ದೆಹಲಿ : ಭಾರತ ಮತ್ತು ಪಾಕಿಸ್ತಾನದ ನಡುವೆ ಹೆಚ್ಚುತ್ತಿರುವ ಉದ್ವಿಗ್ನತೆಯ ಮಧ್ಯೆ, ಕೇಂದ್ರ ಗೃಹ ಇಲಾಖೆ ನಾಗರಿಕರ ರಕ್ಷಣೆಗಾಗಿ ಮೇ.7ನೇ ತಾರೀಖಿನಂದು ಮಾಕ್ ಡ್ರಿಲ್ (ಭದ್ರತ ತಾಲೀಮು) ನಡೆಸುವಂತೆ ರಾಜ್ಯಗಳಿಗೆ ಸೂಚನೆ ನೀಡಿದೆ. ವಾಯು ದಾಳಿ ಸೇರಿದಂತೆ, ಪ್ರತಿಕೂಲ ಸಂದರ್ಬದಲ್ಲಿ ನಾಗರಿಕರು ತಮ್ಮನ್ನು ತಾವು ಹೇಗೆ ರಕ್ಷಿಸಿಕೊಳ್ಳಬೇಕು ಎಂಬ ಕುರಿತು ಈ ಕವಾಯತಿನಲ್ಲಿ ನಡೆಯುತ್ತದೆ.
ಇದನ್ನೂ ಓದಿ:ಯುದ್ಧ ನಡೆದರೆ ನಾವು ಭಾರತದ ಜೊತೆ ನಿಲ್ಲಬೇಕು: ಪಾಕ್‌ನಲ್ಲಿರುವ ಪಶ್ತೂನ್ ಮುಸ್ಲಿಮರಿಗೆ ಕರೆ
ಪಹಲ್ಗಾಮ್ ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ಕಾರ್ಮೋಡ ಆವರಿಸಿಕೊಂಡಿದೆ. ಎರಡು ಸೇನೆಗಳು ಗಡಿಯಲ್ಲಿ ಜಮಾವಣೆಯಾಗಿದ್ದು. ಯುದ್ದಭ್ಯಾಸ ಆರಂಭಿಸಿವೆ. ಯುದ್ದ ನಡೆಯುವ ಬಗ್ಗೆ ಪುಷ್ಟಿ ನೀಡುವ ಮತ್ತೊಂದು ಮಾಹಿತಿ ಲಭಸಿದ್ದು. ಯುದ್ದ ನಡೆದರೆ ನಾಗರಿಕರು ತಮ್ಮನ್ನು ತಾವೂ ರಕ್ಷಿಸಿಕೊಳ್ಳಲು ಅಣಕು ಕವಾಯತು ನಡೆಸಲು ಗೃಹ ಇಲಾಖೆ ಎಲ್ಲಾ ರಾಜ್ಯಗಳಿಗೆ ಸೂಚನೆ ನೀಡಿದೆ.
ರಾಜ್ಯಗಳಿಗೆ ನೀಡಿರುವ ಸೂಚನೆಗಳೇನು..!
1. ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಸ್ಥಾಪನೆ ಮತ್ತು ಕಾರ್ಯಾಚರಣೆ.
2. ಪ್ರತಿಕೂಲ ದಾಳಿಯ ಸಂದರ್ಭದಲ್ಲಿ ತಮ್ಮನ್ನು ತಾವು ರಕ್ಷಿಸಿಕೊಳ್ಳಲು ನಾಗರಿಕರು ಮತ್ತು ವಿದ್ಯಾರ್ಥಿಗಳಿಗೆ ಅವಶ್ಯ ಕ್ರಮಗಳ ಕುರಿತಯ ಮಾಹಿತಿ ನೀಡುವುದು.
3. ಪ್ರಮುಖ ಸ್ಥಾವರಗಳನ್ನು ಮರೆಮಾಚಲು ಮತ್ತು ರಕ್ಷಿಸಲು ಕ್ರಮ
4. ಸ್ಥಳಾಂತರ ಮತ್ತು ನವೀಕರಣದ ಕುರಿತು ಡ್ರಿಲ್
ಈ ರೀತಿಯಾಗಿ ಅನೇಕ ಕ್ರಮ ಕೈಗೊಳ್ಳುವಂತೆ ಕೇಂದ್ರ ಗೃಹ ಇಲಾಖೆ ಸೂಚನೆ ಹೊರಡಿಸಿದ್ದು. ಈ ಸೂಚನೆ ಭಾರತ ಮತ್ತು ಪಾಕಿಸ್ತಾನದ ನಡುವೆ ಯುದ್ದದ ನಡೆಯುವುದು ಬಹುತೇಕ ಖಚಿತ ಎಂಬ ಸೂಚನೆ ನೀಡುತ್ತಿವೆ.


