ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಬೃಹತ್ ಗಾತ್ರದ ಕಾಳಿಂಗ ಸರ್ಪವನ್ನು ಸೆರೆ ಹಿಡಿಯಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೆಳಗೂರಿನ ಟೀ ಫ್ಯಾಕ್ಟರಿಯ ಬಳಿ ಕಳೆದ 15 ದಿನಗಳಿಂದಾ ಸುಮಾರು 12 ಅಡಿ ಬೃಹತ್ ಗಾತ್ರದ ಕಾಳಿಂಗ ಸರ್ಪ ಸಂಚಾರ ಮಾಡುತ್ತಲೆ ಇತ್ತು. ಈ ಟೀ ಎಸ್ವೇಟ್ ನಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಹಲವಾರು ಬಾರಿ ಕಾಣಿಸಿಕೊಂಡಿದ್ದು, ಭಯದಿಂದಲೇ ತೋಟದಲ್ಲಿ ಕೆಲಸ ಮಾಡುತ್ತಿದ್ದರು. ಆದರೆ ನಿರಂತರವಾಗಿ ಕಳೆದ 15 ದಿನಗಳಿಂದಾ ಈ ಕಾಳಿಂಗ ಇಲ್ಲೇ ಸುತ್ತ ಮುತ್ತಾ ಸಂಚಾರ ಮಾಡುತ್ತಿರೋದನ್ನು ನೋಡಿ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಕೆಲಸ ಮಾಡಲು ಭಯ ಪಡುತ್ತಿದ್ದರು. ಈ ದಿನ ಮತ್ತೆ ಈ ಕಾಳಿಂಗ, ಟೀ ಎಸ್ವೇಟ್ ನಲ್ಲಿ ಕಾಣಿಸಿಕೊಂಡ ಹಿನ್ನಲೆ, ಕೂಡಲೇ ತೋಟದಲ್ಲಿ ಕೆಲಸ ಮಾಡುವ ಕಾರ್ಮಿಕರು ಉರಗ ತಜ್ಞ ಸ್ನೇಕ್ ಆರೀಫ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ಕೂಡಲೇ ಸ್ಥಳಕ್ಕೆ ಆಗಮಿಸಿದ ಸ್ನೇಕ್ ಆರೀಫ್ ಅವರು ಸುಮಾರು 30 ನಿಮಿಷಗಳ ಕಾಲ ಕಾರ್ಯಚರಣೆ ಮಾಡಿ ಈ ಕಾಳಿಂಗ ಸರ್ಪ ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಸೆರೆ ಹಿಡಿದ ಈ ಕಾಳಿಂಗ ಸರ್ಪವನ್ನು ಸುರಕ್ಷಿತವಾಗಿ ಮೂಡಿಗೆರೆ ಅರಣ್ಯ ಅಧಿಕಾರಿಗಳ ಸಮ್ಮುಖದಲ್ಲಿ ಚಾರ್ಮಾಡಿ ಘಾಟ್ ಅರಣ್ಯ ಪ್ರದೇಶದಲ್ಲಿ ಬಿಡಲಾಗಿದೆ.
ಸಚಿನ್ ಶೆಟ್ಟಿ ಚಿಕ್ಕಮಗಳೂರು.