ಬಾಗಲಕೋಟೆ : ಉತ್ತರ ಕರ್ನಾಟಕದ ಬೆಳಗಾವಿ, ಬಾಗಲಕೋಟೆ, ಗದಗ ಸೇರಿದಂತೆ ಅತಿವೃಷ್ಠಿಯಿಂದಾಗಿ ಹಾನಿಗೀಡಾದ ಪ್ರದೇಶಗಳಲ್ಲಿ ಸಿಎಂ ಬಿ.ಎಸ್.ವೈ ವೈಮಾನಿಕ ಸಮೀಕ್ಷೆ ನಡೆಸಿದ್ರು. ಸಿಎಂ ಬಿ.ಎಸ್.ವೈ ಗೆ ಗೃಹಸಚಿವ ಬಸವರಾಜ್ ಬೊಮ್ಮಾಯಿ, ಸಚಿವ ಆರ್ ಅಶೋಕ್, ರಮೇಶ್ ಜಾರಕಿಹೊಳಿ ಸಾಥ್ ನೀಡಿದ್ರು. ಕೃಷ್ಣಾ, ಘಟಪ್ರಭಾ, ಮಲಪ್ರಭಾ ನದಿ ಪ್ರವಾಹದಿಂದ ಹಾನಿಯಾದ ಪ್ರದೇಶಗಳ ವಸ್ತು ಸ್ಥಿತಿ ಮನಗೊಂಡ ಸಿಎಂ ಬಿ.ಎಸ್.ವೈ ವೈಮಾನಿಕ ಸಮೀಕ್ಷೆ ಬಳಿಕ ವಿಜಯಪುರ ಜಿಲ್ಲೆಯ ಆಲಮಟ್ಟಿಯಲ್ಲಿ ಪ್ರವಾಹ ಬಾಧಿತ ಪ್ರದೇಶಗಳ ಜನಪ್ರತಿನಿದಿಗಳು ಮತ್ತು ಅಧಿಕಾರಿಗಳ ಜೋತೆ ಸಭೆ ನಡೆಸಲಿದ್ದಾರೆ. ಅತಿವೃಷ್ಠಿಯಿಂದ ಆದ ನಷ್ಟದ ಕುರಿತು ಚರ್ಚೆ ನಡೆಸಿ ಪರಿಹಾರ ಕಲ್ಪಿಸುವ ಕಾರ್ಯಕ್ಕೆ ಸಿಎಂ ಆದೇಶ ನೀಡಲಿದ್ದಾರೆ..