ಕನ್ನಡ ಭಾಷೆಯ ವಿರುದ್ದ ಅಹವಹೇಳನಕಾರಿಯಾಗಿ ಹೇಳಿಕೆ ನೀಡಿದ್ದ ಗಾಯಕ ಸೋನು ನಿಗಮ್ ವಿರುದ್ದ ಕನ್ನಡ ಚಿತ್ರರಂಗ ಅಸಹಕಾರ ನಿರ್ಧಾರ ತೆಗೆದುಕೊಂಡಿದ್ದು. ಸೋನು ನಿಗಮ್ ಕ್ಷಮೆ ಕೇಳುವವರೆಗೂ ಅವರಿಗೆ ಕನ್ನಡದಲ್ಲಿ ಯಾವುದೇ ಹಾಡನ್ನು ಹಾಡಲು ಅವಕಾಶ ನೀಡದಿರಲು ನಿರ್ಧರಿಸಲಾಗಿದೆ. ಈ ಕುರಿತು ಗಾಯಕ ಸೋನು ನಿಗಮ್ ಮತ್ತೊಮ್ಮ ಸ್ಪಷ್ಟನೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಪೋಸ್ಟ್ ಮಾಡಿರುವ ಸೋನು ನಿಗಮ್ “ನಾನು ಕರ್ನಾಟಕದಲ್ಲಿದ್ದಾಗ ಮಾತ್ರವಲ್ಲದೆ ಪ್ರಪಂಚದ ಬೇರೆಡೆ ಇರುವಾಗಲೂ ಕರ್ನಾಟಕದ ಭಾಷೆ, ಸಂಸ್ಕೃತಿ, ಸಂಗೀತ, ಸಂಗೀತಗಾರರು, ರಾಜ್ಯ ಮತ್ತು ಜನರಿಗೆ ಅಭೂತಪೂರ್ವ ಪ್ರೀತಿಯನ್ನು ನೀಡಿದ್ದೇನೆ. ವಾಸ್ತವವಾಗಿ ನಾನು ಹಿಂದಿ ಸೇರಿದಂತೆ ಇತರ ಭಾಷೆಗಳ ಹಾಡುಗಳಿಗಿಂತ ಕನ್ನಡ ಹಾಡುಗಳನ್ನು ಹೆಚ್ಚು ಗೌರವಿಸುತ್ತೇನೆ. ಕರ್ನಾಟಕದಲ್ಲಿ ಆಯೋಜಿಸುವ ಪ್ರತಿ ಮ್ಯೂಸಿಕ್ ಕನ್ಸರ್ಟ್ಗಳಲ್ಲಿ ನಾನು ಗಂಟೆಗೂ ಹೆಚ್ಚು ಕಾಲ ಕನ್ನಡ ಹಾಡುಗಳನ್ನು ಹಾಡುತ್ತೇನೆ.
ಇದನ್ನೂ ಓದಿ :ನಟ ಉಪೇಂದ್ರ ಆರೋಗ್ಯದಲ್ಲಿ ಏರುಪೇರು: ಆಸ್ಪತ್ರೆಗೆ ದಾಖಲು
ಆದರೆ, ನಾನು ಯಾರಿಂದಲೂ ಅವಮಾನವನ್ನು ಸಹಿಸಿಕೊಳ್ಳುವಷ್ಟು ಚಿಕ್ಕವನಲ್ಲ. ನನಗೆ ಈಗ 51 ವರ್ಷ, ನನ್ನ ಜೀವನದ ದ್ವಿತೀಯಾರ್ಧದಲ್ಲಿದ್ದೇನೆ. ಸಾವಿರಾರು ಜನರ ಮುಂದೆ ಕೆಲವರು ನನ್ನನ್ನು ಬೆದರಿಸಿದರು, ಅದಕ್ಕೆ ನಾನು ಅವರ ಮೇಲೆ ಕೋಪಗೊಂಡೆ. ಅಲ್ಲಿದ್ದ ಜನರು ಕೂಡ ಅವರನ್ನು ಬಾಯಿಮುಚ್ಚಿಕೊಳ್ಳುವಂತೆ ಕೇಳಿದರು.
ನಾನು ಕೂಡ ಗಲಾಟೆ ಮಾಡುತ್ತಿದ್ದವರಿಗೆ ವಿನಮ್ರದಿಂದ, ಪ್ರೀತಿಯಿಂದ ಕಾರ್ಯಕ್ರಮ ಇದೀಗ ಪ್ರಾರಂಭವಾಗಿದೆ. ನಾನು ನಿಮ್ಮನ್ನು ನಿರಾಸೆಗೊಳಿಸುವುದಿಲ್ಲ ಎಂದು ಹೇಳಿದೆ. ಈಗಿದ್ದಾಗ ಅವರು ನನಗೆ ನಾನು ಅಂದು ಕೊಂಡ ರೀತಿ ಕಾರ್ಯಕ್ರಮ ನಡೆಸಿಕೊಡಲು ಬಿಡಬೇಕಿತ್ತು. ಪ್ರತಿಯೊಬ್ಬ ಗಾಯಕನೂ ಕೂಡ ತಾನೂ ಹಾಡುವ ಹಾಡಿನ ಪಟ್ಟಿಯನ್ನು ತಯಾರಿಸಿರುತ್ತಾನೆ, ತಂತ್ರಜ್ಙರು, ಸಂಗೀತಗಾರನೊಂದಿಗೆ ಸಮನ್ವಯದಿಂದ ಕಾರ್ಯಕ್ರಮ ನಡೆಯುತ್ತದೆ. ಆದರೆ ಅವರು ಗದ್ದಲ ಸೃಷ್ಟಿಸಿ, ಬೆದರಿಸಲು ಹಠ ಹಿಡಿದರು. ಇದರಲ್ಲಿ ತಪ್ಪು ಯಾರದು ಎಂದು ಸೋನು ನಿಗಮ್ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ :ಸುಹಾಸ್ ಶೆಟ್ಟಿ ಕೊಲೆ ಮಾಸುವ ಮುನ್ನವೇ ಮೈಸೂರಿನಲ್ಲಿ ಮತ್ತೊಬ್ಬ ರೌಡಿಶೀಟರ್ನ ಬರ್ಬರ ಹ*ತ್ಯೆ
ಮುಂದುವರಿದು ಬರೆದುಕೊಂಡಿರುವ ಸೋನು ನಿಗಮ್ ‘ನಾನು ದೇಶಭಕ್ತನಾಗಿರುವೆ. ಅಂದು ಕಾರ್ಯಕ್ರಮದಲ್ಲಿ ಗದ್ದಲ ಸೃಷ್ಟಿಸಿದವರಿಗೆ ನಾನು ಶಿಕ್ಷಣ ನೀಡಬೇಕಿತ್ತು. ಅದರಲ್ಲೂ ಪಹಲ್ಗಾಮ್ ದಾಳಿಯ ನಂತರ ನಾನು ಜಾತಿ, ಭಾಷೆ, ಧರ್ಮ ಅಂತ ಬೇರ್ಪಡಬಾರದು ಎಂದು ನಾನು ಅವರಿಗೆ ತಿಳಿಸಬೇಕಿತ್ತು. ನಾನು ಮಾಡುವ ಕೆಲಸಕ್ಕೆ ಅಲ್ಲಿದ್ದ ಸಾವಿರಾರು ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಬೆಂಬಲಿಸಿದರು. ಘಟನೆ ಆದ ನಂತರ ಒಂದು ಗಂಟೆಗೂ ಹೆಚ್ಚು ಕಾಲ ನಾನು ಕನ್ನಡ ಹಾಡು ಹಾಡಿದೆ. ಇವೆಲ್ಲವೂ ಸಾಮಾಜಿಕ ಜಾಲತಾಣದಲ್ಲಿ ಇವೆ.
ಇದನ್ನೂ ಓದಿ :KPSC ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್..?; ಮತ್ತೊಂದು ಗಂಭೀರ ಆರೋಪ..!
ಇಲ್ಲಿ ತಪ್ಪು ಯಾರದ್ದು ಎಂದು ನಿರ್ಧರಿಸುವ ಜವಾಬ್ದಾರಿಯನ್ನು ಕರ್ನಾಟಕದ ಪ್ರಜ್ಞಾವಂತ ಜನರಿಗೆ ಬಿಡುತ್ತೇನೆ. ನೀವು ನೀಡುವ ತೀರ್ಪನ್ನು ಸೌಜನ್ಯದಿಂದ ಸ್ವೀಕರಿಸುತ್ತೇನೆ. ಕರ್ನಾಟಕದ ಕಾನೂನು ಸಂಸ್ಥೆಗಳು ಮತ್ತು ಪೊಲೀಸರನ್ನು ನಾನು ಸಂಪೂರ್ಣವಾಗಿ ಗೌರವಿಸುತ್ತೇನೆ ಮತ್ತು ನಂಬುತ್ತೇನೆ ಮತ್ತು ನನ್ನಿಂದ ನಿರೀಕ್ಷಿಸುವ ಎಲ್ಲವನ್ನೂ ಪಾಲಿಸುತ್ತೇನೆ. ನಾನು ಕರ್ನಾಟಕದಿಂದ ದೈವಿಕ ಪ್ರೀತಿಯನ್ನು ಪಡೆದಿದ್ದೇನೆ ಮತ್ತು ನಿಮ್ಮ ತೀರ್ಪಿನ ಹೊರತಾಗಿಯೂ ಯಾವುದೇ ದುರುದ್ದೇಶವಿಲ್ಲದೆ ಅದನ್ನು ಯಾವಾಗಲೂ ಪಾಲಿಸುತ್ತೇನೆ.
ಧನ್ಯವಾದಗಳು, ಸೋನು ನಿಗಮ್. ಎಂದು ಬರೆದುಕೊಂಡಿದ್ದಾರೆ.


