ಪಶ್ಚಿಮ ಬಂಗಾಳ: 10 ಲಕ್ಷ ರೂಪಾಯಿಗೆ ಗಂಡನ ಕಿಡ್ನಿಯನ್ನು ಮಾರಿದ ಹೆಂಡತಿಯೊಬ್ಬಳು, ಹಣದೊಂದಿಗೆ ಪ್ರಿಯಕರನ ಜೊತೆ ರಾತ್ರೋ ರಾತ್ರಿ ಪರಾರಿಯಾಗಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದ್ದು. ಮನನೊಂದ ಗಂಡ ಹೆಂಡತಿ ವಿರುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ ಎಂದು ತಿಳಿದು ಬಂದಿದೆ.
ಹೌದು..ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಚಾನ್ಕ್ರಿಲ್ನಲ್ಲಿ ಘಟನೆ ನಡೆದಿದ್ದು. ಬರೋಬ್ಬರಿ 10 ಲಕ್ಷಕ್ಕೆ ಗಂಡನ ಒಂದು ಕಿಡ್ನಿಯನ್ನು ಮಾರಾಟ ಮಾಡಿದ್ದ ಮಹಿಳೆ ಹಣ ಕೈಗೆ ಸಿಗುತ್ತಿದ್ದಂತೆ ತನ್ನ ಪ್ರಿಯಕರನೊಂದಿಗೆ ರಾತ್ರೋರಾತ್ರಿ ಪರಾರಿಯಾಗಿದ್ದಾಳೆ.
ಇದನ್ನೂ ಓದಿ :ಕುಮಾರಸ್ವಾಮಿ ಚನ್ನಪಟ್ಟಣವನ್ನು ಅದ್ವಾನ ಮಾಡಿ ಹೋಗಿದ್ದಾರೆ: ಸಿ.ಪಿ ಯೋಗೇಶ್ವರ್
ಚಾನ್ಕ್ರಿಲ್ನಲ್ಲಿ ವರ್ಣಚಿತ್ರಕಾರನಾಗಿ ಕೆಲಸ ಮಾಡುತ್ತಿದ್ದ ಈತನಿಗೆ ಆತನ ಪತ್ನಿ ಕಿಡ್ನಿ ಮಾರಾಟ ಮಾಡುವಂತೆ ನಿರಂತರವಾಗಿ ಒತ್ತಡ ಹೇರುತ್ತಿದ್ದಳು. ಮಗಳ ವಿದ್ಯಾಬ್ಯಾಸಕ್ಕೆ ಆದಾಯ ಸಾಕಾಗುತ್ತಿಲ್ಲ ಎಂದು ದಿನವೂ ಪೀಡಿಸುತ್ತಿದ್ದಳು ಎಂದು ತಿಳಿದು ಬಂದಿದೆ. ಮಗಳ ಭವಿಷ್ಯದ ಬಗ್ಗೆ ಯೋಚನೆ ಮಾಡಿದ ಈತ ಕಿಡ್ನಿ ಮಾರಲು ಒಪ್ಪಿಕೊಂಡಿದ್ದನು. ನಂತರ ಈತನ ಕಿಡ್ನಿಯನ್ಚನು 10 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದರು ಎಂದು ತಿಳಿದು ಬಂದಿದೆ.
ಆದರೆ ಹಣ ಕೈ ಸೇರುತ್ತಿದ್ದಂತೆ ಕಿಲಾಡಿ ಹೆಂಡತಿ ಈ ಹಣವನ್ನು ಬೆಳಿಗ್ಗೆ ಬ್ಯಾಂಕಿಗೆ ಜಮಾ ಮಾಡುತ್ತೇನೆ ಎಂದು ಹೇಳಿ ತನ್ನ ಬಳಿ ಇರಿಸಿಕೊಂಡಿದ್ದಾಳೆ. ಬಳಿಕ ನಡು ರಾತ್ರಿ ಹಣದೊಂದಿ ಮನೆಬಿಟ್ಟು ಪ್ರಿಯಕರನ ಜೊತೆ ಓಡಿ ಹೋಗಿದ್ದಾಳೆ.
ಕೆಲವು ದಿನಗಳ ನಂತರ ಶುಕ್ರವಾರ, ತನ್ನ ಪತ್ನಿ ರವಿದಾಸ್ ಎಂಬ ವ್ಯಕ್ತಿಯೊಂದಿಗೆ ಬಾರೇಕ್ಪುರದ ಸುಭಾಷ್ ಕಾಲೋನಿಯಲ್ಲಿ ವಾಸಿಸುತ್ತಿರುವುದನ್ನು ತಿಳಿದ ಪತಿ ತಮ್ಮ ಕುಟುಂಬದೊಂದಿಗೆ ಅಲ್ಲಿಗೆ ಹೋಗಿದ್ದಾನೆ. ಆದರೆ ನಿನಗೆ ವಿಚ್ಛೇದನ ಪತ್ರಗಳನ್ನು ಕಳುಹಿಸಿ ಕೊಡುವುದಾಗಿ ಗಂಡನಿಗೆ ಬೆದರಿಕೆ ಹಾಕಿ ಕಳುಹಿಸಿದ್ದಾಳೆ. ಇದೀಗ ಪತಿ ಪತ್ನಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ಮುಂದೇನಾಗುತ್ತದೆ ಎಂಬುದು ಪೊಲೀಸರ ತನಿಖೆಯ ನಂತರವಷ್ಟೇ ತಿಳಿಯಲಿದೆ.


