ವಿಜಯಪುರ : ಆಲಮಟ್ಟಿಯ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯಕ್ಕೆ ಇಂದು ಸಿ.ಎಂ ಯಡಿಯೂರಪ್ಪ ಬಾಗಿನ ಅರ್ಪಿಸಿದರು. ಇನ್ನೂ ಸಿ.ಎಂ ಬರುವ ಮುನ್ನ ವೈಮಾನಿಕ ಸಮಿಕ್ಷೆ ಮಾತ್ರ ನಡೆಸಿ ಅಧಿಕಾರಿಗಳ ಹಾಗೂ ಜನ ಪ್ರತಿನಿಧಿಗಳ ಸಭೆ ಕರೆದು ಪ್ರವಾಹದ ಹಾನಿ ಕುರಿತು ಪರಿಶೀಲನೆ ನಡೆಸುತ್ತಾರೆ ಎನ್ನಲಾಗಿತ್ತು. ಇನ್ನೂ ಸಿ.ಎಂ, ಟಿ ಪಿ ಯಲ್ಲಿ ಸಹಿತ ಬಾಗಿನ ಅರ್ಪಣೆ ಕುರಿತು ಮಾಹಿತಿ ಇರಲಿಲ್ಲ, ಆದರೆ ಹೆಲಿಪ್ಯಾಡ್ ಮೂಲಕ ಆಗಮಿಸಿದ ಸಿ.ಎಂ ನೇರವಾಗಿ ಜಲಾಶಯಕ್ಕೆ ತೆರಳಿ ಬಾಗಿನ ಅರ್ಪಿಸಿದರು. ಇದೇ ಸಂದರ್ಭದಲ್ಲಿ ಡಿ.ಸಿ.ಎಂ ಗೋವಿಂದ್ ಕಾರಜೋಳ, ಸಚಿವರಾದ ಆರ್ ಅಶೋಕ್, ಬಸವರಾಜ್ ಬೊಮ್ಮಾಯಿ, ಸೇರಿದಂತೆ ವಿಜಯಪುರ ಬಾಗಲಕೋಟೆ ಜನ ಪ್ರತಿನಿಧಿಗಳು ಸಹಿತ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು..