ಬೆಂಗಳೂರು : ಗುಜರಾತ್ ಟೈಟಾನ್ಸ್ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್ ತಂಡ ಭರ್ಜರಿ ಗೆಲುವು ಸಾಧಿಸಿತು. ಈ ಮೂಲಕ ಟೂರ್ನಿಯಲ್ಲಿ 3ನೇ ಗೆಲುವು ದಾಖಲಿಸಿತು. ಅಲ್ಲದೇ ಅಂಕಪಟ್ಟಿಯಲ್ಲಿ 6ನೇ ಸ್ಥಾನಕ್ಕೆ ಬಡ್ತಿ ಪಡೆಯಿತು.
ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ 89 ರನ್ಗೆ ಆಲೌಟ್ ಆಯಿತು.
90 ರನ್ಗಳ ಸುಲಭ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 8.4 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು ಗೆಲುವಿನ ನಗೆ ಬೀರಿತು. ಡೆಲ್ಲಿ ಪರ ಜಾಕ್ ಮೇಕ್ ಗಾರ್ಗ್ 20, ಹೋಪ್ 19 ಹಾಗೂ ನಾಯಕ ರಿಷಭ್ ಪಂತ್ 16 ರನ್ ಗಳಿಸಿದರು. ಗುಜರಾತ್ ಪರ ವಾರಿಯರ್ 2, ಜಾನ್ಸನ್ ಹಾಗೂ ರಶೀದ್ ಖಾನ್ ತಲಾ ಒಂದು ವಿಕೆಟ್ ಪಡೆದರು.
ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ತವರು ಅಂಗಳದಲ್ಲೇ ಅಲ್ಪ ಮೊತ್ತಕ್ಕೆ ಮುಗ್ಗರಿಸಿತು. ಗುಜರಾತ್ ಪರ ರಶೀದ್ ಖಾನ್ ಏಕಾಂಗಿ (31) ಹೋರಾಟ ನಡೆಸಿದರು. ಉಳಿದ ಬ್ಯಾಟರ್ಗಳು ಹೆಚ್ಚು ರನ್ ಗಳಿಸುವಲ್ಲಿ ವಿಫಲರಾದರು.
ಉಳಿದಂತೆ ನಾಯಕ ಶುಭ್ಮನ್ ಗಿಲ್ 8, ಅಭಿನವ್ ಮನೋಹರ್ 8, ಸಹಾ 2, ಸಾಯಿ ಸುದರ್ಶನ್ 12, ರಾಹುಲ್ ತೆವಾಟಿಯ 10, ಡೇವಿಡ್ ಮಿಲ್ಲರ್ ಹಾಗೂ ಮೋಹಿತ್ ಶರ್ಮಾ 2 ರನ್ ಗಳಿಸಿದರು. ಡೆಲ್ಲಿ ಪರ ಮುಕೇಶ್ 3, ಇಶಾಂತ್ ಶರ್ಮಾ ಹಾಗೂ ಸ್ಟಬ್ಸ್ ತಲಾ 2, ಅಕ್ಸರ್ ಪಟೇಲ್ ಒಂದು ವಿಕೆಟ್ ಪಡೆದರು.
Ensuring a quick finish, ft Rishabh Pant & Sumit Kumar 🙌
A comprehensive all-round performance from Delhi Capitals helps them register their 3️⃣rd win of the season 😎
Recap the match on @StarSportsIndia and @JioCinema 💻📱#TATAIPL | #GTvDC pic.twitter.com/c2pyHArwE7
— IndianPremierLeague (@IPL) April 17, 2024