Friday, November 22, 2024

5ನೇ ದಿನಕ್ಕೆ ಕಾಲಿಟ್ಟ ಶ್ರೀ ಪ್ರಣವಾನಂದ ಸ್ವಾಮೀಜಿ ಪಾದಯಾತ್ರೆ

ಕಲಬುರಗಿ : ಆರ್ಯ ಮತ್ತು ಈಡಿಗಾ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ಶರಣಬಸವೇಶ್ವರ ಮಠದ ಪೀಠಾಧಿಪತಿ ಶ್ರೀ ಪ್ರಣವಾನಂದ ಸ್ವಾಮೀಜಿ ನಡೆಸುತ್ತಿರುವ ಪಾದಯಾತ್ರೆ ಇಂದು ಐದನೇ ದಿನಕ್ಕೆ ಕಾಲಿಟ್ಟಿದ್ದು, ಶಹಬಾದ್ ಪಟ್ಟಣಕ್ಕೆ ಪಾದಯಾತ್ರೆ ಆಗಮಿಸಿದೆ. ಶಹಬಾದ್ ಕ್ರಾಸ್‌ನಲ್ಲಿ ತಾಲೂಕ ಆರ್ಯ ಈಯ ಸಮಾಜದ ವತಿಯಿಂದ ಶ್ರೀ ಪ್ರಣವಾನಂದ ಸ್ವಾಮೀಜಿ‌ಗಳನ್ನ ಭರ್ಜರಿಯಾಗಿ ಸ್ವಾಗತಿಸಿದರು. ಇನ್ನೂ ಇದೇ ವೇಳೆ ಪವರ್ ಟಿವಿ ಜೊತೆ ಮಾತನಾಡಿದ ಶ್ರೀ ಪ್ರಣವಾನಂದ ಸ್ವಾಮೀಜಿ, ಆರ್ಯ ಈಡಿಗಾ ಸಮಾಜದ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ಪ್ರತ್ಯೇಕ ಅಭಿವೃದ್ಧಿ ನಿಗಮ ಸ್ಥಾಪನೆ, ಐನೂರು ಕೋಟಿ ರೂಪಾಯಿಗಳ ಮೀಸಲು ಸಮಾಜದ ಕುಲಕಸುಬು ಸೇಂಧಿ ಇಳಿಸುವುದು ಹಾಗೂ ಮಾರಾಟ ಮಾಡವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿ ನಾವು ಕೈಗೊಂಡಿರುವ ಪಾದಯಾತ್ರೆ ಬಗ್ಗೆ ಸರ್ಕಾರ ನಿರ್ಲಕ್ಷ್ಯ ವಹಿಸುತ್ತಿರುವುದಕ್ಕೆ ಕಿಡಿಕಾರಿದರು. ನಮ್ಮ ಬೇಡಿಕೆಗಳ ಈಡೇರಿಕೆಗೆ ಸರ್ಕಾರ ಸ್ಪಷ್ಟವಾದ ನಿಲವು ತಾಳಬೇಕು, ಈಗಾಗಲೇ ಕಲ್ಯಾಣ ಕರ್ನಾಟಕ ಭಾಗದಲ್ಲಿ ಸರ್ಕಾರದ ವಿರುದ್ಧ ಓಪಿನಿಯನ್ ಹೋಗುತ್ತಿದೆ ಎಂದರು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಹಿಂದೂಗಳಿದ ಸಮಾಜಗಳು ಸರ್ಕಾರವನ್ನ ಕೈಬಿಡುವ ಪರಿಸ್ಥಿತಿ ಕಂಡು ಬರುತ್ತಿದ್ದು, ಅದರಂತೆ ನಾವು ಕೂಡ ಸರ್ಕಾರವನ್ನ ಕೈಬಿಡುವ ಕುರಿತು ಚಿಂತಿಸಲಾಗುತ್ತಿದೆ ಅಂತಾ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು. ಇನ್ನೂ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸದೇ ಹೋದರೆ ಸಮುದಾಯದ ಶಕ್ತಿ ಏನೆಂಬುದು ತೋರಿಸುತ್ತೇವೆ ಅಂತಾ ಶ್ರೀ ಪ್ರಣವಾನಂದ ಸ್ವಾಮೀಜಿ ಎಚ್ಚರಿಕೆ ನೀಡಿದರು.

ಇನ್ನೂ ಕೆಂಡದಂತಹ ಬಿಸಿಲಿನಲ್ಲಿ ಶ್ರೀ ಪ್ರಣವಾನಂದ ಸ್ವಾಮೀಜಿಗಳು ಕೈಗೊಂಡಿರುವ ಪಾದಯಾತ್ರೆ ಬಗ್ಗೆ ಮತ್ತು ಆರ್ಯ ಈಡಿಗಾ ಸಮಾಜವನ್ನ ಕಡೆಗಣಿಸುತ್ತಿರುವುದಕ್ಕೆ ಸರ್ಕಾರ ವಿರುದ್ಧ ಸಮಾಜದ ಜನರ ಆಕ್ರೋಶ ಮತ್ತಷ್ಟು ಹೆಚ್ಚಾಗುವಂತೆ ಮಾಡಿದೆ.. ಮೇ 5 ರಂದು ಚಿಂಚೋಳಿ ಪಟ್ಟಣದಿಂದ ಆರಂಭವಾಗಿರೋ ಪಾದಯಾತ್ರೆ ಮೇ 11 ರಂದು ಕಲಬುರಗಿ ಡಿಸಿ ಕಚೇರಿ ಮುಂದೆ ಮುಕ್ತಾಯಗೊಳ್ಳಲಿದೆ. ಪಾದಯಾತ್ರೆ ಕೈಗೊಂಡು ಐದು ದಿನಗಳು ಕಳೆದ್ರು ಸಜ ಸರ್ಕಾರದ ಯಾವೊಬ್ಬ ಪ್ರತಿನಿಧಿ ಬಂದು ಶ್ರೀ ಪ್ರಣವಾನಂದ ಸ್ವಾಮೀಜಿ ಆರೋಗ್ಯ ವಿಚಾರಿಸಿಲ್ಲ. ಇದರ ಜೊತೆಗೆ ಹಿಂದೂಳಿದ ಆರ್ಯ ಈಡಿಗಾ ಸಮಾಜವನ್ನ ಸರ್ಕಾರ ಸಂಪೂರ್ಣ ನಿರ್ಲಕ್ಷ್ಯ ಮಾಡುತ್ತಿದ್ದು, ನಮ್ಮ ಸಮಾಜಕ್ಕೆ ಪ್ರತ್ಯೇಕ ಅಭಿವೃದ್ಧಿ ನಿಗಮ, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಅಧ್ಯಯನ ಪೀಠ, ಸಮಾಜದ ಕುಲಕಸುಬು ಸೇಂಧಿ ಇಳಿಸುವುದು ಮತ್ತು ಮಾರಾಟ ಮಾಡುವ ಕೆಲಸಕ್ಕೆ ಅನುಮತಿ ಸೇರಿದಂತೆ ಸಮಾಜದ ಬೇಡಿಕೆಗಳು ಈಡೇರಿಸುವರೆಗೆ ಶ್ರೀಗಳ ಹೋರಾಟಕ್ಕೆ ನಮ್ಮ ಬೆಂಬಲ ಇರುತ್ತೆ ಅಂತಾ ಆರ್ಯ ಈಡಿಗಾ ಸಮಾಜದ ರಾಯಚೂರು ಜಿಲ್ಲಾಧ್ಯಕ್ಷ ಮಹೇಶ್ ಗೌಡ ಹೇಳಿದರು.

ಒಟ್ಟಿನಲ್ಲಿ ಕಳೆದ ಐದು ದಿನಗಳಿಂದ ತಮ್ಮ ಆರೋಗ್ಯ ಲೆಕ್ಕಿಸದೆ ಅತ್ಯಂತ ಹಿಂದೂಳಿದ ಸಮಾಜವೆಂದೇ ಕರೆಯಲ್ಪಡುವ ಆರ್ಯ ಈಡಿಗಾ ಸಮಾಜದ ಸಮಗ್ರ ಅಭಿವೃದ್ಧಿಗಾಗಿ ಶ್ರೀ ಪ್ರಣವಾನಂದ ಸ್ವಾಮೀಜಿ ಕೈಗೊಂಡಿರುವ ಪಾದಯಾತ್ರೆ ಬಗ್ಗೆ ಸರ್ಕಾರ ಮೌನಕ್ಕೆ ಜಾರಿದ್ದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗ್ತಿದೆ. ಇನ್ನಾದರೂ ಸರ್ಕಾರ ಶ್ರೀಗಳ ಪಾದಯಾತ್ರೆಗೆ ಬ್ರೇಕ್ ಹಾಕಿ ಬೇಡಿಕೆಗಳನ್ನ ಈಡೇರಿಸಲಿ ಅನ್ನೊದು ಸಮಾಜದ ಜನರ ಆಗ್ರಹವಾಗಿದೆ.

RELATED ARTICLES

Related Articles

TRENDING ARTICLES