ದಾವಣಗೆರೆ : ಸಿಎಂ ರಾಜಕೀಯ ಕಾರ್ಯದರ್ಶಿ ಎಂ ಪಿ ರೇಣುಕಾಚಾರ್ಯ ಅಂದರೆ ನಿಯಮ ಉಲ್ಲಂಘನೆ, ಒಂದಿಲ್ಲೊಂದು ವಿವಾದ.. ಅದಕ್ಕೆ ಮತ್ತೊಂದು ಸೇರ್ಪಡೆ ಎಂಬಂತೆ ಕೋವಿಡ್ ನಿಯಮ ಗಾಳಿಗೆ ತೂರಿ ಕೊರೋನಾ ಸೋಂಕಿತರಿಗೆ ರೇಣುಕಾಚಾರ್ಯ ಹೋಳಿಗೆ ಊಟ ಬಡಿಸಿ ಕೋವಿಡ್ ನಿಯಮ ಗಾಳಿಗೆ ತೂರಿದ್ದಾರೆ.
ದಾವಣಗೆರೆ ಜಿಲ್ಲೆಯ ನ್ಯಾಮತಿ ತಾಲೂಕಿನ ಮಾದನಬಾವಿಯಲ್ಲಿರುವ ಮೊರಾರ್ಜಿ ದೇಸಾಯಿ ವಸತಿ ನಿಲಯದಲ್ಲಿರುವ ಕೋವಿಡ್ ಕೇರ್ ಸೆಂಟರ್ ಗೆ ಹಾಗೂ ಹೊನ್ನಾಳಿ ಸರ್ಕಾರಿ ಆಸ್ಪತ್ರೆ ಸಿಬ್ಬಂದಿ ಹಾಗೂ ಕೊರೋನಾ ಸೋಕಿಂತರು ಸೇರಿ ಸುಮಾರು 150 ಮಂದಿಗೆ ಊಟ ನೀಡಿದ್ದಾರೆ, ಊಟ ನೀಡಿದರೆ ತಪ್ಪಿಲ್ಲ, ಆದರೆ ಕೋವಿಡ್ ನಿಯಮ ಉಲ್ಲಂಘಿಸಿ ಕೋವಿಡ್ ವಾರ್ಡ್ ಗೆ ಧಾವಿಸಿ ಸ್ವತಃ ರೇಣುಕಾಚಾರ್ಯ ಅವರೇ ಊಟ ಬಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಹೋಳಿಗೆ ಊಟವೇ ನೀಡುಬೇಕು ಎಂದಿದ್ದರೆ ಕೋವಿಡ್ ಕೇರ್ ಸೆಂಟರ್ ಕೌಂಟರ್ ಮೂಲಕ ಆಸ್ಪತ್ರೆಗೆ ನೀಡಬಹುದಿತ್ತು, ಅಲ್ಲಿನ ಸಿಬ್ಬಂದಿಗಳು ಪಿಪಿಇ ಕಿಟ್ ಧರಿಸಿ ಸುರಕ್ಷಿತವಾಗಿ ಊಟ ಬಡಿಸುತ್ತಿದ್ದರು, ಆದರೆ ಇದೆಲ್ಲವನ್ನು ಗಾಳಿಗೆ ತೂರಿರುವ ರೇಣುಕಾಚಾರ್ಯ ಒಂದು ಕೈಲಿ ಮೊಬೈಲ್ ಇನ್ನೊಂದು ಕೈಲಿ ಹೋಳಿಗೆ ಊಟ ಬಡಿಸುತ್ತಿರುವ ದೃಶ್ಯ ವೈರಲ್ ಆಗಿದೆ. ರೇಣುಕಾಚಾರ್ಯ ಪ್ರಚಾರಕ್ಕಾಗಿ ಪದೇ ಪದೇ ಕೋವಿಡ್ ನಿಯಮ ಉಲ್ಲಂಘಿಸುತ್ತಿದ್ದರು, ದಾವಣಗೆರೆ ಜಿಲ್ಲಾಡಳಿತ ಮಾತ್ರ ಕಣ್ಮುಚ್ಚಿ ಕುಳಿತಿರುವುದು ವಿಪರ್ಯಾಸ..