ಕಾರವಾರ: ಬಹುವರ್ಷದಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಕನಸು ಕಾಣುತ್ತಿರುವ ಉತ್ತರ ಕನ್ನಡ ಜಿಲ್ಲೆಯ ಜನ ಕನಸಿಗೆ ರಾಜ್ಯ ಸರ್ಕಾರ ತಣ್ಣೀರು ಎರಚಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಆರ್ಥಿಕ ಇಲಾಖೆ ಒಪ್ಪಗೆ ನೀಡಿಲ್ಲ. ರಾಜ್ಯ ಸರ್ಕಾರ ಆರ್ಥಿಕ ಇಲಾಖೆಯಿಂದ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪ್ರಸ್ತಾವನೆಗೆ ಆರ್ಥಿಕ ಇಲಾಖೆ ತಿರಸ್ಕರಿಸಿದೆ. ಈ ಮೂಲಕ ಉತ್ತರ ಕನ್ನಡ ಜನರ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣದ ಕನಸು ಕನಸಾಗೇ ಉಳಿಯಲಿದೆ.
ಉತ್ತರ ಕನ್ನಡ ಜಿಲ್ಲೆಗೆ ಇನ್ನೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಕೊಟ್ಟಿಲ್ಲ. ಜಿಲ್ಲೆಯ ಜನರು ಆಸ್ಪತ್ರೆ ಇಲ್ಲದೇ ಪರದಾಡುತ್ತಿದ್ದಾರೆ ಎಂದು ಬಿಜೆಪಿ ಶಾಸಕಿ ರೂಪಾಲಿ ನಾಯಕ್ ತಮ್ಮದೇ ಸರ್ಕಾರದ ವಿರುದ್ಧ ಬೇಸರ ವ್ಯಕ್ತಪಡಿಸಿದರು.
ಉತ್ತರ ಕನ್ನಡದ ಜನರು ದೂರದ ಮಣಿಪಾಲ್, ಗೋವಾ, ಮಂಗಳೂರು ಮತ್ತಿತರ ಕಡೆಯ ಆಸ್ಪತ್ರೆಗೆ ಹೋಗಬೇಕು. ರಾಜ್ಯ ಸರ್ಕಾರ ಇದರಲ್ಲಿ ವಿಳಂಬ ಮಾಡುತ್ತಿದೆ. ಆದಷ್ಟು ಬೇಗ ಆಸ್ಪತ್ರೆ ಮಂಜೂರು ಮಾಡಿಕೊಡಿ, ಆರೋಗ್ಯ ಸಚಿವರಿಗೆ ಆರೋಗ್ಯ ಸರಿ ಇಲ್ಲ ಅಂತ ಬಂದಿಲ್ಲ. ನಮ್ಮ ಜಿಲ್ಲೆಯ ಜನರಿಗೆ ಆರೋಗ್ಯ ಕೆಟ್ಟರೆ ಎಲ್ಲಿಗೆ ಹೋಗಬೇಕು ಎಂದು ರೂಪಾಲಿ ನಾಯಕ್ ಅಸಮಾಧಾನ ವ್ಯಕ್ತಪಡಿಸಿದರು.
ಆರ್ಥಿಕ ಇಲಾಖೆ ಸಹಮತಿ ನೀಡದ ಕಾರಣ ಆಸ್ಪತ್ರೆ ಮಂಜೂರಾತಿ ವಿಳಂಬ ಎಂದು ಉತ್ತರದಲ್ಲಿ ಉಲ್ಲೇಖಿಸಿರುವ ರಾಜ್ಯ ಸರ್ಕಾರ
ಸದನಕ್ಕೆ ಗೈರು ಹಾಜರಾಗಿರುವ ಕಾರಣ ಇನ್ನೂ ರೂಪಾಲಿ ನಾಯಕ್ ಪ್ರಶ್ನೆಗೆ ಉತ್ತರ ನೀಡದ ರಾಜ್ಯ ಸರ್ಕಾರ
ಸೋಮವಾರ ಸಚಿವರಿಂದ ಉತ್ತರ ಕೊಡಿಸುವುದಾಗಿ ಸ್ಪೀಕರ್ ಹೇಳಿದರು.