Wednesday, May 8, 2024

ಮೌಂಟ್ ಕಾರ್ಮೆಲ್ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಬೆಂಗಳೂರು: ಮೌಂಟ್ ಕಾರ್ಮೆಲ್ ಕಾಲೇಜು ಅಂದರೆ ತುಂಬ ಹೈಫೈ ಕಾಲೇಜು ಎಂಬ ಭಾವನೆ ಹಲವರಿಗೆ. ಆದರೆ ಅದೂ ಸಹ ನಿರ್ಲ್​ಕ್ಷ್ಯಕ್ಕೆ ಹೊರತಾಗಿಲ್ಲ ಎನ್ನುವುದು ಇಲ್ಲಿನ ವಿದ್ಯಾರ್ಥಿಗಳು ಮಾಡುತ್ತಿರುವ ಪ್ರತಿಭಟನೆಯಿಂದ ಬಹಿರಂಗಗೊಂಡಿದೆ. ಮೌಂಟ್ ಕಾರ್ಮೆಲ್ ಕಾಲೇಜಿನ ಆಡಳಿತ ಮಂಡಳಿ ವಿರುದ್ಧ ಇಲ್ಲಿನ ವಿದ್ಯಾರ್ಥಿಗಳು ಅಕ್ಷರಶಃ ಸಿಡಿದೆದ್ದಿದ್ದಾರೆ. ಪ್ರತಿಭಟನೆಗೆ ಮುಂದಾಗಿದ್ದಾರೆ. ಇದಕ್ಕೆ ಕಾರಣ ಕಾಲೇಜು ಆಡಳಿತ ಮಂಡಳಿ ಕೊರೊನ ವಿಷಯದಲ್ಲಿ ತೋರಿರುವ ನಿರ್ಲಕ್ಷ್ಯ.

ಹೌದು, ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ವಿದ್ಯಾರ್ಥಿಗೆ ಕೊರೊನ ಬಂದಿದ್ದನ್ನು ಕಾಲೇಜು ಆಡಳಿತ ಕಡೆಗಣಿಸಿದ್ದು ಇದೀಗ ಕೊರೊನ ಅಲ್ಲಿ ಸ್ಫೋಟಗೊಳ್ಳುವ ಸಂಭವವಿದೆ. ಇದರಿಂದ ಭಯಗೊಂಡಿರುವ ವಿದ್ಯಾರ್ಥಿಗಳು ಕಾಲೇಜು ಮುಂಜಾಗ್ರತೆ ಕ್ರಮಗಳನ್ನು ತೆಗೆದುಕೊಂಡಿಲ್ಲ ಎಂದು ಆರೋಪಿಸಿದ್ದಾರೆ. ವಿದ್ಯಾರ್ಥಿಗಳು ಭಯಗೊಂಡಿದ್ದರೂ ಸಹ ಆಡಳಿತ ಮಂಡಳಿ ಸಹಕರಿಸುತ್ತಿಲ್ಲ, 9ನೇ ತಾರೀಖಿನಿಂದ ಪರೀಕ್ಷೆಯಿರಿಸಿದ್ದಾರೆ, ಈ ಪರೀಕ್ಷೆಯನ್ನು ಮುಂದೂಡಬೇಕು ಎಂದು ವಿದ್ಯಾರ್ಥಿಗಳು ಒತ್ತಾಯಿಸಿದ್ದಾರೆ.

ಪದವಿ ತರಗತಿಗಳಿಗೆ ಪರೀಕ್ಷೆ ರದ್ದು ಮಾಡಿದ್ದಾರೆ ಆದರೆ ಪಿಯು ತರಗತಿಗಳಿಗೆ ರದ್ದು ಮಾಡ್ತಿಲ್ಲ, ಆದ್ದರಿಂದ ಕರ್ನಾಟಕ ಬೋರ್ಡ್​ ಪರೀಕ್ಷೆ ರದ್ದು ಮಾಡಬೇಕೆಂದು ವಿದ್ಯಾರ್ಥಿಗಳು ಆಗ್ರಹಪಡಿಸಿದ್ದಾರೆ.

ವಿದ್ಯಾರ್ಥಿಗಳು ಈ ರೀತಿ ಅನುಮತಿ ಇಲ್ಲದೆ ಪ್ರತಿಭಟನೆ ನಡೆಸುತ್ತಿರುವುದು ತಪ್ಪು ಎಂದು ಸ್ಥಳಕ್ಕೆ ಆಗಮಿಸಿರುವ ಹೈಗ್ರೌಂಡ್ ಪೋಲಿಸರು ಹೇಳಿರುವುದು ವಿದ್ಯಾರ್ಥಿಗಳನ್ನು ಕೆರಳಿಸಿದೆ. ಈ ಸಂಬಂಧ ವಿದ್ಯಾರ್ಥಿಗಳು ಹಾಗೂ ಪೊಲೀಸರ ನಡುವೆ ಮಾತಿನ ಚಕಮಕಿ ನಡೆದಿದೆಯೆನ್ನಲಾಗಿದೆ.

RELATED ARTICLES

Related Articles

TRENDING ARTICLES