ರಾಮನಗರ : ಚನ್ನಪಟ್ಟನ ಉಪಚುನಾವಣೆಯಲ್ಲಿ ಗೆಲುವು ನೀಡಿದ ಮತದಾರರಿಗೆ ಕಾಂಗ್ರೆಸ್ ಪಕ್ಷ ಕೃತಜ್ಙತಾ ಸಭೆ ಆಯೋಜಿಸಿದ್ದು. ಈ ಸಭೆಯಲ್ಲಿ ಮಾತನಾಡಿದ ಮಾಗಡಿ ಶಾಸಕ ಹೆಚ್.ಸಿ ಬಾಲಕೃಷ್ಣ ಮಾತನಾಡುವ ಭರದಲ್ಲಿ ಡಿಕೆ ಶಿವಕುಮಾರ್ರನ್ನು ಪರೋಕ್ಷವಾಗಿ ಮುಂದಿನ ಸಿಎಂ ಎಂದು ಹೇಳಿದರು.
ಕೃತಜ್ಞತಾ ಸಭೆಯಲ್ಲಿ ಮಾತನಾಡಿದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ‘ ಉಪಚುನಾವಣೆಯಲ್ಲಿ ಚನ್ನಪಟ್ಟಣ ಕ್ಷೇತ್ರದ ಜನರು ನಮ್ಮ ಕೈ ಹಿಡಿದಿದ್ದಾರೆ. ನಮ್ಮ ಅಭ್ಯರ್ಥಿ ಮಾಜಿ ಪ್ರಧಾನಿಗಳ ಮೊಮ್ಮಗ ಅಲ್ಲ.
ಸಾಧಾರಣ ಮೇಷ್ಟ್ರು ಮಗ, ಕ್ಷೇತ್ರದ ಅಭಿವೃದ್ಧಿ ಬಗ್ಗೆ ಚಿಂತನೆ ಇರೋ ವ್ಯಕ್ತಿ. ಇಂತಹ ವ್ಯಕ್ತಿಯನ್ನ ಕ್ಷೇತ್ರದ ಜನ ಆಯ್ಕೆ ಮಾಡಿ ಪಕ್ಷದ ಮರ್ಯಾದೆ ಹೆಚ್ಚಿಸಿದ್ದಾರೆ.
ಇದನ್ನೂ ಓದಿ :ಹಸುವಿನ ಕೆಚ್ಚಲು ಕೂಯ್ದವರ, ಕೈ-ಕಾಲುಗಳನ್ನು ಕಟ್ ಮಾಡುವ ಸಮಯ ಬರುತ್ತೆ : ಕೆ.ಎಸ್ ಈಶ್ವರಪ್ಪ
ಚನ್ನಪಟ್ಟಣ ಕ್ಷೇತ್ರದ ಅಭಿವೃದ್ಧಿಗೆ ಚುನಾವಣೆಗೂ ಮುನ್ನವೇ 500ಕೋಟಿ ಯೋಜನೆಗಳಿಗೆ ಚಾಲನೆ ಕೊಡಲಾಗಿತ್ತು. ಇಂದು ಸಿಎಂ ಬಂದಿದ್ದರೆ ಮತ್ತೊಂದಷ್ಟು ಅನುದಾನಕ್ಕೆ ಮನವಿ ಮಾಡಬಹುದಿತ್ತು. ಮುಖ್ಯಮಂತ್ರಿಗಳು ಇವತ್ತು ಬರ್ತಿಲ್ಲ, ಅದಕ್ಕೆ ನಮ್ಮ ಯೋಗೇಶಣ್ಣನಿಗೆ ಸ್ವಲ್ಪ ನಿರಾಶೆ ಆಗಿದೆ. ಬಜೆಟ್ ಬಳಿಕ ಮತ್ತೊಮ್ಮೆ ಅವರನ್ನ ಕ್ಷೇತ್ರಕ್ಕೆ ಕರೆತರುವ ಪ್ರಯತ್ನ ಮಾಡೋಣ.
ನಮಗೆ ಮತ ನೀಡಿದ ಜನರ ಋಣ ತೀರಿಸುವ ಕೆಲಸವನ್ನು ನಾವು ಮಾಡುತ್ತೇವೆ. ಈಗಿರುವ ಶಾಸಕರು ಹಿಂದಿನ ಶಾಸಕರ ರೀತಿಯಲ್ಲಿ 3 ತಿಂಗಳಿಗೋ, 6ತಿಂಗಳಿಗೆ ಕ್ಷೇತ್ರಕ್ಕೆ ಬರೋದಿಲ್ಲ. ನಿತ್ಯ ಇಲ್ಲೆ ಕೆಲಸ ಮಾಡಿಕೊಂಡು ಕ್ಷೇತ್ರದಲ್ಲಿರುತ್ತಾರೆ. ಎಂದು ಪರೀಕ್ಷವಾಗಿ ಕುಮಾರಸ್ವಾಮಿಗೆ ಟಾಂಗ್ ನೀಡಿದರು.


