ ಪಾರ್ಟಿ, ಡಿಜೆ ನೃತ್ಯ ಮಾಡೋ ಮೂಲಕ ಕರ್ನಾಟಕ ಸೇರಿದಂತೆ ರಾಜ್ಯದ ನಾನಾಕಡೆಯಿಂದ ಪ್ರವಾಸಿಗರು 2022 ಸಖತ್ ಆಗಿಯೇ ಏಂಜಾಯ್ ಮಾಡಿದರು.

ಕೊರೋನಾ, ಒಮೈಕ್ರಾನ್ ಹೆಸರಲ್ಲಿ ರಾಜ್ಯ ಸರಕಾರ ಹೊಸ ವರ್ಷಾಚರಣೆಗೆ ಬ್ರೇಕ್ ಹಾಕಿದರು ಸಹ ಜನ ಮಾತ್ರ ಅದ್ಯಾವುದಕ್ಕೆ ಖ್ಯಾರೆ ಎನ್ನದೆ. ಪಕ್ಕದ ಗೋವಾ ರಾಜ್ಯಕ್ಕೆ ತೆರಳಿ 2022ನ್ನ ಅದ್ದೂರಿಯಾಗಿ ಬರಮಾಡಿಕೊಳ್ಳುವಲ್ಲಿ ಯಶ್ವಸಿಯಾದರು.

ಉದಯ ಬರ್ಗಿ ಪವರ್ ಟಿವಿ ಕಾರವಾರ

RELATED ARTICLES

Related Articles

TRENDING ARTICLES