Monday, February 3, 2025

ಕಡವೆ ಬೇಟೆಯಾಡಿದ ಬೇಟೆಗಾರರ ಬಂಧನ

ಚಿಕ್ಕಮಗಳೂರು : ಚಿಕ್ಕಮಗಳೂರಿನ ಮತ್ತೋಡಿ ಅರಣ್ಯ ವಲಯದಲ್ಲಿ ಹೆಣ್ಣು ಕಡವೆ ಹಾಗೂ ಒಂದು ಬರ್ಕಾವನ್ನು ಭೇಟೆಯಾಡಿದ ನಾಲ್ಕು ಜನ ಭೇಟೆಗಾರರನ್ನು ಮುತ್ತೋಡಿ ಅರಣ್ಯ ಸಿಬ್ಬಂಧಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮತ್ತೋಡಿ ಅರಣ್ಯ ವ್ಯಾಪ್ತಿಯಲ್ಲಿ ಹೆಣ್ಣು ಕಡವೆ ಹಾಗೂ ಬರ್ಕಾ ವನ್ನು ಭೇಟೆಯಾಡಿ ಭದ್ರಾ ವನ್ಯ ಜೀವಿ ವಲಯ ವ್ಯಾಪ್ತಿಯ ಹೊನ್ನಳ ತನಿಖಾ ಠಾಣೆಯ ಬಳಿ ಮಾರುತಿ ಸುಜೂಕಿ ಸೆಲೆರಿಯೋ ವಾಹನದಲ್ಲಿ ಅಕ್ರಮವಾಗಿ ಭೇಟೆಯಾಡಿದ ಕಡವೆ ಹಾಗೂ ಬರ್ಕಾವನ್ನು ಸಾಗಿಸುವ ವೇಳೆ ನಾಲ್ಕು ಜನ ಆರೋಪಿಗಳನ್ನು ಅರಣ್ಯ ಸಿಬ್ಬಂಧಿ ಅಧಿಕಾರಿಗಳು ಬಂಧಿಸಿದ್ದು, ಮಲ್ಲಂದೂರಿನ ಹರೀಶ್, ಅಣ್ಣಪ್ಪ, ಶಿರಗೂರಿನ ಮಂಜಪ್ಪ, ಕಡೆಬೈಲಿನ ದೀಕ್ಷಿತ್ ಎಂಬ ನಾಲ್ಕು ಜನರನ್ನು ಬಂಧಿಸಿದ್ದಾರೆ. ಈ ವೇಳೆ ಹೊನ್ನಾಳದ ಸತೀಶ್ ತಲೆ ಮರಿಸಿಕೊಂಡಿದ್ದು, ಈ ಆರೋಪಿಗಾಗಿ ಶೋಧ ಕಾರ್ಯ ಮುಂದುವರೆಸಲಾಗಿದೆ. ಈ ವೇಳೆ ಆರೋಪಿಗಳು ಕೃತ್ಯಕ್ಕೆ ಬಳಸಿದ ಬಂದೂಕು ಹಾಗೂ ಇತರೆ ವಸ್ತುಗಳನ್ನು ವಶಕ್ಕೆ ಪಡೆದಿದ್ದು, ಬಂಧಿತ ನಾಲ್ಕು ಜನ ಆರೋಪಿಗಳನ್ನು ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.

ಸಚಿನ್ ಶೆಟ್ಟಿ ಚಿಕ್ಕಮಗಳೂರು…

RELATED ARTICLES

Related Articles

TRENDING ARTICLES