ಮಲೇಷಿಯಾ : ಕೌಲಾಲಂಪುರದ ಬೇಯುಮಾಸ್ ಓವಲ್ ಮೈದಾನದಲ್ಲಿ ನಡೆಯುತ್ತಿರುವ ಅಂಡರ್-19 ಮಹಿಳಾ ಟಿ20 ವಿಶ್ವಕಪ್ನ ಫೈನಲ್ ಪಂದ್ಯದಲ್ಲಿ ಭಾರತದ ಮಹಿಳಾ ತಂಡ ಗೆದ್ದು ಬೀಗಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಬೀಸಿದ ಸೌತ ಆಫ್ರಿಕಾ ತಂಡ 82ರನ್ಗಳಿಗೆ ತನ್ನೆಲ್ಲಾ ವಿಕೆಟ್ಗಳನ್ನು ಕಳೆದುಕೊಂಡು ಸರ್ವಪತನ ಕಂಡಿತು. ಭಾರತದ ಪರ ಗಂಗೋಡಿ ತ್ರಿಷಾ 3 ವಿಕೆಟ್ ಪಡೆದರೆ, ವೈಷ್ಣವಿ ಶರ್ಮಾ, ಆಯುಷಿ ಶುಕ್ಲಾ, ಪರುಣಿಕ ಸಿಸೋಡಿಯಾ ತಲಾ 2 ವಿಕೆಟ್ ಪಡೆದು ಮಿಂಚಿದರು.
ಇದನ್ನೂ ಓದಿ :ಸಿಎಂ ಸಿದ್ದರಾಮಯ್ಯರಿಗೆ ಮಂಡಿ ನೋವು: ಚಿಕಿತ್ಸೆ ಪಡೆದು ಮನೆಗೆ ತೆರಳಿದ ಟಗರು
ಸುಲಭ ಮೊತ್ತದ ಗುರಿ ಬೆನ್ನತ್ತಿದ ಭಾರತ ತಂಡ ಕೇವಲ 11.2 ಓವರ್ಗಳಲ್ಲೆ ಗೆದ್ದು ಬೀಗಿದ್ದು. ಭಾರತದ ಪರ ಗಂಗೋಡಿ ತ್ರಿಷಾ (44) ಮತ್ತು ಸಾನಿಯಾ ಚಿಲ್ಕೆ(26) ರನ್ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.


