KPSC ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್..?; ಮತ್ತೊಂದು ಗಂಭೀರ ಆರೋಪ..!

ಬೆಂಗಳೂರು : ಹಲವಾರು ಕರ್ಮಕಾಂಡಗಳ ಅಡ್ಡೆಯಾಗಿರುವ ಕೆಪಿಎಸ್​ಸಿ(KPSC) ಮೇಲೆ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದ್ದು. ಕೆಪಿಎಸ್​ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್ ಆಗಿದ್ಯಾ ಎಂಬ ಅನುಮಾನ ಮೂಡಿದೆ. ಈ ಕುರಿತು ಪರೀಕ್ಷೆ ಬರೆಯಲು ಬಂದಿದ್ದ ಅಭ್ಯರ್ಥಿಗಳು ಆರೋಪ ಮಾಡಿದ್ದಾರೆ.

ಸದಾ ಒಂದಿಲ್ಲ ಒಂದು ಎಡವಟ್ಟು ಮಾಡಿಕೊಂಡು ಸುದ್ದಿಯಲ್ಲಿರುವ ಕೆಪಿಎಸ್​ಸಿ ವಿರುದ್ದ ಮತ್ತೊಂದು ಗಂಭೀರ ಆರೋಪ ಕೇಳಿ ಬಂದಿದೆ. ಇಂದು ನಡೆಯುತ್ತಿರುವ ಕೆಎಎಸ್​(KAS) ಪರೀಕ್ಷೆಯ ಮೇನ್ಸ್​ ಪ್ರಶ್ನೆ ಪತ್ರಿಕೆ ಲೀಕ್​ ಆಗಿದೆ ಎಂಬ ಆರೋಪ ಕೇಳಿ ಬಂದಿದೆ.

ಇದನ್ನೂ ಓದಿ:ಕನ್ನಡ ಚಿತ್ರರಂಗದಿಂದ ಸೋನು ನಿಗಮ್ ಬ್ಯಾನ್​: ಫಿಲ್ಮ ಛೇಂಬರ್​ನಿಂದ ಅಧಿಕೃತ ಘೋಷಣೆ

ಕಸ್ತೂರ ಬಾ ನಗರ ಬಿಬಿಎಂಪಿ ಕಾಲೇಜಿನಲ್ಲಿ ಇಂತಹ ಆರೋಪ ಕೇಳಿ ಬಂದಿದ್ದು. ಪರೀಕ್ಷೆ ಕೊಠಡಿ ಸಂಖ್ಯೆ 4 ಹಾಗೂ 6ರಲ್ಲಿ ಪ್ರಶ್ನೆ ಪತ್ರಿಕೆಯ ಬಂಡಲ್​ ಓಪನ್​ ಆಗಿರುವುದು ಕಂಡು ಬಂದಿದೆ. ಪ್ರಬಂಧ ಬರವಣಿಗೆಯ ಪ್ರಶ್ನೆ ಪತ್ರಿಕೆಯ ಬಂಡಲ್​ ಓಪನ್​ ಆಗಿದ್ದು. ಇದನ್ನು ನೋಡಿದ ಪರೀಕ್ಷ ಅಭ್ಯರ್ಥಿಗಳು ಅಧಿಕಾರಿಗಳ ಜೊತೆ ವಾಗ್ದಾದ ನಡೆದಿಸಿದ್ದಾರೆ. ಈ ಕುರಿತು ಸ್ಥಳದಲ್ಲಿ ಅಭ್ಯರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ.

RELATED ARTICLES

Related Articles

TRENDING ARTICLES