ಮದುವೆ ಸಮಾರಂಭಕ್ಕೆ ಸಜ್ಜಾದ ರಾಷ್ಟ್ರಪತಿ ಭವನ: ಭದ್ರತಾ ಅಧಿಕಾರಿಗೆ ಖುಲಾಯಿಸಿದ ಅದೃಷ್ಟ

ದೆಹಲಿ: ರಾಷ್ಟ್ರಪತಿ ಭವನ ಇದೇ ಮೊದಲ ಬಾರಿ ಮದುವೆ ಸಮಾರಂಭಕ್ಕೆ ಸಜ್ಜಾಗುತ್ತಿದೆ. ಸಿಆರ್​ಪಿಎಫ್​ ಅಸಿಸ್ಟೆಂಟ್​ ಕಮಾಂಡೆಂಟ್​ ಪೂನಂ ಗುಪ್ತಾ ಎಂಬುವವರಿಗೆ ಈ ಅದೃಷ್ಟ ಖುಲಾಯಿಸಿದ್ದು. ಇದೇ ಫೆಬ್ರವರಿ 12 ರಂದು ವಿವಾಹ ಕಾರ್ಯ ನೆರವೇರಲಿದೆ ಎಂದು ತಿಳಿದು ಬಂದಿದೆ.

ರಾಷ್ಟ್ರಪತಿ ಭವನದ ಮದರ್ ಥೆರೆಸಾ ಕ್ರೌನ್ ಕಾಂಪ್ಲೆಕ್ಸ್‌ನಲ್ಲಿ ಫೆಬ್ರವರಿ 12ರಂದು ಮದುವೆ ನಡೆಯಲಿದ್ದು. ಈ ಮದುವೆಗೆ ವಿಶೇಷ ಆಹ್ವಾನಿತರಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಕೂಡ ಭಾಗವಹಿಸಲಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸಿಆರ್‌ಪಿಎಫ್ ಅಸಿಸ್ಟೆಂಟ್ ಕಮಾಂಡೆಂಟ್ ಅವನೀಶ್ ಜೊತೆ ಪೂನಂ ಗುಪ್ತಾ ಮದ್ವೆ ನಿಗದಿ ಆಗಿದ್ದು.  ಈ ಕಾರ್ಯಕ್ರಮದಲ್ಲಿ ಎರಡು ಕುಟುಂಬದ ವಿಶೇಷ ಆಹ್ವಾನಿತರು ಭಾಗಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ:ಅಂಡರ್​​ 19 ಮಹಿಳಾ ವಿಶ್ವಕಪ್​ನಲ್ಲಿ ಗೆದ್ದು ಬೀಗಿದ ಭಾರತ

ಪೂನಂ ಗುಪ್ತಾ ರಾಷ್ಟ್ರಪತಿ ಭವನ ಪಿಎಸ್​ಓ ಆಗಿ ಕಾರ್ಯನಿರ್ವಹಿಸುತ್ತಿದ್ದು. 74ನೇ ಗಣರಾಜ್ಯೋತ್ಸವ ಪರೇಡ್​ನಲ್ಲಿ ಭಾಗವಹಿಸಿದ್ದರು. 2018ರ ಯುಪಿಎಸ್‌ಸಿ ಸಿಆರ್‌ಪಿಎಫ್‌ ಪರೀಕ್ಷೆಯಲ್ಲಿ 81ನೇ ರ‍್ಯಾಂಕ್‌ ವಿಜೇಯರಾಗಿದ್ದರು. ಬಿಹಾರದ ನಕ್ಸಲ್‌ ಪೀಡಿತ ಪ್ರದೇಶಗಳಲ್ಲಿ ಸೇವೆ ಸಲ್ಲಿಸಿದ್ದ ಪೂನಂ ಆ ಬಳಿಕ ಕಠಿಣ ಪ್ರದೇಶಗಳಲ್ಲೂ ತಮ್ಮ ಕರ್ತವ್ಯ ನಿಷ್ಠೆ ಮೆರೆದು ಸೈ ಎನಿಸಿಕೊಂಡಿದ್ದರು.

ಜೊತೆಗೆ ಸೋಷಿಯಲ್‌ ಮೀಡಿಯಾದಲ್ಲೂ ತಮ್ಮದೇ ಅಭಿಮಾನಿ ಬಳಗ ಹೊಂದಿರುವ ಪೂನಂ, ಆಗಾಗ್ಗೆ ಮಹಿಳಾ ಸಬಲೀಕರಣ ಹಾಗೂ ಸ್ಫೋರ್ತಿದಾಯಕ ಸಂದೇಶಗಳನ್ನು ಪೋಸ್ಟ್‌ ಮಾಡುತ್ತಿರುತ್ತಾರೆ. ಜೊತೆಗೆ ಸಾರ್ವಜನಿಕರನ್ನು ಜಾಗೃತಗೊಳಿಸುವ ಕೆಲಸ ಮಾಡುತ್ತಾ ಬರುತ್ತಿದ್ದಾರೆ.

RELATED ARTICLES

Related Articles

TRENDING ARTICLES