Thursday, May 9, 2024

ಕಡಲ ತೀರದಲ್ಲಿ ಹೊಸವರ್ಷಾಚರಣೆ ನಿಷೇಧ

ಕಾರವಾರ : ಕಾರವಾರ ಅಂದರೆ ನಮಗೆ ಥಟ್ಟನೆ ನೆನಪಾಗುವುದು ಸುಂದರ ಕಡಲ ತೀರ. ಹಾಗೆಯೇ ಡಿಸೆಂಬರ್ 31 ರ ರಾತ್ರಿಯೆಂದರೆ ನೆನಪಾಗುವುದು ನಮ್ಮ ನೆಚ್ಚಿನ ಸ್ಥಳಗಳಲ್ಲಿ ಹೊಸವರ್ಷವನ್ನು ಸ್ವಾಗತಿಸುವುದು ಹಾಗೂ ಸೆಲೆಬ್ರೆಟ್ ಮಾಡುವುದು. ಕಳೆದೆರಡು ವರ್ಷಗಳಿಂದ ಕೊರೋನ ಕಾಟದಿಂದಾಗಿ ಹೊಸವರ್ಷದ ಸಂಭ್ರಮ ಮಾಯವೇ ಆಗಿಬಿಟ್ಟಿದೆ. ಈ ವರ್ಷವಾದರೂ ಜನರು ತಮ್ಮ ನೆಚ್ಚಿನ ಸ್ಥಳಗಳಲ್ಲಿ ಸೆಲೆಬ್ರೆಟ್ ಮಾಡಲು ಯೋಚಿಸಿದ್ದರು. ಆದರೆ ಸರ್ಕಾರ ಪುನಃ ಅದೇ ಕೊರೋನ ನೆಪವೊಡ್ಡಿ ಜನರ ಆಸೆಗೆ ತಣ್ಣೀರು ಎರೆಚಿದೆ.  ಇದರಿಂದಾಗಿ ಎಷ್ಟೋ ಜನ ಕಡಲ ತೀರದಲ್ಲಿ ಹೊಸ ವರ್ಷಾಚರಣೆ ಮಾಡಬೇಕೆಂದಿದ್ದವರು ಸರ್ಕಾರದ ಈ ನಿಲುವಿನಿಂದಾಗಿ ಬೇಸರಗೊಂಡಿದ್ದಾರೆ.

ಕಾರವಾರದ ಸುಂದರ ಕಡಲ ತೀರಗಳೂ ಸಹ ಸರ್ಕಾರದ ಈ ನಿಷೇಧಾಜ್ಷೆಯಿಂದಾಗಿ ಬಂದ್ ಆಗಿವೆ. ಹೊಸ ವರ್ಷದ ಆಚರಣೆಯನ್ನು ಕಡಲ ತೀರದಲ್ಲಿ ನಿಷೇಧಗೊಳಿಸಿ ಉತ್ತರ ಕನ್ನಡ ಜಿಲ್ಲಾಧಿಕಾರಿ ಮುಲ್ಲೈಮುಗಿಲನ್ ಆದೇಶ ಜಾರಿ ಮಾಡಿದ್ದಾರೆ. ಡಿಸೆಂಬರ್ 31ರ ರಾತ್ರಿ 8 ಗಂಟೆಯಿಂದ ಜನವರಿ 1ರ ಬೆಳಿಗ್ಗೆ 5 ಗಂಟೆಯವರೆಗೆ ಈ ನಿಷೇಧಾಜ್ಷೆ ಜಾರಿಯಲ್ಲಿರುತ್ತದೆ. ಕೊರೋನ, ಒಮಿಕ್ರಾನ್ ಆತಂಕದ ಹಿನ್ನೆಲೆಯಲ್ಲಿ ಈ ಮುಂಜಾಗ್ರತಾ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಸರ್ಕಾರ ಹೇಳಿದೆ.  ಹೀಗಾಗಿ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ, ಭಟ್ಕಳ ಕಡಲ ತೀರಗಳಲ್ಲಿ ಈ ನಿಷೇಧಾಜ್ಷೆ ಆದೇಶ ಜಾರಿಯಲ್ಲಿರುತ್ತದೆ. ಈ ಆದೇಶವನ್ನು ಉಲ್ಲಂಘಿಸಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005ರ ಅಡಿಯಲ್ಲಿ ಕ್ರಮವನ್ನು ತೆಗೆದುಕೊಳ್ಳುವುದಾಗಿ ಸರ್ಕಾರ ಎಚ್ಚರಿಕೆ ನೀಡಿದೆ. ಹಾಗಾಗಿ ಸರ್ಕಾರದ ಈ ಕೊವಿಡ್ ಮುಂಜಾಗ್ರತಾ ಕ್ರಮವನ್ನು ಅನುಸರಿಸಲು ಸರ್ಕಾರ ಸಾವರ್ಜನಿಕರಲ್ಲಿ ಮನವಿ ಮಾಡಿದೆ.

RELATED ARTICLES

Related Articles

TRENDING ARTICLES