ಬೆಂಗಳೂರು: ವಿಶಾಖಪಟ್ಟಣದಲ್ಲಿ ತಯಾರಾಗುವ ಹಾಶಿಶ್ ಆಯಿಲ್ಗೆ (ಮಾದಕ ದ್ರವ್) ಬೆಂಗಳೂರಲ್ಲಿ ಬೇಡಿಕೆ ಹೆಚ್ಚಾಗುತ್ತಿದೆ ಎಂಬ ಆತಂಕಕಾರಿ ಸುದ್ದಿ ಬೆಳಕಿಗೆ ಬಂದಿದೆ. 1 ಗ್ರಾಂ ಹ್ಯಾಶಿಶ್ ಆಯಿಲ್ ಬೆಲೆ ಬರೋಬ್ಬರಿ 3 ರಿಂದ 5 ಸಾವಿರ ರೂಪಾಯಿಯಾಗಿದ್ದು, ಡ್ರಗ್ಸ್, ಅಫೀಮು, ಗಾಂಜಾ, ಕೊಕೈನ್ ಬೆಲೆಗಿಂತ ಹೆಚ್ಚು!
ಈ ಮಾದಕ ದ್ರವ್ಯ ಸದ್ದಿಲ್ಲದೆ ಬಸ್ನಲ್ಲೇ ಸರಬರಾಜಾಗುತ್ತಿದ್ದು, ಐಟಿಬಿಟಿ ಉದ್ಯೋಗಿಗಳೇ ದಂಧೆಕೋರರ ಟಾರ್ಗೆಟ್ ಆಗಿದ್ದಾರೆ ಎಂದು ತಿಳಿದು ಬಂದಿದೆ.
ಈ ಕುರಿತಂತೆ ತೀವ್ರ ಕಾರ್ಯಾಚರಣೆ ಬಳಿಕ ಜಾಲ ಭೇದಿಸಿದ ಸುದ್ದುಗುಂಟೆಪಾಳ್ಯ ಪೊಲೀಸರು ಆರೋಪಿಗಳಾದ ಸುರಕತ್ತಿ ಪ್ರಭಾಕರ್, ಕೊರಳ ಕಾಮರಾಜ್ನ್ನು ಬಂಧಿಸಿದ್ದಾರೆ. ಬಂಧಿತರಿಂದ 950 ಗ್ರಾಂ ಹ್ಯಾಶಿಶ್ ಆಯಿಲ್, 3 ಕೆಜಿ ಗಾಂಜಾ ವಶ ಪಡಿಸಿಕೊಳ್ಳಲಾಯಿತು.